6:11 PM Wednesday15 - January 2025
ಬ್ರೇಕಿಂಗ್ ನ್ಯೂಸ್
5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ… ಹಸುಗಳ ಕೆಚ್ಚಲು ಕೊಯ್ದ ‘ವ್ಯಾಘ್ರ’ನ ಬಂಧನ: ಬಿಹಾರ ಮೂಲದ ದುಷ್ಟನಿಗೆ ನ್ಯಾಯಾಂಗ ಬಂಧನ ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಮಂಗಳೂರಿನ ‘ಗೇಟ್ ವೇ’ ಪಂಪ್ ವೆಲ್ ಗೆ ಈ ಆಟೋ ಸ್ಟಾಂಡ್ ಶಾಪವೇ?: ಪಾಲಿಕೆ ಎಡವಟ್ಟಿನ ಬಗ್ಗೆ ಸಾರ್ವಜನಿಕರು ಏನು ಹೇಳುತ್ತಾರೆ?

18/02/2022, 11:50

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಉತ್ತರ ದಿಕ್ಕಿನಲ್ಲಿ ಮಂಗಳೂರಿನ ‘ಗೇಟ್ ವೇ’ ಎಂದೇ ಪರಿಗಣಿಸಲಾಗದ ಪಂಪ್ ವೆಲ್ ನಗರದ ಬೆಳೆಯುತ್ತಿರುವ ಜಂಕ್ಷನ್ ಗಳಲ್ಲಿ ಒಂದು. ಮಂಗಳೂರು- ಬೆಂಗಳೂರು, ಮಂಗಳೂರು- ಮುಂಬೈ ಹಾಗೂ ಮಂಗಳೂರು- ತಿರುವನಂತಪುರ ರಾಷ್ಟ್ರೀಯ ಹೆದ್ದಾರಿ ಈ ಜಂಕ್ಷನ್ ಮೂಲಕ ಹಾದು ಹೋಗುತ್ತದೆ. ಇಲ್ಲಿ ಸದಾ ವಾಹನಗಳು ಸಾಗುತ್ತಲೇ ಇರುತ್ತದೆ. ಜತೆಗೆ ಪಂಪ್ ವೆಲ್ ಕಿಷ್ಕಿಂಧೆ ತರಹ ಮಾರ್ಪಟ್ಟಿದೆ. ಇವೆಲ್ಲದರ ಜತೆಗೆ ಇಲ್ಲಿನ ಆಟೋ ಸ್ಟಾಂಡ್ ವೊಂದು ಹೊಸ ಸಮಸ್ಯೆಗೆ ಕಾರಣವಾಗಿದೆ.

ಕೆ.ಎಸ್.ಹೆಗ್ಡೆ ಸಂಸ್ಥೆಯ ಹೆಸರಿನಲ್ಲಿರುವ ಆಟೋ ನಿಲ್ದಾಣ ಜನರಿಗೆ ವರವಾಗುವ ಬದಲಿಗೆ ಶಾಪವಾಗಿ ಪರಿಣಮಿಸಿದೆ.

ಸದಾ ವಾಹನ ದಟ್ಟಯಿಂದ ಕೂಡಿರುವ ಹಾಗೂ ಮಂಗಳೂರಿನಿಂದ ಕಾಸರಗೋಡು ಕಡೆಗೆ ತೆರಳುವ ನಗರದ ಪಂಪಪವೆಲ್ ನಲ್ಲಿ ಇತ್ತೀಚಿಗೆ ಕೆ. ಎಸ್.ಹೆಗ್ಡೆ ಹೆಸರಿನ ಆಟೋ ಪಾರ್ಕ್ ನಿರ್ಮಿಸಲಾಗಿದೆ. ವಾಸ್ತವದಲ್ಲಿ ಇಲ್ಲಿ ಆಟೋ ಪಾರ್ಕಿಂಗ್ ಮೊದಲೇ ಇತ್ತು. ಆದರೆ ಇತ್ತೀಚೆಗೆ ಇಲ್ಲಿ ಆಟೋ ಚಾಲಕರಿಗೆ ಸ್ಟಾಂಡ್ ನಿರ್ಮಿಸಿ ಕೊಡಲಾಗಿದೆ. ದಿನದ ತುತ್ತಿಗಾಗಿ ದುಡಿಯುವ ಆಟೋ ಚಾಲಕರಿಗೆ  ನೆರಳು ಮತ್ತು ಸ್ವಚ್ಛತೆ ಒದಗಿಸುವ ನಿಟ್ಟಿನಲ್ಲಿ ಆಟೋ ಸ್ಟಾಂಡ್ ನಿರ್ಮಿಸಿಕೊಡುವುದು ಒಳ್ಳೆಯ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಕೆ.ಎಸ್. ಹೆಗ್ಡೆ ಸಂಸ್ಥೆಯ ಕಾರ್ಯ ಶ್ಲಾಘನೀಯ. ಆದರೆ ಮಂಗಳೂರು ಮಹಾನಗರಪಾಲಿಕೆ ಮತ್ತು ಮಂಗಳೂರು ನಗರ ಟ್ರಾಫಿಕ್ ಪೊಲೀಸ್ ವಿಭಾಗದವರು ಆಟೋ ಸ್ಟಾಂಡ್ ನಿರ್ಮಿಸಲು ಆಯ್ಕೆ ಮಾಡಿದ ಸ್ಥಳ ಸರಿ ಇಲ್ಲ ಎಂದು ಈ ಜಾಗದಲ್ಲಿ ನಿಂತು ಬಸ್ ಕಾಯುವ ನಿತ್ಯ ಪ್ರಯಾಣಿಕರು ಅಳಲು ವ್ಯಕ್ತಪಡಿಸುತ್ತಾರೆ. ಆಟೋ ಸ್ಟಾಂಡ್ ನಿರ್ಮಾಣಕ್ಕೆ ಮುನ್ನ ಸ್ಥಳ ಪರಿಶೀಲನೆ ನಡೆಸಬೇಕಾದ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂದೀಪ್ ಅವರು ಹೇಗೆ ಅವಕಾಶ ಮಾಡಿಕೊಟ್ಟರು? ಹಾಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಟ್ರಾಫಿಕ್ ಎಸಿಪಿ ನಟರಾಜ್ ಅವರು ಇದಕ್ಕೆ ಹೇಗೆ ಗ್ರೀನ್ ಸಿಗ್ನಲ್ ನೀಡಿದರು. ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

ಆಟೋ ಸ್ಟಾಂಡ್ ನಿಂದ ಬಸ್ ಪ್ರಯಾಣಿಕರಿಗೆ ಬಸ್ ಕಾಯಲು ನಿಂತಿಕೊಳ್ಳಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗೆ ಅಭಿಮುಖವಾಗಿ ಇಲ್ಲಿ ಪ್ರಯಾಣಿಕರು ನಿಂತರೆ ಇಲ್ಲಿನ ಕೆಲವು ಆಟೋ ಡ್ರೈವರ್ ಗಳು ಸಿಕ್ಕಾಪಟ್ಟೆ ಕೆಟ್ಟ ಪದಗಳಿಂದ ಬೈಯುತ್ತಾರೆ ಎಂದು ನೊಂದ ಪ್ರಯಾಣಿಕರು ರಿಪೋರ್ಟರ್ ಕರ್ನಾಟಕದ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ.

ಪ್ರತಿ ದಿನ ಇಲ್ಲಿ ದಿನಕ್ಕೆ ಸಾವಿರಾರು ಮಂದಿ ಬಸ್ಸಿಗೆ ಉರಿ ಬಿಸಿಲಿನಲ್ಲಿ ಕಾಯುತ್ತಾರೆ. ಹೆಂಗಸರು, ಮಕ್ಕಳು, ವೃದ್ಧರು ಬಸ್ ಕಾಯುವವರ ಸಾಲಿನಲ್ಲಿ ಇರುತ್ತಾರೆ. ಈ ಎಲ್ಲ ಪ್ರಯಾಣಿಕರಿಗೆ ಆಟೋ ನಿಲ್ದಾಣವು ತೊಡಕಾಗಿ ಪರಿಣಮಿಸಿದೆ. ಪ್ರಯಾಣಿಕರು ಇಲ್ಲಿ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ನಿಲ್ಲುತ್ತಾರೆ. ಅತ್ತ ಧರೆ, ಇತ್ತ ಪುಲಿ ಎನ್ನುವ ಪರಿಸ್ಥಿತಿ ನಾಗರಿಕರದ್ದಾಗಿದೆ. ಅದಲ್ಲದೆ ಬಸ್ಸಿಗೆ ಕಾಯುವ ಪ್ರಯಾಣಿಕರು ಆಟೋ ಚಾಲಕರ ಬೈಗುಳವನ್ನು ಪುಕ್ಕಟೆಯಾಗಿ ಕೇಳಬೇಕು.


ಪಂಪ್ ವೆಲ್ ಜಂಕ್ಷನ್ ನ ಎರಡು ಬದಿಯಲ್ಲಿಯೂ ಸಮರ್ಪಕವಾದ ಪ್ರಯಾಣಿಕರ ತಂಗುದಾಣ ನಿರ್ಮಿಸುವಲ್ಲಿ ಮಂಗಳೂರು ಮಹಾನಗರಪಾಲಿಕೆ ಕಳೆದ 30 ವರ್ಷಗಳಿಂದ ವಿಫಲವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಪುನರ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವ ಮಂಗಳೂರು ಮಹಾನಗರಪಾಲಿಕೆಯ ಮಾಂಡಲೀಕರಾದ ಮಾನ್ಯ ಮೇಯರ್ ಅವರು ಇತ್ತ ಗಮನಹರಿಸಬೇಕು.ಹಾಗೆ ಟ್ರಾಫಿಕ್ ಎಸಿಪಿ ಅವರು ಕೂಡ ಇಲ್ಲಿನ ಸಂಚಾರಿ ಅವ್ಯವಸ್ಥೆ ಕುರಿತು ಗಮನಹರಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು