1:20 PM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಕೊಟ್ಟಿಗೆಹಾರ ಪೇಟೆಯಲ್ಲಿ ಬಿಡಾಡಿ ದನಗಳ ಹಾವಳಿ: ಕಡಿವಾಣಕ್ಕೆ ಸಾರ್ವಜನಿಕರ ಒತ್ತಾಯ

17/02/2022, 16:51

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಟ್ಟಿಗೆಹಾರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು, ವರ್ತಕರು ಕಿರಿಕಿರಿ ಅನುಭವಿಸುವಂತಾಗಿದೆ.

ಇಲ್ಲಿನ ರಸ್ತೆಯಲ್ಲಿ 30ಕ್ಕೂ ಅಧಿಕ ಬಿಡಾಡಿ ದನಗಳು ರಸ್ತೆಯಲ್ಲಿ ಮಲಗಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಅತಿ ಹೆಚ್ಚು ಬಿಡಾಡಿ ದನಗಳು ಮಾಲೀಕರಿದ್ದರೂ ಅವುಗಳನ್ನು ಮೇಯಿಸಲು ಹೊಲಗಳಿಗೆ ಬಿಡದೇ ಅವುಗಳು ರಸ್ತೆ, ಬಸ್ ನಿಲ್ದಾಣ, ಅಂಗಡಿ ಬಾಗಿಲುಗಳ ಮುಂದೆ ಮಲಗಿ ಆಶ್ರಯ ಪಡೆಯುತ್ತಿವೆ. ಅಂಗಡಿ, ಬಸ್ ನಿಲ್ದಾಣದಲ್ಲಿ ಮಲಗಿ ಸಗಣಿ ಹಾಕಿ ಗಂಜಲವನ್ನು ಹಾಕಿ ಇಡೀ ಸ್ಥಳವನ್ನೇ ಕಲುಷಿತಗೊಳಿಸುತ್ತಿವೆ. 

ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಂತೂ ದನಗಳ ಗಂಜಲದಿಂದ ಬಸ್ ನಿಲ್ದಾಣ ಗಲೀಜಾಗಿದೆ. ಅಂಗಡಿ-ಮುಂಗಟ್ಟುಗಳ ವರ್ತಕರಿಗೆ ಬೆಳಿಗ್ಗೆ ಸಗಣಿ, ಗಂಜಲ ಎತ್ತಿ ಸ್ವಚ್ಚಗೊಳಿಸುವುದೇ ಒಂದು ಕಾಯಕವಾಗಿದೆ. ಅಲ್ಲದೇ ವಾಹನಗಳು ವೇಗವಾಗಿ ಸಂಚಾರಿಸುವ ವೇಳೆ ರಸ್ತೆಯಲ್ಲಿ ಅತ್ತಿತ್ತ ಓಡಾಡಿ ಬೈಕು,ಕಾರು,ಬಸ್ಸುಗಳ ಮುಂದೆ ಬಂದು ಅಪಘಾತಗಳಿಗೂ ಎಡೆಮಾಡಿಕೊಡುತ್ತಿವೆ. ದ್ವಿಚಕ್ರ ಸವಾರರಂತೂ ಜೀವವನ್ನು ಕೈಯಲ್ಲೇ ಇಟ್ಟು ವಾಹನವನ್ನು ಚಲಾಯಿಸಬೇಕಿದೆ. ರಸ್ತೆಯಲ್ಲಿ ಓಡಾಡುವ ಬಿಡಾಡಿ ದನಗಳಿಗೆ ಪಶು ಇಲಾಖೆ ವತಿಯಿಂದ ವಿಮೆ ಮಾಡಿ ಕಿವಿಗೆ ಗುರುತು ಪಟ್ಟಿ ಕೂಡ ಹಾಕಿದ್ದು ಆ ಕಿವಿ ಪಟ್ಟಿಗಳ ಮೂಲಕ ಬಿಡಾಡಿ ದನಗಳ ವಿಳಾಸ ಪತ್ತೆ ಹಚ್ಚಿ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹವಾಗಿದೆ.

ಪ್ರತಿನಿತ್ಯ ಸುಮಾರು ಬಿಡಾಡಿ ದನಗಳು ಕೊಟ್ಟಿಗೆಹಾರ ಪೇಟೆಯ ರಸ್ತೆ ಮಧ್ಯದಲ್ಲಿ ಮಲಗುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಬಿಡಾಡಿ ದನಗಳ ಹಾವಳಿಗೆ ಕಡೀವಾಣ ಹಾಕಬೇಕು’

ಸಂಜಯ್ ಗೌಡ ಕೊಟ್ಟಿಗೆಹಾರ, ಗ್ರಾಮಸ್ಥ,

ಇತ್ತೀಚಿನ ಸುದ್ದಿ

ಜಾಹೀರಾತು