ಇತ್ತೀಚಿನ ಸುದ್ದಿ
CBSE: 10, 12ನೇ ತರಗತಿ 2ನೇ ಅವಧಿಯ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಏ.26ರಿಂದ ಪರೀಕ್ಷೆ ಆರಂಭ
10/02/2022, 08:25
ಬೆಂಗಳೂರು(reporterkarnataka.com): ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಏಪ್ರಿಲ್ 26ರಿಂದ 2ನೇ ಅವಧಿಯ ಪರೀಕ್ಷೆಗಳನ್ನು ನಡೆಸಲಿದೆ ಎಂದು ಮಂಡಳಿಯು ಅಧಿಕೃತ ನೋಟಿಸ್ ನಲ್ಲಿ ಪ್ರಕಟಿಸಿದೆ.
ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು, ಸಿಬಿಎಸ್‌ಇಯ 10 ಮತ್ತು 12ನೇ ತರಗತಿಗಳ ಎರಡನೇ ಅವಧಿಯ ಮಂಡಳಿ ಪರೀಕ್ಷೆಗಳನ್ನು ಏಪ್ರಿಲ್ 26 ರಿಂದ ನಡೆಸಲಾಗುತ್ತದೆ ಎಂದು ತಿಳಿಸಿದೆ.
10 ಮತ್ತು 12 ನೇ ತರಗತಿಗಳ ಎರಡನೇ ಅವಧಿಯ ಬೋರ್ಡ್ ಪರೀಕ್ಷೆಯನ್ನು ಆಫ್ ಲೈನ್ ಮೋಡ್ ನಲ್ಲಿ ನಡೆಸಲಾಗುತ್ತದೆ ಎಂದು ಸಿಬಿಎಸ್ ಇ ಪರೀಕ್ಷಾ ನಿಯಂತ್ರಕರು ಇಂದು ತಿಳಿಸಿದ್ದಾರೆ.














