ಇತ್ತೀಚಿನ ಸುದ್ದಿ
ಮಹಾನ್ ಮಾನವತಾವಾದಿ, ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಇನ್ನಿಲ್ಲ
05/02/2022, 13:18
ಬಾಗಲಕೋಟೆ(reporterkarnataka.com):
ಮಹಾನ್ ಮಾನವತಾದಿ, ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ (76) ಹೃದಯಾಘಾತದಿಂದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ನಿಧನರಾದರು.
ವೇದ, ವಚನ ಮತ್ತು ಸೂಫಿ ಪರಂಪರೆ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು ವೇದ, ಪ್ರವಚನಕ್ಕೂ ಪ್ರಸಿದ್ಧರಾಗಿದ್ದರು.
ದೇವರು ಒಬ್ಬನೆ, ನಾಮ ಹಲವು ಎಂದು ಪ್ರತಿಪಾದಿಸುತ್ತಿದ್ದ ಸುತಾರ್ ಅವರು ಭಜನೆ, ಪ್ರವಚನಗಳಿಂದ “ಕನ್ನಡದ ಕಬೀರ” ಎಂದು ಹೆಸರುವಾಸಿಯಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಮಹಾನ್ ಮಾನವತಾವಾದಿಯಾಗಿದ್ದರು.
ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರ ಅಗಲಿಕೆಗೆ ಮುಖ್ಯಮಂತ್ರಿ ಸೇರಿದಂತೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.