ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಮಧ್ಯರಾತ್ರಿ ರಸ್ತೆಯಲ್ಲಿ ಕಸ ಎಸೆಯುವವರ ಮೈಚಳಿ ಬಿಡಿಸಿದ ಸ್ಥಳೀಯರು
05/02/2022, 11:47
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಧ್ಯರಾತ್ರಿ ಕಸ ಹಾಕುವವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು ಮೈಚಳಿ ಬಿಡಿಸಿದ ಘಟನೆ ಚಿಕ್ಕಮಗಳೂರು ನಗರದ 26ನೇ ವಾರ್ಡಿನಲ್ಲಿ ನಡೆದಿದೆ. ಸ್ಥಳೀಯ ಯುವಕರು ಕಾದು ಕುಳಿತು ಕಸ ಹಾಕಿದವರಿಂದಲೇ ಕಸ ಬಾಚಿಸಿದ್ದಾರೆ.
ರಾತ್ರಿಯಾಗೋದನ್ನ ಕಾದು ಖಾಲಿ ಜಾಗ, ಲೈಟ್‍ಕಂಬ, ರಸ್ತೆ ಬದಿ ಕಸ ಎಸೆದು ಹೋಗುತ್ತಿದ್ದರು
ಇದೀಗ ಮಧ್ಯರಾತ್ರಿವರೆಗೂ ಕಾದುಕುಳಿತ ಯುವಕರ ತಂಡ ಕಸ ಹಾಕಿದವರಿಂದಲೇ ಕಸ ಎತ್ತಿಸಿದ್ದಾರೆ. ಮತ್ತೆ ಕಸ ತಂದು ಸುರಿದರೇ ತುಂಬಿಕೊಂಡು ನಿಮ್ಮ ಮನೆ ಬಾಗಿಲಿಗೆ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ. ಮಧ್ಯರಾತ್ರಿ ರಸ್ತೆಗೆ ಹಾಕೋ ಬದಲು, ಹಗಲಲ್ಲಿ ಬರುವ ಕಸದ ಆಟೋಗಳಿಗೆ ಹಾಕುವಂತೆ ಸಲಹೆ ನೀಡಿದ್ದಾರೆ. ಚಿಕ್ಕಮಗಳೂರು ನಗರವನ್ನ ಸ್ವಚ್ಛವಾಗಿಡುವಂತೆ ಮನವಿ ಸ್ಥಳೀಯರು ಮನವಿ ಮಾಡಿದ್ದಾರೆ.