11:26 AM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಜಪ್ಪಿನಮೊಗರು: ಪುನರುತ್ಥಾನಗೊಂಡ ಪುರಾತನ ಕಂರ್ಬಿಸ್ಥಾನ ಕೆರೆ ಉದ್ಘಾಟನೆ

04/02/2022, 22:51

ಮಂಗಳೂರು(reporterkarnataka.com);ಜಪ್ಪಿನಮೊಗರಿನಲ್ಲಿರುವ ಪುರಾತನ ಕಂರ್ಬಿಸ್ಥಾನ ಕೆರೆಯ ಪುನರುತ್ಥಾನ ಕಾಮಗಾರಿ ಪೂರ್ಣಗೊಂಡಿದ್ದು, ಶಾಸಕ ವೇದವ್ಯಾಸ್ ಕಾಮ ಉದ್ಘಾಟಿಸಿದರು. 

ಈ ವೇಳೆ ಮಾತನಾಡಿದ ಶಾಸಕ ಕಾಮತ್, ಶಾಸಕನಾಗಿ ಆಯ್ಕೆಯಾದ ಪ್ರಾರಂಭದ ಹಂತದಲ್ಲಿ ಜಪ್ಪಿನಮೊಗರು ವಾರ್ಡಿನ ಕಾರ್ಯಕರ್ತರು ಕಂರ್ಬಿಸ್ಥಾನ ಕೆರೆಯ ಕುರಿತು ಮಾಹಿತಿ ನೀಡಿದ್ದರು. ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದ ಕೆರೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.

ಕೆರೆಯಿಂದ ಸರಿಸುಮಾರು 70 ಲೋಡ್ ಹೂಳೆತ್ತಿ, ಕೆರೆಗೆ ಸೇರುತ್ತಿದ್ದ ಕೊಳಚೆ ನೀರನ್ನು ಚರಂಡಿ ನಿರ್ಮಿಸಿ ಕೆರೆಯ ನೀರು ಹಾಳಾಗದಂತೆ ಎಚ್ಚರ ವಹಿಸಲಾಗಿದೆ. ಸದ್ಯ ಕೆರೆಯಲ್ಲಿ 15 ಅಡಿ ನೀರು ತುಂಬಿದ್ದು, ಪರಿಸರದ ಜನರಿಗೆ ವಾಯು ವಿಹಾರಕ್ಕಾಗಿ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಅಂತರ್ಜಲ ವೃದ್ಧಿಸಲು ಈಗಾಗಲೇ 20ಕ್ಕೂ ಅಧಿಕ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಾತ್ರವಲ್ಲದೆ ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆಯಿಂದ ನಗರದಲ್ಲಿ ಉದ್ಯಾನವನಗಳ ಅಭಿವೃದ್ಧಿಗೂ ಯೋಜನೆ ರೂಪಿಸಿದ್ದೇವೆ ಎಂದರು. 

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್ ಮಾತನಾಡಿ, ಶಾಸಕ ವೇದವ್ಯಾಸ್ ಕಾಮತ್ ಅವರ ಬೇಡಿಕೆಯಂತೆ ಕಂರ್ಬಿಸ್ಥಾನ ಕೆರೆಯ ಅಭಿವೃದ್ಧಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ಅನುದಾನ ಒದಗಿಸಲಾಗಿದೆ. ಈಗಾಗಲೇ ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ 40ಕ್ಕೂ ಅಧಿಕ ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ವೀಣಾ ಮಂಗಲ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಭಾಸ್ಕರ್, ಮುಖಂಡರಾದ ಚಿತ್ತರಂಜನ್ ಬೋಳಾರ್, ಸಂದೇಶ್ ಶೆಟ್ಟಿ, ರಾಮ್ ಪ್ರಸಾದ್ ಶೆಟ್ಟಿ, ದೀಪಕ್, ನವೀನ್ ಕೊಟ್ಟಾರಿ, ಪುಷ್ಪರಾಜ್, ಸುಜಾತಾ ಕೊಟ್ಟಾರಿ, ಲೋಹಿತ್ ಶೆಟ್ಟಿ, ಜಗದೀಶ್ ಶೆಟ್ಟಿ, ಗಣೇಶ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ಸಂತೋಷ್, ಬಾಲಕೃಷ್ಣ ಶೆಟ್ಟಿ, ನಾಗರಾಜ್ ಪೂಜಾರಿ, ರಾಜೇಶ್ ಸಾಲ್ಯಾನ್, ಗೀತಾ, ಶಕುಂತಲಾ, ಶಿಯಾಮ್ ಪ್ರಸಾದ್ ಕಡೆಕಾರ್,  ಹರೀಶ್ ಕಡೆಕಾರ್, ಆಶಾ, ಲಕ್ಷ್ಮಿ ನಾರಾಯಣ, ಮಂಜಪ್ಪ ಗೌಡ, ಭಾಸ್ಕರ್, ಶರ್ಮಿಳಾ, ವನಿತಾ, ಉಷಾ, ಮೀನಾಕ್ಷಿ, ರವಿ ಆಚಾರಿ, ರಾಜೇಂದ್ರ, ಕೀರ್ತಿರಾಜ್, ಶಿವಕುಮಾರ್, ಗಣೇಶ್, ನಾಗೇಶ್, ಪ್ರವೀಣ್ ಕುಮಾರ್, ಉದಯ್, ಹರೀಶ್ ವಲ್ಲಿ, ಉದಯ ಡಿಸೋಜ, ಸಿಪ್ರಿಮ್ ಸ್ಟೀವನ್,ಸೋನು, ಉಮೇಶ್ ಅಧಿಕಾರಿ, ಮಧು, ಪ್ರವೀಣ್ ಕುಮಾರ್, ಆಲ್ಬರ್ಟ್ ಡಿಸೋಜ, ನಿಶಾನ್ ಪೂಜಾರಿ, ಅಶೋಕ್, ಜಯಪ್ರಕಾಶ್, ರಾಜೇಶ್, ಅಬ್ಬಾ ಡಿಸೋಜ, ಅಧಿಕಾರಿಗಳಾದ ಆರತಿ, ರೂಪಾ, ಸ್ಥಳೀಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು