ಇತ್ತೀಚಿನ ಸುದ್ದಿ
ನ್ಯಾಯಾಧೀಶರ ಗಡಿಪಾರು ಮಾಡಿ; ದಲಿತರ ಪರ ಸಂಘಟನೆಗಳ ಆಗ್ರಹ; ರಾಜ್ಯಪಾಲರಿಗೆ ಮನವಿ
29/01/2022, 20:38
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka.com
ರಾಯಚೂರು ಜಿಲ್ಲಾ ನ್ಯಾಯಾಧೀಶ ಎಂ.ಸಿ.ಪಾಟೀಲ್ ಗೌಡ ಅವರನ್ನು ಗಡಿಪಾರು ಮಾಡುವಂತೆ ದಲಿಪರ ಸಂಘಟನೆಗಳು ಅಗ್ರಹಿಸಿವೆ.
ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಈ ಕೃತ್ಯವನ್ನುಖಂಡಿಸಿದ್ದು, ತಾಲೂಕು ಪಂಚಾಯ್ತಿ ಕಚೇರಿಯಿಂದ ಪ್ರತಿಭಟನೆ ಪ್ರಾರಂಭಿಸಿದ ಪ್ರತಿಭಟನೆಕಾರರು ನ್ಯಾಯಾಧೀಶನ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ, ಬಸವೇಶ್ವರ ವೃತದ ಬಳಿ ಪ್ರತಿಭಟನೆ ನಡೆಸಿನ್ಯಾಯಾಧೀಶರ ವಿರುದ್ಧ ಘೋಷಣೆ ಕೂಗಿ ಶಿಸ್ತು ಕ್ರಮಕ್ಕೆ ಆಗ್ರಹಿಸಿದರು.
ನಂತರ ತಹಶೀಲ್ದಾರರ ಕಚೇರಿಗೆ ತರಳಿ ತಹಶೀಲ್ದಾರರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ದಲಿತ ಹೋರಾಟಗಾರ ದೊಡ್ಡಬಸಪ್ಪ, ರೈತ ಮುಖಂಡಾದ ಅಡಿವೆಪ್ಪ, ಷಂಶದ್ ಬೇಗಂ, ಸರೋಜಮ್ಮ, ಕೋಗಳಿ ಮಲ್ಲೇಶಪ್ಪ, ಅಕ್ಕಮಹಾದೇವಿ, ಹೊಸಕೇರಿ ಹೆಚ್.ಜಿ.ಸ್ವಾಮಿ, ಹೆಚ್.ಎಂ.ಚಾರೆಪ್ಪ, ಮಾದೂರು ಮಹೇಶ, ಹೆಚ್ ಮರಿಸ್ವಾಮಿ, ಕಾಳಿ ಬಸವರಾಜ,ಚಿಲುಗೋಡು ಮೈಲಪ್ಪ, ಕೆ.ಮಹೇಶ,ಉಪ್ಪಾರಗಟ್ಟಿ ಬುಳ್ಳಪ್ಪ,ಮೇಘರಾಜ, ಎಂ.ಮೈಲಪ್ಪ,ಹೆಚ್.ಮರಿಯಪ್ಪ,ಉಲುವತ್ತಿ ಓಮೇಶ,ಅಲಬೂರು ಗಣೇಶ,ಎ.ಕೆ.ರಾಮಣ್ಣ,ಅರೇಗೊಂಡನಹಳ್ಳಿ ದುರುಗಪ್ಪ, ಮೋರಗೇರಿ ರಮೇಶ,ಹೆಚ್.ಭರ್ಮಪ್ಪ,ಕ.ದ.ಸಂ.ಸಮಿತಿ ವಿಜಯನಗರ ಜಿಲ್ಲಾಧ್ಯಕ್ಷ ಹಂಪಾ ಪಟ್ಣ ರಮೇಶ, ಸೇರಿದಂತೆ ಡಾ. ಬಿ.ಆರ್.ಅಂಬೇಡ್ಕರ್ ಸಂಘ ಹಾಗ ಮಾದಿಗ ಮೀಸಲಾಯಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಬಿ.ಪ್ರಕಾಶ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಗಡಿಪಾರು ಮಾಡಲು ಆಗ್ರಹಿಸಿದೆ.
ತಹಶೀಲ್ದಾರರ ವಿಳಂಬ ನೀತಿಗೆ ಖಂಡನೆ: ಪ್ರತಿಭಟನೆಕಾರರು ತಹಶೀಲ್ದಾರರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಲು ಬಂದು 45 ನಿಮಿಷಗಳ ಕಾಲ ಕಾದರೂ ಕೂಡ ತಹಶೀಲ್ದಾರರು ಅವರ ಮನವಿ ಪತ್ರ ಸ್ವೀಕರಿಸಲು ಕಚೇರಿಗೆ ಬಾರದ ಕಾರಣ ದಲಿತ ಮುಖಂಡರು ತಹಶೀಲ್ದಾರರ ವಿರುದ್ಧ ಕೆಂಡಾಮಂಡಲವಾದರು. ತಹಶೀಲ್ದಾರರ ಕಚೇರಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಕಾರಣ ಪ್ರತಿ ಬಾರಿಯೂ ಇದೇ ತೆರನಾಗಿ ತಹಶೀಲ್ದಾರರು ವಿನಾಕಾರಣ ವಿಳಂಬ ನೀತಿಯ ಧೋರಣೆ ತೋರಿದ್ದಾರೆ ಎಂದು ಅವರು ದೂರಿದರು. ದಲಿತರ ಹೋರಾಟದ ಸಂದರ್ಭಗಳಲ್ಲಿ ತಹಶೀಲ್ದಾರರು ಅನಾಧಾರ ತೋರುತ್ತಿದ್ದಾರೆ ಇದನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ಅವರು ತಿಳಿಸಿದರು.