4:11 AM Friday3 - July 2026
ಬ್ರೇಕಿಂಗ್ ನ್ಯೂಸ್
Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ

ಇತ್ತೀಚಿನ ಸುದ್ದಿ

ನಿಮಗೆ ತಾಕತ್ತಿದ್ರೆ, ಧಮ್‌ ಇದ್ರೆ ಮೀಸಲಾತಿ ತೆರವು ಮಾಡಿ: ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪುಣಚ ಸವಾಲು

28/01/2022, 22:01

ಮಂಗಳೂರು(reporterkarnataka.com): ಅಧಿಕಾರ ನಿಮ್ಮಲ್ಲಿದೆ. ನಿಮಗೆ ತಾಕತ್ತಿದ್ರೆ, ಧಮ್‌ ಇದ್ರೆ ಮೀಸಲಾತಿ ತೆರವು ಮಾಡಿ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಕಿರಣ್‌ ಪುಣಚ ಸವಾಲೆಸೆದರು.


ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ. ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರ ತೆಗೆಸಿ ಅವಮಾನ ಮಾಡಿದ ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದ.ಕ ಜಿಲ್ಲಾ ಶಾಖೆ
ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

2013ರ ನಂತರ ಈ ದೇಶ ಒಂದು ಧಾರ್ಮಿಕ ಆಫೀನಲ್ಲಿ ಬೆಳೆದಿತ್ತು. ಅದಕ್ಕೂ ಮೊದಲು ಶಿಕ್ಷಣ ಇಲ್ಲದವರು ಮಾತಿನ ಮೋಡಿಗೆ ಒಳಗಾಗುತ್ತಿದ್ದರು.

ಆದರೆ 2013ರ ನಂತರ ಸುಶಿಕ್ಷಿತರು ಸಹ ಭಾವನಾತ್ಮಕ ಲೋಕದಲ್ಲಿ ತೇಲಾಡುತ್ತಿದ್ದಾರೆ. ನಮ್ಮ ದೇಶ ವಿಶ್ವ ಗುರುವಾಗುತ್ತದೆ, ನಾವು ಇಡೀ ಪ್ರಪಂಚಕ್ಕೆ ಮಾದರಿಯಾಗುತ್ತೇವೆ, ನಮ್ಮ ದೇಶ ಅಭಿವೃದ್ಧಿ ಪಥದತ್ತ ಹೋಗುತ್ತದೆ ಎಂದು ಸೂಲಿಬೆಲೆ ಹುಡುಗ್ರನ್ನು ಹಾಳು ಮಾಡಿ, ತಲೆಕೆಡಿಸಿದ ಎಂದು ಹೇಳಿದರು.

ಅಂಬೇಡ್ಕರ್‌ನನ್ನು ದೇವರಂಥೆ ಪೂಜೆ ದಲಿತ ಸಮುದಾಯವರು ಮಾಡುತ್ತಿದ್ದಾರೆ. ಬಂಟರು, ಬಿಲ್ಲವರು, ಕ್ರಿಶ್ಚಿಯನ್‌, ಗೌಡರು, ಮುಸ್ಲಿಂಮರು ಅಂಬೇಡ್ಕರ್‌ನಿಂದ ನಾವು ಏನೂ ಪಡೆದುಕೊಂಡಿಲ್ಲವೇ ಎಂದು ಅವರು ಪ್ರಶ್ನಿಸಿದರು.

ನಿಮ್ಮಲ್ಲಿ ಸಂಪೂರ್ಣ ಅಧಿಕಾರ ಇದೆ. ನಿಮಗೆ ಧಮ್‌ ಇದ್ರೆ, ತಾಕತ್ತಿದ್ರೆ ಮೀಸಲಾತಿ ತೆರವು ಮಾಡಿ ಎಂದು ಸವಾಲೆಸೆದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಮಾತನಾಡಿ, ಸಂವಿಧಾನವನ್ನು ರಚಿಸಿ,ಅದಕ್ಕೊಂದು ಹೊಸ ರೂಪ ಕೊಟ್ಟುವರು ಅಂಬೇಡ್ಕರ್‌ ಎಂದರು.

ಕಮ್ಯುನಿಸ್ಟ್  ನಾಯಕ ಸುನಿಲ್‌ ಕುಮಾರ್‌ ಬಜಾಲ್‌ ಹಾಗೂ ದಲಿತ ಮುಖಂಡರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು