ಇತ್ತೀಚಿನ ಸುದ್ದಿ
ಬಂಟ್ವಾಳ: ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
24/01/2022, 21:16
ಬಂಟ್ವಾಳ(reporterkarnataka.com):
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ “ಅಮೃತ ಸಮುದಾಯ ಅಭಿವೃದ್ಧಿ ಯೋಜನೆ” ವಾರ್ಷಿಕ ವಿಶೇಷ ಶಿಬಿರವು ಬಂಟ್ವಾಳ ಕೆಂಪುಗುಡ್ಡೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ಉದ್ಘಾಟನೆ ಗೊಂಡಿತು.
ಈ ಶಿಬಿರವನ್ನು ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಉದ್ಘಾಟಿಸಿದರು. ಈ ಸಂಧರ್ಭ
ಮಾತನಾಡಿದ ಅವರು, ” If you want to know India, meet Swami Vivekananda” ಎನ್ನುವ ವಿವೇಕ ವಾಣಿಯ ಮೂಲಕ ಯುವಜನತೆಗೆ ಸ್ಪೂರ್ತಿ ತುಂಬಿದರು. ಆಧ್ಯಾತ್ಮಿಕತೆಯ ಬಗ್ಗೆ, ಹಾಗೇ ವೈಜ್ಞಾನಿಕವಾಗಿ ಮೌಲ್ಯಾಧಾರಿತ ನುಡಿಗಳನ್ನು ನುಡಿದರು.
ಅಧ್ಯಕ್ಷತೆಯನ್ನು ಡಾ.ಗಿರೀಶ್ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರವಿಶಂಕರ್ ಬಡಾಜೆಗುತ್ತು ಭಾಗವಹಿಸಿದ್ದರು. ರಾ.ಸೇ.ಯೋಜನಾಧಿಕಾರಿ ಹೈದರಾಲಿ ಪ್ರಾಸ್ತವಿಕ ನುಡಿಗಳನ್ನಾಡಿದರು.
ಪ್ರಸಾದ್ ಕುಮಾರ್ ರೈ, ಡಾ. ಶೇಷಪ್ಪ ಕೆ.,ರವಿ ಹಿತನುಡಿಗಳನ್ನಾಡಿದರು. ಈ ಕಾರ್ಯಕ್ರಮವನ್ನು ಚಂದ್ರಪ್ರಭಾ ನಿರೂಪಿಸಿದರು. ಅಶ್ವಿತಾ, ಇಬ್ರಾಹಿಂ ಖಲೀಲ್, ನಿಶಾಂತ್ ಸ್ವಾಗತಿಸಿದರು. ಜ್ಞಾನೇಶ್ ಕಾರಂತ್ ವಂದಿಸಿದರು.