ಇತ್ತೀಚಿನ ಸುದ್ದಿ
ದೂಪದಹಳ್ಳಿ ರೂಪಾಬಾಯಿಗೆ ಪಿಎಸ್ ಐ ಆಗಿ ಬಡ್ತಿ: ಸಂಭ್ರಮಿಸಿ ಅಭಿನಂದಿಸಿದ ತಾಂಡದ ಜನತೆ
23/01/2022, 17:47
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೊಟ್ಟೂರು ತಾಲೂಕಿನ ದೂಪದಹಳ್ಳಿ ತಾಂಡದ ಬಡ ವಿದ್ಯಾರ್ಥಿನಿ, ಈ ವರೆಗೆ ರೂಪ ಬಾಯಿ ಪೇದೆಯಾಗಿದ್ದವರು ಈಗ ಪಿಎಸ್ಐ ಹುದ್ದೆ ಅಲಂಕರಿಸಿದ್ದಾರೆ. ಅವರಿಗೆ ತಾಂಡಾದ ಗ್ರಾಮಸ್ಥರು ಹಾಗೂ ಹಿರಿಯರು, ಮಹಿಳೆಯರು, ವಿವಿದ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದ್ದಾರೆ.
ದೂಪದಹಳ್ಳಿ ತಾಂಡದ ಕೊಟ್ರೇಶ್ ನಾಯ್ಕ್ ಅವರ ಪುತ್ರಿಯಾದ ರೂಪ ಬಾಯಿ ರವರು, Bsc Agri ಮುಗಿಸಿ ಪಿಸಿ ಹುದ್ದೆಗೆ ಆಯ್ಕೆಯಾಗಿ ಒಂದೇ ವರ್ಷದಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರ ತಂದೆ ವಿದ್ಯಾಭ್ಯಾಸಕ್ಕೆ ಏನು ಕೊರತೆಯನ್ನು ಮಾಡದೆ ಮಗಳನ್ನು ಚೆನ್ನಾಗಿ ಓದಿಸಿ ಉನ್ನತ ಸ್ಥಾನಕ್ಕೆ ತಂದಿದ್ದಾರೆ. ಕೊಟ್ರೇಶ್ ನಾಯಕ್ ಅವರಿಗೆ ಮೂರು ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು. ರೂಪ ಬಾಯಿ ಅವರು ಎರಡನೆಯ ಮಗಳು. ಅಣ್ಣ ಹಾಗೂ ತಮ್ಮ ಕಬ್ಬು ಕಟಾವು ಮಾಡುತ್ತಿದ್ದಾರೆ. ರೂಪ ಬಾಯಿ ಅವರು ಪಿಎಸ್ಐ ಹುದ್ದೆಗೆ ಆಯ್ಕೆಯಾಗಿರುವುದನ್ನು ಆಯ್ಕೆಯಾಗಿರುವುದನ್ನು ಕಂಡು ಊರಿನ ಹಿರಿಯರು ಮುಖಂಡರು ಖುಷಿಯನ್ನು ವ್ಯಕ್ತಪಡಿಸಿದರು ಹಾಗೂ ಅವರ ಸಾಧನೆಗೆ ತಾಂಡದ ನಾಯಕರವರು ಶಾಲು ಮತ್ತು ಹಾರ ಹಾಕಿ,ಹಣ್ಣುಹಂಪಲು ಕೊಟ್ಟು ಅವರಿಗೆ ಸನ್ಮಾನಿಸಿದರು.
ದೂಪದಹಳ್ಳಿ ತಾಂಡದ ಗೋರ ಸೇನಾ ಸಂಘಟನೆದಿಂದ ಹಾಗೂ ಗೋರ್ ಸಿಕ್ವಾಡಿ ಬಾಲಸಂಸ್ಕಾರ ಕೇಂದ್ರದಲ್ಲಿ ಅವರಿಗೆ ಸನ್ಮಾನಿಸಿದರು. ಗೋರ್ ಸೇನಾ ಅಧ್ಯಕ್ಷರಾದ ರಮೇಶ್ ನಾಯ್ಕ ಹಾಗೂ ಶಿವಪ್ರಕಾಶ್ ಮಹಾರಾಜರು ಅಭಿನಂದಿಸಿದರು.
ಬಾಲ ಸಂಸ್ಕಾರ ಕೇಂದ್ರದ ಶಿಕ್ಷಕರಾದ ಅನಿಲ್ ನಾಯ್ಕ್ ಮಾಂತೇಶ್ ನಾಯ್ಕ್ ,ಗೋರ್ ಸೇನಾ ಪದಾಧಿಕಾರಿಗಳು ಭಾಗಿಯಾಗಿದ್ದರು.