1:01 AM Wednesday8 - May 2024
ಬ್ರೇಕಿಂಗ್ ನ್ಯೂಸ್
ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ…

ಇತ್ತೀಚಿನ ಸುದ್ದಿ

ಬಿಜೆಪಿ ಮಹಿಳಾ ಮೋರ್ಚಾ: ಪೂರ್ವ ಮಹಾ ಶಕ್ತಿ ಕೇಂದ್ರದಲ್ಲಿ ಪೋಷನ್ ಪಕ್ವಾಡ್ , ಸೀಮಂತ ಶಾಸ್ತ್ರ

22/01/2022, 14:55

ಮಂಗಳೂರು(reporterkarnataka.com):.ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಅಪೌಷ್ಟಿಕತೆಯ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಭಾನುವಾರ ನಗರದ ಕದ್ರಿ 32ನೇ ವಾರ್ಡಿನ ಮಹಿಳಾ ಮಂಡಳಿಯ

ಪೂರ್ವ ಮಹಾ ಶಕ್ತಿಕೇಂದ್ರದಲ್ಲಿ ಪೋಷನ್ ಪಕ್ವಾಡ್ ಕಾರ್ಯಕ್ರಮ ಆಯೋಜಿಸಲಾಯಿತು. 

ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂರ್ಣಿಮಾ ರಾವ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.

ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಮಾತನಾಡಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ರೂಪಾ ಡಿ. ಬಂಗೇರ ಅವರು ಪೋಷನ್ ಪಕ್ವಾಡ ದ ಬಗ್ಗೆ ಕೆಲವು ಮಾಹಿತಿ ನೀಡಿ ಗರ್ಭಿಣಿ ಮಹಿಳೆಯರು ಯಾವ ರೀತಿ ಪೌಷ್ಟಿಕ ಆಹಾರ ಸೇವಿಸಿ ತಮ್ಮಆರೋಗ್ಯಕಾಪಾಡಿಕೊಳ್ಳಬೇಕು ಅಂತ ವಿವರಿಸಿದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಅವರು ಪ್ರಧಾನ ಮಂತ್ರಿಗಳ ಹತ್ತು ಹಲವು ಯೋಜನೆಗಳ ಬಗ್ಗೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ಸಿಗುವ ಸವಲತ್ತುಗಳ ಬಗ್ಗೆ
ತಿಳಿಸಿದರು. 

ದಕ್ಷಿಣ ಮಂಡಲ ಮಹಿಳಾ ಮೋರ್ಚಾ ಈ ಮೊದಲು ಮಾಡಿದ ಕಾರ್ಯಕ್ರಮವಾದ ಜಪ್ಪಿನಮೊಗರು ವಾರ್ಡಿನ  ಟೆಂಟ್ ಹೌಸ್ ಮಕ್ಕಳಿಗೆ ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ನಡೆಸಿದ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರು 

ಶ್ಲಾಘಿಸಿದ್ದಾರೆ ಎಂದು ಹೇಳಿ ನಮ್ಮ ಮಹಿಳಾ ಮೋರ್ಚಾದ ತಂಡ ಇನ್ನಷ್ಟು ಪಕ್ಷ ಸಂಘಟನೆ ಕಾರ್ಯಕ್ರಮ ಮಾಡುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮನಪಾ ಸದಸ್ಯೆ ಶಕೀಲಾ ಕಾವ , ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಮತ್ತು ಮಹಿಳಾ ಮೋರ್ಚಾ ದ ಪ್ರಭಾರಿ ಸುಪ್ರೀತಾ ಶೆಟ್ಟಿ, ಮಂಡಲದ ಕಾರ್ಯದರ್ಶಿ ವಿನೋದ್ ಮೆಂಡನ್, ಬೂತ್ ಅಧ್ಯಕ್ಷರಾದ ಪ್ರವೀಣ್ ಗುಂಡಲಿಕೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹರಿಯಾಪ್ಪ ಸಾಲಿಯಾನ್ ಮತ್ತು ಮಹಿಳಾ ಮೋರ್ಚಾ ದ ಪ್ರಧಾನ ಕಾರ್ಯದರ್ಶಿ ಹರಿಣಿ ಪ್ರೇಮ್, ಉಪಾಧ್ಯಕ್ಷೆ ರೂಪಾ, ಕಾರ್ಯದರ್ಶಿಗಳಾದ ಗಾಯತ್ರಿ ಲೋಕೇಶ್, ಪ್ರಿಯಾ ಕೋಟ್ಯಾನ್, ಖಜಾಂಜಿ ಮಾಲತಿ ಅರುಣ್, ಸದಸ್ಯರಾದ ಕವಿತಾ, ಭಾರತಿ ಕಿಣಿ, ಮಹಾಶಕ್ತಿ ಕೇಂದ್ರದ ಯಶೋದಾ, ಸವಿತಾ ರೈ ಮತ್ತು ಸಾಮಾಜಿಕ ಜಾಲತಾಣದ ಸಂತೋಷ್ ಮತ್ತು ಪರಿಸರದ ನಿವಾಸಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು.   

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗರ್ಭಿಣಿ ಮಹಿಳೆಗೆ ಸೀಮಂತ ಶಾಸ್ತ್ರ ಮಾಡಿ ಮಹಿಳಾ ಮೋರ್ಚಾದ ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿ ತಂದ ಪೌಷ್ಟಿಕಯುಕ್ತ ತಿಂಡಿ ತಿನಿಸು ಬಡಿಸಿ, ಹೂ ಮುಡಿಸಿ, ಬಳೆ ತೊಡಿಸಿ, ಸೀರೆ ಉಡುಗೊರೆ ಕೊಟ್ಟು, ಆರತಿ ಮಾಡಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಪ್ರಧಾನ ಕಾರ್ಯದರ್ಶಿ ಹರಿಣಿ ಪ್ರೇಮ್ ನೆರವೇರಿಸಿದರು. ಪ್ರಾರ್ಥನೆಯನ್ನು ಕವಿತಾ ನೆರವೇರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು