8:34 AM Monday10 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಹೋಂ ಐಸೋಲೇಷನ್’ ಆಗಿರೋರಿಗೆ ಇನ್ಮುಂದೆ  ‘ಮೆಡಿಸಿನ್ ಕಿಟ್’ ವಿತರಣೆ:  ‘ಔಷಧಿಗಳ ಪಟ್ಟಿ ಹೀಗಿದೆ…

19/01/2022, 09:31

ಬೆಂಗಳೂರು(reporterkarnataka.com): ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದಂತ ಕೊರೋನಾ ಕಂಟ್ರೋಲ್ ಸಮಿತಿಯ ಸಭೆಯಲ್ಲಿ, ಕೋವಿಡ್ ಸೋಂಕಿತರಾಗಿ ಹೋಂ ಐಸೋಲೇಷನ್ ನಲ್ಲಿ ಇರೋರಿಗೆ, ಮನೆಗೆ ಮೆಡಿಸಿನ್ ಕಿಟ್  ವಿತರಿಸುವಂತೆ ಸೂಚಿಸಲಾಗಿದ್ದು,

ಅದರಂತೆ ಶೀಘ್ರವೇ ಮನೆ ಬಾಗಿಲಿಗೆ ಕೋವಿಡ್ ಸೋಂಕಿತರಿಗೆ ಮೆಡಿಸಿನ್ ಕಿಟ್ ವಿತರಣೆ ಆಗಲಿದೆ.

ಈಗಾಗಲೇ ರಾಜ್ಯ ಆರೋಗ್ಯ ಇಲಾಖೆಯಿಂದ ಇದಕ್ಕೆ ಬೇಕಾದಂತ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಲಾಗಿದ್ದು, ಸೋಂಕಿತರ ಲಕ್ಷಣಗಳ ಆಧಾರದ ಮೇಲೆ ವೈದ್ಯರ ಸಲಹೆಯೊಂದಿಗೆ ಮೆಡಿಸಿನ್ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಅವರು, ಹೋಂ ಐಸೋಲೇಷನ್ ನಲ್ಲಿರೋರಿಗೆ ಆಯಾ ವ್ಯಾಪ್ತಿಯ ಆರೋಗ್ಯ ಇಲಾಖೆಯಿಂದ ಮಾನಿಟರಿಂಗ್ ಮಾಡುವಂತ ಕೆಲಸವನ್ನು ಮಾಡಲಾಗುತ್ತಿದೆ. ಅವರ ಲಕ್ಷಣಗಳನ್ನು ಆಧರಿಸಿ, ಚಿಕಿತ್ಸೆಗಾಗಿ ಔಷಧಿಗಳನ್ನು ಕೂಡ ವಿತರಿಸಲಾಗುತ್ತದೆ ಎಂದರು.

ಹೋಂ ಐಸೋಲೇಷನ್ ನಲ್ಲಿ ಇರೋರಿಗೆ ಪ್ರತ್ಯೇಕವಾಗಿ ಕಿಟ್ ವಿತರಿಸೋದಕ್ಕೆ ತಾಂತ್ರಿಕ ಸಲಹಾ ಸಮಿತಿಯ ಸೂಚನೆ ಮೇರೆಗೆ ತಯಾರಿ ಮಾಡಲಾಗುತ್ತಿದೆ. 6 ವಿಧಧ ಮೆಡಿಸಿನ್ ಗಳನ್ನು ತಜ್ಞರ ಸಲಹೆಯ ಮೇರೆಗೆ ನೀಡಲು ನಿರ್ಧರಿಸಲಾಗಿದೆ. ಐದು ಮಾತ್ರ, ಒಂದು ಸಿರಪ್ ಸೇರಿದಂತೆ ಇತರೆ ಔಷಧಿಗಳು ಇರಲಿವೆ ಎಂದರು.

*ಯಾವೆಲ್ಲಾ ಔಷಧಿಗಳನ್ನು ನೀಡಲಾಗುತ್ತೆ ಗೊತ್ತಾ.?*

ಹೋಂ ಐಸೋಲೇಷನ್ ನಲ್ಲಿ ಇರೋ ಕೊರೋನಾ ಸೋಂಕಿತರಿಗೆ ವೈದ್ಯರ ಮಾರ್ಗದರ್ಶನದಂತೆ ಅವರಿಗೆ ಇರುವಂತ ಸಿಮ್ಟಮ್ಸ್ ಆಧಾರದ ಮೇಲೆ ಔಷಧಿಗಳನ್ನು ಆರೋಗ್ಯ ಇಲಾಖೆಯಿಂದ ಸೋಂಕಿತರ ಮನೆ ಭಾಗಿಲಿಗೆ ತಲುಪಿಸಲಾಗುತ್ತದೆ. ಅಂದಹಾಗೇ ಈ ಕೆಳಗಿನ ಔಷಧಿಗಳನ್ನು ನೀಡೋದಕ್ಕೆ ನಿರ್ಧರಿಸಲಾಗಿದೆ.

500mg ಪ್ಯಾರಾಸಿಟಮಾನ್ – 20 ಮಾತ್ರೆ

500mg ವಿಟಮಿನ್-ಸಿ – 10 ಮಾತ್ರೆ

50mg ಜಿಂಕ್ ಸೆಟ್ – 5 ಮಾತ್ರೆ

10mg ಲಿಯೋ ಸಿಟ್ರಿಜಿನ್ – 5 ಮಾತ್ರೆ

40mg ಪ್ಯಾಂಟಪ್ರೋಜಲ್ – 5 ಮಾತ್ರೆ

ಕಾಫ್ ಸಿರಪ್ – 1 ಬಾಟಲ್

ಈ ಮಾತ್ರಗಳ ಜೊತೆಗೆ ತ್ರಿ ಲೇಯರ್ 10 ಫೇಸ್ ಮಾಸ್ಕ್, 50 ಎಂ.ಎಲ್ ಸ್ಯಾನಿಟೈಸರ್ ಬಾಟಲ್ ಕೂಡ ಹೋಂ ಐಸೋಲೇಷನ್ ನಲ್ಲಿರೋ ಸೋಂಕಿತರಿಗೆ ನೀಡಲಾಗುತ್ತದೆ. ಈ ಔಷಧಿ ಐದು ದಿನಗಳವರೆಗೆ ಮಾತ್ರ ಆಗಿದ್ದು, ಒಂದು ವೇಳೆ ಆ ಬಳಿಕವೂ ಗುಣಮುಖ ಆಗದಿದ್ದರೇ, ಸಮೀಪದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ತಿಳಿಸಲಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು