8:54 AM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಇನ್ನೂ ಅಭಿವೃದ್ಧಿ ಕಾಣದ ಮಸ್ಕಿಯ ಅಶೋಕ ಶಿಲಾಶಾಸನದ ತಾಣ: ಇಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯವೇ ಇಲ್ಲ!!

05/06/2021, 07:34

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ.ರಾಯಚೂರು

info.reporterkarnataka@gmail.com

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಅಶೋಕ ಶಿಲಾಶಾಸನ ಬಹಳ ವರ್ಷಗಳಿಂದ ಅಭಿವೃದ್ಧಿ ಯಾಗದೆ ಹಾಗೆ ಉಳಿದುಬಿಟ್ಟಿದೆ. ಇತಿಹಾಸದಲ್ಲಿ ಮಸ್ಕಿ ಅಶೋಕ ಶಿಲಾಶಾಸನ ಪ್ರಸಿದ್ಧಿಯಾಗಿದೆ. ರಾಜ್ಯದಲ್ಲಿ ಪ್ರವಾಸಿಗರು ಅಶೋಕ ಶಿಲಾಶಾಸನ ವೀಕ್ಷಿಸಲು ದೂರದ ಊರಿನಿಂದ ಬರುತ್ತಾರೆ. ಆದರೆ ಸೌಕರ್ಯ ಮಾತ್ರ ಶೂನ್ಯ.

ಇಲ್ಲಿ ಯಾತ್ರಿಕರಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಯಾತ್ರಿಕರಿಗೆ ಸರಿಯಾದ ಶೌಚಾಲಯಗಳಿಲ್ಲ. ದೂರದ ಊರಿಂದ ಬರುವರಿಗೆ ಆಲಮಟ್ಟಿ ತರಹದ ಉದ್ಯಾನವನ ಇಲ್ಲ. ಈಗಾಗಲೇ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಶಾಸಕರಾಗಿರುವಾಗ ಸಚಿವರು , ಸಂಸದರು, ಶಾಸಕರು ಸೇರಿದಂತೆ ಅನೇಕರು ಗುದ್ಲಿ ಪೂಜೆ ನೆರವೇರಿಸಿದ್ದರು.  ಏಕೆ ಏನೂ ಗೊತ್ತಿಲ್ಲ. ಆದರೂ ಮಸ್ಕಿ ಅಶೋಕ ಶಿಲಾಶಾಸನ ಇನ್ನು ಅಭಿವೃದ್ಧಿ ಕಾಣದೆ ಹಾಗೆ ಉಳಿದುಬಿಟ್ಟಿದೆ. ಇಂದಿನ ದಿನದಲ್ಲಿ ಪುರಾತತ್ವ ಇಲಾಖೆ ಪ್ರವಾಸೋದ್ಯಮ ಇಲಾಖೆ ಏಕೆ ಗಮನಹರಿಸುತ್ತಿಲ್ಲ. ಎಲ್ಲಾ ಕಡೆ ಎಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಆದರೆ ಮಸ್ಕಿ ನಾಡಿಗೆ ಅಶೋಕನ ಶಿಲಾ ಶಾಸನ ಅಭಿವೃದ್ಧಿಯಾಗದೆ ಹಾಗೆ ಉಳಿದಿದ್ದು ದುರ ಕಷ್ಟಕರ ಸಂಗಾತಿ ಎಂದು ಯಾತ್ರಿಕರು ಅಭಿಪ್ರಾಯಪಡುತ್ತಾರೆ.

ಜನಪ್ರತಿನಿಧಿಗಳು, ಸಚಿವರು, ಮುಖ್ಯಮಂತ್ರಿಗಳು ಉಪ ಚುನಾವಣೆ ನಿಮಿತ್ತ ಮಸ್ಕಿಗೆ ಬಂದಾಗ ಅವರು ಗಮನಕ್ಕೆ ಬಂದಿಲ್ಲವೇನೋ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಅದು ಏನೇ ಇರಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಇದಕ್ಕೆ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಜನರಿಗೆ ಶುದ್ಧವಾದ ಕುಡಿಯುವ ನೀರಿನ ಘಟಕ ಪ್ರಾರಂಭ ಮಾಡಬೇಕು. ಯಾತ್ರಿಕರಿಗಾಗಿ ಹೈಟೆಕ್ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಯಾತ್ರಿಕರಿಗಾಗಿ ಯಾತ್ರಿಕ ನಿಲಯಗಳ ಮಾಡಬೇಕೆನ್ನುವುದು ಒತ್ತಾಯವಾಗಿದೆ. ನೂತನವಾಗಿ ಆಯ್ಕೆಯಾದ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ ಇದಕ್ಕೆ ಗಮನಹರಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು