3:10 AM Thursday19 - September 2024
ಬ್ರೇಕಿಂಗ್ ನ್ಯೂಸ್
ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ

ಇತ್ತೀಚಿನ ಸುದ್ದಿ

ಬದುಕನ್ನು ಸುಂದರ ಮಾಡಲು ಹವ್ಯಾಸಗಳು ಪ್ರೇರಕ ಶಕ್ತಿ: ಸೃಜನ ಶೀಲತೆ ,ಕ್ರಿಯಾಶೀಲತೆಗೆ ರಹದಾರಿ

16/01/2022, 21:23

ಸುಮಾ ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಹುಡುಗಿ. ಕಲಿಕೆಯಲ್ಲಿ ಅತ್ಯಂತ ಚುರುಕು ಅಲ್ಲದಿದ್ದರೂ ಒಳ್ಳೆಯ ಅಕ್ಷರಜ್ಞಾನ ಮೂಲಭೂತ ಗಣಿತಜ್ಞಾನ ಅವಳಿಗೆ ಚೆನ್ನಾಗಿತ್ತು. ಒಂದು ದಿನ ಒಂದು ಪೇಪರಿನಲ್ಲಿ ಗುಲಾಬಿ ಹೂವನ್ನು ಮಾಡಿ ತಂದು ತರಗತಿಯ ಶಿಕ್ಷಕಿ ಲಕ್ಷ್ಮಿ ಟೀಚರ್ ಗೆ ತೋರಿಸಿದಳು.. ಟೀಚರಿಗೆ ಬಹಳ ಖುಷಿಯಾಗಿ ತರಗತಿಯಲ್ಲಿ ಎಲ್ಲರ ಎದುರಿನಲ್ಲಿ ಅವಳಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು …ಶಿಕ್ಷಕಿ ಆ ಹೂವನ್ನು ತರಗತಿಯಲ್ಲಿ ಒಂದು ಹೂದಾನಿಗೆ ಹಾಕಿ ಇಟ್ಟರು. ತನ್ನ ಬಿಡುವಿನ ವೇಳೆಯಲ್ಲಿ ಕರಕುಶಲ ವಸ್ತುವನ್ನು ತಯಾರಿಸುವುದೆಂದರೆ ಸುಮಾಳಿಗೆ ಬಹಳ ಇಷ್ಟ…. ಹೀಗೆ ಸುಮಾ ಡಿಗ್ರೀ ಶಿಕ್ಷಣ   ಮುಗಿಸಿದಳು..  ಈಗ ಸುಮಾ  ಪಟ್ಟಣದಲ್ಲಿ ಒಂದು ಪ್ರಸಿದ್ಧ ಕರಕುಶಲ ವಸ್ತುಗಳ  ಮಳಿಗೆಯ ಮಾಲಕಿಯಾಗಿ ಜೀವನವನ್ನು ಯಶಸ್ವಿಯಾಗಿ ಸಾಗಿಸುತ್ತಿದ್ದಾಳೆ. ಹಾಗೂ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾಳೆ. ಸುಮಾ ತನ್ನ ಶಿಕ್ಷಣದ ಜೊತೆಗೆ ಕರಕುಶಲ ವಸ್ತುಗಳ ತಯಾರಿಕೆಯನ್ನು ಹವ್ಯಾಸವಾಗಿ ರೂಢಿಸಿಕೊಂಡು ಯಶಸ್ಸನ್ನು ಗಳಿಸಿಕೊಂಡಳು.

ಹವ್ಯಾಸವು ಮನೋಲ್ಲಾಸಕ್ಕಾಗಿ ಬಿಡುವಿನ ವೇಳೆಯನ್ನು ಆಸಕ್ತಿದಾಯಕವಾಗಿ ಕಳೆಯುವ ಮಾರ್ಗ ವಾಗಿದೆ. ಹಲವಾರು ರೀತಿಯ ಹವ್ಯಾಸಗಳನ್ನು ನಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬಹುದು. ತೋಟಗಾರಿಕೆ, ಚಿತ್ರಕಲೆ , ಸಂಗೀತ, ಟೈಲರಿಂಗ್, ಶಿಲ್ಪಕಲೆ, ಕರಕುಶಲ ವಸ್ತುಗಳ ತಯಾರಿ , ಈಜುವಿಕೆ,  ಛಾಯಾಚಿತ್ರಗ್ರಹಣ,  ಅಂಚೆಚೀಟಿ, ಹಳೆ ನಾಣ್ಯಗಳ ಸಂಗ್ರಹ, ಗೊಂಬೆ ತಯಾರಿ ,ಪುಸ್ತಕಗಳನ್ನು ಓದುವುದು, ಸಾಹಿತ್ಯ ಬರವಣಿಗೆ. ಕಥೆ ಕವನ,ಕಾದಂಬರಿ ರಚನೆ,ಪ್ರವಾಸ ಹೀಗೆ ಹತ್ತು ಹಲವಾರು ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬಹುದು.


ಹವ್ಯಾಸಗಳಿಂದ ಸಮಯದ ಸದುಪಯೋಗವಾಗುತ್ತದೆ. ಬುದ್ಧಿ ವಿಕಾಸವಾಗುತ್ತದೆ . ಹವ್ಯಾಸಗಳು ನಮಗೆ ಸಂತೋಷ ,ಉಲ್ಲಾಸ , ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಬಿಡುವಿನ ವೇಳೆಯ ಸರಿಯಾದ ಸದುಪಯೋಗವಾಗುತ್ತದೆ. ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಬೇಸರವನ್ನು ಕಳೆಯಲು ಉತ್ತಮ ಮಾರ್ಗ… ವ್ಯಕ್ತಿಯಲ್ಲಿ ಸೃಜನ ಶೀಲತೆ ,ಕ್ರಿಯಾಶೀಲತೆ,ಆಸಕ್ತಿ  ಉಂಟಾಗುತ್ತದೆ. ಆ ದಿನದ ಕೆಲಸ ಮಾಡಲು ಹೊಸ ಹುರುಪು ತುಂಬುತ್ತದೆ. ಹವ್ಯಾಸಗಳು  ಆರ್ಥಿಕ ಲಾಭವನ್ನು ಕೂಡ ನೀಡುತ್ತದೆ. ಕೆಲವೊಂದು ಹವ್ಯಾಸಗಳು ಮನೆಯ , ಪರಿಸರದ ಸೌಂದರ್ಯವನ್ನು ಹೆಚ್ಚಿಸಲು ಸಹಾಯಕಾರಿಯಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಯಾವುದಾದರೂ ಹವ್ಯಾಸವನ್ನು ರೂಡಿಸಿಕೊಂಡರೆ ಉತ್ತಮ. ಹವ್ಯಾಸಗಳು ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ. ಚಿತ್ರಕಲೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡ  ವಿದ್ಯಾರ್ಥಿಯು ಗಣಿತ, ವಿಜ್ಞಾನದ ಚಿತ್ರಗಳನ್ನು ಅಂದವಾಗಿ ಮತ್ತು ಕ್ರಮಬದ್ಧವಾಗಿ  ಬಿಡಿಸುವ ಮೂಲಕ ಉತ್ತಮ ಅಂಕವನ್ನು ಗಳಿಸುವಲ್ಲಿ ಸಹಕಾರಿಯಾಗುತ್ತದೆ. ಜೊತೆಗೆ ಅತ್ಯುತ್ತಮ  ಚಿತ್ರಗಳ ಪ್ರದರ್ಶನ.ಮಾಡುವುದರಿಂದ ಆರ್ಥಿಕ ಸಹಾಯವೂ ಮಗುವಿಗೆ ಸಿಗಬಹುದು. ಸಂಗೀತ , ಸಾಹಿತ್ಯ ಬರವಣಿಗೆ ಯ ಅಭಿರುಚಿ ಇರುವ ವಿದ್ಯಾರ್ಥಿಗಳು ಹಲವಾರು ಸಂಗೀತ ಸ್ಪರ್ಧೆಗಳಲ್ಲಿ, ಕಥೆ ಕವನ ರಚನೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಗಳಿಸುವ 
ಲ್ಲಿಯೂ ಸಹಕಾರಿಯಾಗಬಲ್ಲದು…ಕೆಲವೊಂದು ಬಾರಿ ಹವ್ಯಾಸಗಳೇ ಬದುಕಿನ ಊರುಗೋಲು ಆಗುವ ಸಾಧ್ಯತೆ ಇದೆ.. ಎಲ್ಲಾ ರೀತಿಯ ಹವ್ಯಾಸಗಳು  ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ. ಉತ್ತಮ ಹವ್ಯಾಸಗಳು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಕಲಿಕೆಗೆ ಪೂರಕ ಮತ್ತು ಪ್ರೇರಕ ವಾಗುವುದರ ಜೊತೆಗೆ ಬದುಕನ್ನು ಸುಂದರವಾಗಿಸಲು ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ.

✍️

ಇತ್ತೀಚಿನ ಸುದ್ದಿ

ಜಾಹೀರಾತು