2:52 AM Monday10 - August 2026
ಬ್ರೇಕಿಂಗ್ ನ್ಯೂಸ್
Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ…

ಇತ್ತೀಚಿನ ಸುದ್ದಿ

ಪುಟಾಣಿಗಳಿಂದಲೇ ಮಕರ ಸಂಕ್ರಮಣ ಆಚರಣೆ: ಶುಭ ಕೋರಿ ಸಾರ್ವಜನಿಕರ ಮನಗೆದ್ದ ಜಾಣೆಯರು

16/01/2022, 17:10

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಶ್ವರ ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು, ಮಕ್ಕಳು ತುಂಬಾ ವಿಶಿಷ್ಟವಾಗಿ ಆಚರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರ‍ಾಗಿದ್ದಾರೆ.


ಬೆಳ್ಳಂಬೆಳಿಗ್ಗೆ ದೈನಂದಿನ ಕಾರ್ಯಗಳನ್ನು ಪೂರೈಸಿ ಶುಭ್ರವಾದ ಧಿರಿಸುಗಳನ್ನು ಧರಿಸಿದ ಮಕ್ಕಳು,ತಮ್ಮ ತಮ್ಮ ಮನೆಗಳಿಂದ ಸಕ್ಕರೆ ಉರಿದ ಕಡಲೆ ಹಾಗೂ ಎಳ್ಳು ಮಿಶ್ರಿತ ಅಥವಾ ಬೆಲ್ಲ ಎಳ್ಳು ಹಾಗೂ ಉರಿದಕಡಲೆ ಮಿಶ್ರಿತ ಪಾದಾರ್ಥವನ್ನು.ಬಟ್ಟಲಿನಲ್ಲಿ ತುಂಬಿಕೊಂಡು ಮನೆ ಮನೆಗೆ ತೆರಳಿ ಮೆನೆಯ ಮಂದಿಗೆಲ್ಲ ಸಿಹಿ ಹಂಚಿದ್ದಾರೆ. ಈ ಮೂಲಕ ಮಕ್ಕಳು ಸಾಮೂಹಿಕವಾಗಿ ಸಿಹಿ ಹಂಚಿ ಸರ್ವರಿಗೂ ಶುಭಕೋರಿದ್ದಾರೆ. ಶ್ರಿಪೇಟೆಬಸವೇಶ್ವರ ನಗರದ ಮಕ್ಕಳು ಈ ಮೂಲಕ ಪಟ್ಟಣದೆಲ್ಲೆಡೆಗಳಲ್ಲಿ, ಮಕರ ಸಂಕ್ರಾಂತಿ  ಸಿಹಿಯನ್ನು ಹಂಚುವ ಮೂಲಕ ಸರ್ವರಿಗೂ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದ್ದಾರೆ. ಗಲ್ಲಿಯ ಮಕ್ಕಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳೋದರ ಮೂಲಕ ಪರಸ್ಪರ ಶುಭಕೋರಿ ಸೌಹಾರ್ಧತೆ ಮೆರೆದರು. ತಾವು ಮನೆಯಿಂದ ತಯಾರಿಸಿಕೊಂಡು ತಂದಿದ್ದ ಸಿಹಿಯನ್ನು ಎಲ್ಲರೂ ಒಟ್ಟಾಗಿ ಗಲ್ಲಿಯ ಪ್ರತಿಯೊಂದು ಮನೆ ಮನೆಗೆ ತೆರಳಿ ಸಿಹಿ ಹಂಚಿ ಶುಭ ಕೋರಿದ್ದಾರೆ. ದಾರಿಯಲ್ಲಿ ಎದುರಾದ ಪ್ರತಿಯೊಬ್ಬ ರಿಗೂ ಸಿಹಿ  ಸಂಕ್ರಾಂತಿ ಶುಭ ಕೋರಿ ವೈಶಿಷ್ಟ್ಯತೆ ಮೆರೆದರು.ಈ ಮೂಲಕ ಮಕ್ಕಳು ಪಟ್ಟಣ ಮಾತ್ರವಲ್ಲ,ತಾಲೂಕಿನ ಮಾಡಿನ ಸಮಸ್ತ ಯುವಪೀಳಿಗೆಗೆ ಮಾದರಿಯಾಗಿದದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು