8:29 PM Monday7 - July 2025
ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಪದ್ಯದ ಜತೆಗೆ ಗದ್ಯ ರಚನೆ ಬಗ್ಗೆಯು ಒಲವು ಮೂಡಿಸಿಕೊಳ್ಳಬೇಕು : ಡಾ.ಬಿ.ಎ.ವಿವೇಕ ರೈ

12/01/2022, 22:39

ಮಂಗಳೂರು (ReporterKarnataka.com)

ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘ ಹಾಗೂ ಪಾದುವ ಪದವಿಪೂರ್ವ ಕಾಲೇಜ್‌ನ ಸಹಯೋಗದಲ್ಲಿ ತೌಳವ ಸಿರಿ ಪ್ರಶಸ್ತಿ, ಸಾರಾ ದತ್ತಿ ಪ್ರಶಸ್ತಿ ಹಾಗೂ ಚಂದ್ರಭಾಗಿ ರೈ ದತ್ತಿ ಬಹುಮಾನ ಪ್ರದಾನ ಕಾರ್ಯಕ್ರಮ ಪಾದುವ ಪದವಿಪೂರ್ವ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಮಾತನಾಡಿ, ಕರಾವಳಿಯ ಅನೇಕರು ಕವನವನ್ನು ಬರೆಯುತ್ತಿದ್ದಾರೆ, ಕೇವಲ ಕವನಗಳಿಗೆ ಸೀಮಿತರಾಗಬಾರದು ಪದ್ಯಗಳ ಜತೆಗೆ ಗದ್ಯ ರಚನೆಯನ್ನೂ ರೂಢಿಸಿಕೊಳ್ಳಬೇಕು, ಪದ್ಯವನ್ನು ಬರೆದಾಗ ಅದನ್ನು ಹಾಡಿದಾಗ ಅವುಗಳಿಗೆ ಲೈಕು ಬಂದಾಗ ಬರಿ ಅದಕಷ್ಟೆ ಮಾರು ಹೋಗಬೇಡಿ ಎಂದು ಕಿವಿ ಮಾತು ಹೇಳಿದರು.
ಜತೆಗೆ ಅಧ್ಯಯನ ಕೂಡ ಉತ್ತಮ ಕ್ಷೇತ್ರವಾಗಿದ್ದು ಯುವ ಜನತೆ ಇದರ ಬಗ್ಗೆ ಗಮನ ಹರಿಸಬೇಕು ಸಂಶೋಧನೆಗೆ ಯಾವುದೆ ಪದವಿ ಪಿಎಚ್‌ಡಿ ಮುಖ್ಯವಲ್ಲ ಸುತ್ತಮುತ್ತಲಿನ ಕೇಂದ್ರಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ಬರೆದು ಅಧ್ಯಯನ ಮಾಡಬಹುದು ಎಂದರು.

ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆಯವರಿಗೆ ತೌಳವ ಸಿರಿ ಪ್ರಶಸ್ತಿ, ಸ್ನೇಹದೀಪದ ಸಂಚಾಲಕಿ ತಬಸ್ಸುಮ್ ಅವರಿಗೆ ಸಾರಾ ದತ್ತಿ ಪ್ರಶಸ್ತಿ ಹಾಗೂ ನಿರ್ಮಲಾ ಸುರತ್ಕಲ್ ಅವರಿಗೆ ಚಂದ್ರಭಾಗಿ ರೈ ದತ್ತಿ ಬಹುಮಾನವನ್ನು ಪ್ರದಾನ ಮಾಡಲಾಯಿತು.

ಪಾದುವಾ ಪದವಿಪೂರ್ವ ಕಾಲೇಜ್ ಪ್ರಾಂಶುಪಾಲರಾದ ಗ್ಲಾಡಿಸ್ ಅಲೋಸಿಯಸ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕರಾದ ಡಾ.ಸಕೀನಾ ನಾಸೆರ್ ಉಪಸ್ಥಿತರಿದ್ದರು. ಹಿರಿಯ ಲೇಖಕಿ ರೂಪಕಲಾ ಆಳ್ವ ತೀರ್ಪುಗಾರರ ಅನಿಸಿಕೆಯನ್ನು ಹಂಚಿಕೊಂಡರು.

ಡಾ.ಜ್ಯೋತಿ ಚೇಳ್ಯಾರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಂಘದ ಉಪಾಧ್ಯಕ್ಷರಾದ ವಿಜಯಲಕ್ಷ್ಮೀ ಬಿ.ಶೆಟ್ಟಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಾ.ಪ್ರವೀಣ ರೈ ಕುಕ್ಕುವಳ್ಳಿ ನಿರೂಪಿಸಿದರು. ಸಂಘದ ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು