ಇತ್ತೀಚಿನ ಸುದ್ದಿ
10 ಗ್ರಾಮಗಳ ರೈತರಿಂದ ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ: ಸರಕಾರದ ವಿರುದ್ಧ ರೈತರ ಆಕ್ರೋಶಕ್ಕೆ ಕಾರಣವಾದರೂ ಏನು?
12/01/2022, 21:53
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಭದ್ರಾ ಬಫರ್ ಝೋನ್ ಜಾರಿಗೆ ವಿರೋಧಿಸಿರುವ ರೈತರು ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಯೋಜನೆ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಫರ್ ಝೋನ್ ಕುರಿತಂತೆ ಎನ್.ಆರ್.ಪುರ ತಾಲೂಕಿನ ರೈತರು ಸಾಮೂಹಿಕ ಪತ್ರ ಬರೆದಿದ್ದಾರೆ.
ಸಾಲೂರು, ಹೆನ್ನಂಗಿ, ಬೆಳ್ಳಂಗಿ, ಅಳೆಹಳ್ಳಿ, ಆಡುವಳ್ಳಿ, ಕೊಳಲೆ, ಮುದುಗುಣಿ, ಬಾಳೆಗದ್ದೆ, ನಂದಿಗಾವೆ, ಬೈರಾಪುರ ಗ್ರಾಮಗಳು ಇದರಲ್ಲಿ ಸೇರಿವೆ. 10 ಗ್ರಾಮಗಳ ಜನರಿಂದ ಸಾಮೂಹಿಕ ದಯಾಮರಣಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
ಈ ಹಿಂದೆಯೂ ಹಲವು ಯೋಜನೆಗಳ ಮೂಲಕ ಜನರನ್ನು ಸರಕಾರ ಒಕ್ಕಲೆಬ್ಬಿಸಿತ್ತು. ಇದೇ ಗ್ರಾಮದಲ್ಲಿ ಪುನರ್ ವಸತಿ ಕಲ್ಪಿಸಿತ್ತು. ಇದೀಗ
ಮತ್ತೆ ಒಕ್ಕಲೆಬ್ಬಿಸಲು ರೂಪಿಸಿದ ಬಫರ್ ಝೋನ್ ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.