11:24 PM Thursday23 - April 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ…

ಇತ್ತೀಚಿನ ಸುದ್ದಿ

ಇಂದು ಪುತ್ತೂರಿನ ಆರ್ಲ ಪದವಿನಲ್ಲಿ ಪಾವಂಜೆ ಮೇಳದಿಂದ ‘ಶ್ರೀದೇವಿ ಲಲಿತೋಪಾಖ್ಯಾನ’ ಯಕ್ಷಗಾನ ಬಯಲಾಟ ; ಹಿರಿಯ ಕಲಾವಿದರಿಗೆ ಗೌರವಾರ್ಪಣೆ

10/01/2022, 12:47

ಮಂಗಳೂರು (Reporterkarnataka.com) ಬಿ ಬಿ ಕ್ರಿಯೇಶನ್ಸ್ ಪಾಣಾಜೆ ವತಿಯಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಶ್ರೀ ದೇವಿ ಲಲಿತೋಪಾಖ್ಯಾನ ಯಕ್ಷಗಾನ ಬಯಲಾಟದ ಪ್ರದರ್ಶನವು ಜ.10ರಂದು ಸಂಜೆ 6ರಿಂದ ಪುತ್ತೂರಿನ ಆರ್ಲ ಪದವು (ಪಾಣಾಜೆ) ಸುಬೋಧ ಪ್ರೌಢಶಾಲಾ ವಠಾರದಲ್ಲಿ ನಡೆಯಲಿದೆ.

ಈ ಸಂದರ್ಭ ಬೊಳ್ಳಿಂಬಳ ದಿ.ಸುಬ್ರಾಯ ಓಕುಣ್ಣಾಯ ಸ್ಮರಣಾರ್ಥ ಹಿರಿಯ ಕಲಾವಿದರಾದ ಜಿ.ಶೀನಪ್ಪ ರೈ ಪಡ್ಯಂಬೆಟ್ಟು, ವೆಂಕಟೇಶ ಉಳಿತ್ತಾಯ ಆರ್ಲಪದವು, ಶೀನಪ್ಪ ರೈ ಕೋಂದಲಡ್ಕ, ಶ್ರೀಧರ ಗೌಡ ಮಿತ್ತಡ್ಕ ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8ಗಂಟೆಯ ಬಳಿಕ, ಶ್ರೀಮತಿ ಕಾವ್ಯಶ್ರೀ ಹಾಗೂ ಜೋತಿಷ್ಯರಾದ ಲೋಕೇಶ್ ಬಲ್ಯಾಯ ದೊಡ್ಡಡ್ಕ ಪುತ್ತೂರು ಇವರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು