11:26 PM Thursday23 - April 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ…

ಇತ್ತೀಚಿನ ಸುದ್ದಿ

ಮಲ್ಲಿಕಟ್ಟೆ: ಎಸ್ ಸಿಐ ವತಿಯಿಂದ 1 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

09/01/2022, 17:02

ಮಂಗಳೂರು(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಗರದ ಕದ್ರಿ ಮಲ್ಲಿಕಟ್ಟೆಯ ರಿಕ್ಷಾ ನಿಲ್ದಾಣದಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು. ಅಂತಾರಾಷ್ಟ್ರೀಯ ಅಧ್ಯಕ್ಷ ರ ಕನಸಿನ ಸಮುದಾಯ ಅಭಿವೃದ್ಧಿ ಯೋಜನೆ ‘ ಜಲಧಾರ 2021-22’  ಕಾರ್ಯಕ್ರಮದಡಿ ಸುಮಾರು 1 ಲಕ್ಷ ರೂ. ವೆಚ್ಚದ ಶುದ್ಧ ನೀರಿನ ಘಟಕವನ್ನು ದಿ. ಕೆ.ಪಿ. ಭಾಸ್ಕರ್ ಅವರ ಸ್ಮರಣಾರ್ಥ ಅವರ ಪತ್ನಿ ಮರೋಳಿ ವಜ್ರಾಕ್ಷಿ ಭಾಸ್ಕರ್  ಅವರು ಕೊಡುಗೆಯಾಗಿ ನೀಡಿದ್ದು ಸೀನಿಯರ್ ಚೇಂಬರ್ ನ ಅಂತಾರಾಷ್ಟ್ರೀಯ ಅಧ್ಯಕ್ಷರಾದ  ಡಾ. ಅರವಿಂದ  ರಾವ್ ಕೇದಿಗೆಯವರು ಉದ್ಘಾಟಿಸಿದರು. ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು  ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ, ಸಮಾಜಮುಖಿ ಕೆಲಸಗಳನ್ನು  ಮಾಡುತ್ತಿರುವುದು ಶ್ಲಾಘನೀಯ ಹಾಗೂ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಜರಗುವಂತಾಗಲಿ ಎಂದು ಹಾರೈಸಿದರು. ಉಪ ಮೇಯರ್ ಸುಮಂಗಲಾ ಸುಧೀರ್, ಸ್ಥಳೀಯ ಕಾರ್ಪೊರೇಟರ್ ಗಳಾದ ಮನೋಹರ್ ಶೆಟ್ಟಿ, ಕಾವ್ಯ ನಟರಾಜ್ ಆಳ್ವ, ನಾಮನಿರ್ದೇಶಿತ ಸದಸ್ಯ ಭಾಸ್ಕರ್ ಚಂದ್ರ ಶೆಟ್ಟಿ, ಸಮಾಜ ಸೇವಕರಾದ ವಿಜಯ ಭಂಡಾರಿ, ಆಟೋರಿಕ್ಷಾ ಸಂಘದ ಅಧ್ಯಕ್ಷ ಜನಾರ್ದನ ಶಕ್ತಿನಗರ, ನಿವೇದಿತಾ ಶೆಟ್ಟಿ, ಗಾಯತ್ರಿ ಅರವಿಂದ ರಾವ್, ಸುಂದರ್ ರಾಮ್ ಟ್ರಸ್ಟ್ ಅಧ್ಯಕ್ಷ ಕರುಣಾಕರ ಶೆಟ್ಟಿ, ಸೀನಿಯರ್ ಚೇಂಬರಿನ ಪ್ರಶಾಂತ್ ಸುವರ್ಣ, ಫ್ಲೇವಿ ಗ್ಲಾಡಿಸ್ ಡಿ’ಮೆಲ್ಲೋ, ಸದಾನಂದ ಶೆಟ್ಟಿ, ದಿವ್ಯ ರೈ,ಮಾಲತಿ ಶೆಟ್ಟಿ, ತಾರಾಕ್ಷಿ, ಪೂರ್ಣಿಮ ರತನ್, ನಿರ್ಮಲ ಪ್ರಮೋದ್, ಅರ್ಚನ ಬಾಲಾಜಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೊಡುಗೆ ನೀಡಿದ ವಜ್ರಾಕ್ಷಿ ಭಾಸ್ಕರ್ ಅವರನ್ನು ಮೇಯರ್ ಅವರು ಶಾಲು ಹೊದಿಸಿ ಫಲ-ಪುಷ್ಪ ನೀಡಿ ಸನ್ಮಾನಿಸಿದರು. 


ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಲೀಜನ್ ಅಧ್ಯಕ್ಷರಾದ ಜಿ.ಕೆ.ಹರಿಪ್ರಸಾದ್ ಕಾರಮೊಗರಗುತ್ತು ಅಧ್ಯಕ್ಷತೆ ವಹಿಸಿದ್ದು, ಶಾಲಿನಿ ಪ್ರಶಾಂತ್ ಸುವರ್ಣ ಸ್ವಾಗತಿಸಿದರು. ಲತಾ ಕಲ್ಲಡ್ಕ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು