5:36 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ನಗು ಇರಲಿ…ನಿಷ್ಕಲ್ಮಶ ನಗು ಇರಲಿ: ದಿನದ ಆರಂಭವನ್ನು ನಗುವಿನಿಂದ ಆರಂಭಿಸೋಣ

06/01/2022, 21:58

ನಗು….

ನಗುವು ಸಹಜದ ಧರ್ಮ. ನಗಿಸುವುದು ಪರ ಧರ್ಮ. ನಗುವ ಕೇಳುತ ನಗಿಸುವುದು ಅತಿಶಯದ ಧರ್ಮ. ನಗುವ ನಗಿಸುವ ನಗಿಸಿ ನಗುವ ಬಾಳುವ ನೀನು ಬೇಡಿಕೊಳೊ ಮಂಕುತಿಮ್ಮ.

ನಾವು ನಗುತ್ತಾ ಪರರನ್ನು ನಗಿಸುತ್ತಾ ಬಾಳುವುದೇ ನಮ್ಮ ಶ್ರೇಷ್ಠತೆ.

ಆದರೆ ದುರದೃಷ್ಟಕರ ವಿಚಾರವೆಂದರೆ ನಾವು ನಗುವ ಬದಲು ಮತ್ತೊಬ್ಬನ ಮೇಲೆ ನಗುವುದನ್ನು ಕಲಿತುಕೊಂಡಿದ್ದೇವೆ. ಎಲ್ಲರೊಳಗೊಂದಾಗಿ ನಗುನಗುತ್ತಾ ಜೀವನ ಸಾಗಿಸುವುದೇ ಸರ್ವಶ್ರೇಷ್ಠ ವ್ಯಕ್ತಿತ್ವವಾಗಿದೆ.

ನಾವೆಲ್ಲರೂ ಸಣ್ಣವರಿದ್ದಾಗ ನಮ್ಮ ನಗು ನಿಷ್ಕಪಟ ನಗು, ಅದು ಸಹಜದ ನಗು .ಆದರೆ ದೊಡ್ಡವರಾದಂತೆ ನಮ್ಮೀ ಸಹಜ ನಗು ಕ್ರಮೇಣ ಮಾಯವಾಗಲು ಕಾರಣವಾದರೂ ಏನು ?ಎಂಬ ಬಗ್ಗೆ ಚಿಂತನೆ ಮಾಡಬೇಕು. ವ್ಯಕ್ತಿಯ ಮನಸ್ಸು ಬೆಳೆದಂತೆಲ್ಲ ಮನಸ್ಸಿನ ಹಸಿವು ಹೆಚ್ಚಾಗಿ ನಗುವುದೇ ಮರೆತು ಹೋಯಿತು. ಬೇಕು ಬೇಕುಗಳ ಬೇಡಿಕೆಗಳು ಹೆಚ್ಚಾಗುತ್ತಾ ಈ ಲೋಕದ ಸಂತೆಯಲ್ಲಿ ಅವುಗಳನ್ನು ಪೂರೈಸಿಕೊಳ್ಳುವ ಹುಚ್ಚು ಸಾಹಸ ಮಾಡುತ್ತಾ ವೃಥಾ ಕಾಲಹರಣ ದೊಂದಿಗೆ ಮನಸ್ಸಿನ ಶಾಂತಿ ಸಮಾಧಾನಗಳನ್ನು ಕಳೆದುಕೊಂಡು ನಮ್ಮಿಂದ ದೂರವಾಗುತ್ತದೆ.

ನಾವು ನಕ್ಕಾಗ 14 ಸ್ನಾಯುಗಳು ಕೆಲಸ ಮಾಡುತ್ತವೆ. ಅದೇ ನಾವು ಕೋಪಗೊಂಡಾಗ 600 ಸ್ನಾಯುಗಳು ಕೆಲಸ ಮಾಡಬೇಕಾಗಿದ್ದು ಇದರಿಂದಾಗಿ ನಮ್ಮ ದೇಹದಲ್ಲಿ ಆಗುವ ತೀವ್ರತರದ ಪ್ರಕ್ರಿಯೆಗಳಿಂದ ಆಗಿ ರಕ್ತದೊತ್ತಡ ಸಕ್ಕರೆ ಕಾಯಿಲೆ ಹೀಗೆ ಹತ್ತು ಹಲವು ಕಾಯಿಲೆಗಳಿಗೆ ಆಸ್ಪದ ಕೊಟ್ಟಂತಾಗುತ್ತದೆ.

ನಗುವಿನಲ್ಲೂ ಮುಗುಳು ನಗು, ಕಿರುನಗು, ಮಂದಹಾಸ, ಅಟ್ಟಹಾಸದ ನಗು,  ಹೀಗೆ ಪಟ್ಟಿಯನ್ನು ಬೆಳೆಸಬಹುದು . ಆದರೆ ಬೇಕಾಗಿರುವುದು ನಮ್ಮ ನಿಷ್ಕಲ್ಮಶ ನಗು. ದಿನದ ಪ್ರಾರಂಭವನ್ನು ನಮ್ಮ ಮನೆಯನ್ನು ಮಂದಿಯೊಂದಿಗೆ ನಗುನಗುತ್ತಾ ಆರಂಭಿಸಿ ಆಫೀಸು ಶಾಲಾ ಕಾಲೇಜು ಸಮಾಜದ ಯಾವುದೇ ವ್ಯವಸ್ಥೆಗಳಲ್ಲಿ ನಾವು ನಮ್ಮ ನೇರ ನಡೆ-ನುಡಿಗಳಿಂದ ವ್ಯವಹರಿಸಿ ನಮ್ಮ ಕರ್ತವ್ಯ ಮಾಡುತ್ತಾ, ಎಲ್ಲರೊಳಗೊಂದಾಗಿ ನಗುನಗುತಾ ನಗುನಗುತಾ ದಿನವಿಡಿ ಉಲ್ಲಾಸದಿಂದ ಇದ್ದಾಗ ನಮ್ಮ ಮಾನಸಿಕ ಶಾಂತಿ ಸಮಾಧಾನಗಳು ವೃದ್ಧಿಯಾಗಿ ಇತರರ ನೆಮ್ಮದಿಯನ್ನು ಉಳಿಸುವ ಕಾರ್ಯ ಮಾಡಿದಂತಾಗುತ್ತದೆ. ನಾವೆಲ್ಲರೂ ನಗುವಿನ ಕಲೆಯನ್ನು ಚೆನ್ನಾಗಿ ಅರಿತುಕೊಂಡು ಎಲ್ಲರ ಜೊತೆ ಪ್ರೀತಿಯಿಂದ ನಗುನಗುತ್ತಾ ಜೀವನ ಸಾಗಿಸುತ್ತಾ ಬದುಕಿದ್ದಾಗ ಈ ಪ್ರಪಂಚದಿಂದ ನಾವು ನಿರ್ಗಮಿಸಿದಾಗ ನಮ್ಮ ಹಿಂದೆ ಉಳಿದು ನಮ್ಮ ಜೀವನದ ನಂತರವೂ ನೆನಪಿನಲ್ಲಿ ರುತೇವೆ. ಹೌದು ತಾನೆ?

✍️

ಇತ್ತೀಚಿನ ಸುದ್ದಿ

ಜಾಹೀರಾತು