ಇತ್ತೀಚಿನ ಸುದ್ದಿ
ಮಂಗಳೂರು : ಗೀತಾ ಶೇಟ್ ನೇತೃತ್ವದ ಜೆಸಿಐ ಮಂಗಳೂರು ಡೈಮಂಡ್ ಘಟಕ ಉದ್ಘಾಟನೆ
04/01/2022, 16:51
ಮಂಗಳೂರು (ReporterKarnataka.com)
ಮಂಗಳೂರಿನ ನೂತನ ಜೆಸಿಐ ಘಟಕ ಜೆಸಿಐ ಮಂಗಳೂರು ಡೈಮಂಡ್‌ನ ಉದ್ಘಾಟನಾ ಸಮಾರಂಭ ಕದ್ರಿಯಲ್ಲಿ ಇತ್ತೀಚೆಗೆ ನಡೆಯಿತು.
ಘಟಕದ ಅಧ್ಯಕ್ಷರಾಗಿ ಗೀತಾ ಶೇಟ್ ಅಧಿಕಾರ ಸ್ವೀಕರಿಸಿದರು. ಹಾಗೂ ಘಟಕದ ಪದಾಧಿಕಾರಿಗಳೂ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭ ಮಾತಾ ಡೆವಲಪರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ, ಜೆಸಿಐ ಇಂಡಿಯಾದ ಪಾಸ್ಟ್ ಇವಿಪಿ ಸದಾನಂದ ನಾವಡ, ವಲಯಾಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ, ವಲಯ ಉಪಾಧ್ಯಕ್ಷ ದೀಪಕ್ ಗಂಗೂಲಿ ಉಪಸ್ಥಿತರಿದ್ದರು.
ಜೆಸಿಐ ಮಂಗಳೂರು ಇಂಪ್ಯಾಕ್ಟ್ ಅಧ್ಯಕ್ಷರಾದ ಅನೀಶಾ ಗಂಗೂಲಿ, ನಿಕಟ ಪೂರ್ವ ಅಧ್ಯಕ್ಷ ರವಿರಾಜ್ ಎಪಿ, ಕಾರ್ಯದರ್ಶಿ ಮಹೇಶ್ ಜಿ ಭಾಗವಹಿಸಿದ್ದರು.