12:27 PM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಶಾರದಾ ಕಾಲೇಜಿನಲ್ಲಿ ಏಳು ದಿನಗಳ ದೈನಂದಿನ ಚಟುವಟಿಕೆಗಳ ಕಾರ್ಯಗಾರ

04/01/2022, 16:06

ಮಂಗಳೂರು(reporterkarnataka.com): ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಸೇರಿದಂತೆ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಏಳು ದಿನಗಳ ವಿಶೇಷ ಕಾರ್ಯಾಗಾರ ತಲಪಾಡಿ ಶಾರದ ಕಾಲೇಜಿನಲ್ಲಿ ನಡೆಯಿತು.

23-12-21ರಂದು ಡಾ.ಸಂದೀಪ್ ಬೇಕಲ್ ಕ್ರಿಯಾ ಶರೀರ ವಿಭಾಗ, ಶಾರದಾ ಆಯುರ್ವೇದ ಕಾಲೇಜು ತಲಪಾಡಿ. ಇವರು ಪ್ರಥಮ ಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.


24-12- 21ರಂದು ಕೋವಿಡ್ ಮುಂಜಾಗ್ರತ ಎಚ್ಚರಿಕೆ ಹಾಗೂ ಕ್ರಮಗಳ ಬಗ್ಗೆ ಸಮೀಕ್ಷೆ ಮೂಲಕ ಜನ ಜಾಗೃತಿಯನ್ನು ಗ್ರಾಮದ ಜನರಿಗೆ ನೀಡಿದರು.
27-12-21ರಂದು ಶ್ರೀಮತಿ ಅರುಣಾ ಕಣ್ಣನ್ ದೈಹಿಕ ಶಿಕ್ಷಕರು ಶಾರದಾ ವಿದ್ಯಾನಿಕೇತನ ತಲಪಾಡಿ. ಇವರು ವಿದ್ಯಾರ್ಥಿಗಳಲ್ಲಿ ಸ್ವಯಂ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.


28-12-21ರಂದು ಡಾ.ಸ್ವಪ್ನ ಡಿ. ಸಂಹಿತ ಸಿದ್ಧಾಂತ, ಶಾರದಾ ಆಯುರ್ವೇದ ಕಾಲೇಜು ಇವರು. ಸಮತೋಲನ ಆಹಾರದ ಬಗೆಗಿನ ಮಾಹಿತಿಯನ್ನು ನೀಡಿದರು. ಹಾಗೂ 7 ದಿನಗಳ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಕಾಲೇಜಿನ ಸ್ವಚ್ಛತಾ ಕಾರ್ಯಕ್ರಮ, ಶಾಲಾ ಕೈತೋಟ ನಿರ್ಮಾಣ, ಹಾಗೂ ಉಪಹಾರಗೃಹದಲ್ಲಿ ಚಿತ್ರಕಲೆಯ ಮೂಲಕ ಸ್ವಚ್ಛತ ಅಭಿಯಾನದ ಬರಹವನ್ನು ಬರೆದರು.


31-12-21ರಂದು ಮಂಜುನಾಥ್ ಮಲೆನಾಡು ಕಲೆ ಮತ್ತು ಕರಕುಶಲ ವಿಭಾಗ ಶಾರದ ವಿದ್ಯಾನಿಕೇತನ ತಲಪಾಡಿ. ಇವರು ಪೌರಾಣಿಕ ಕಥಾ ಭಾಗದ ತುಣುಕನ್ನು ಅಭಿನಯಿಸಿ ತೋರಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬೆಂಕಿ ಮತ್ತು ಸುರಕ್ಷತೆಯ ಬಗ್ಗೆ ಶ್ರೀ ಸತ್ಯಜಿತ್ ಫಸ್ಟ್ ನ್ಯೂರೋ ಆಸ್ಪತ್ರೆ ಇವರು ಮಾಹಿತಿ ನೀಡಿದರು.






ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ಡಾ.ಮೀನಾ ಜೆ ಪಣಿಕ್ಕರ್ ಇವರು ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಸೂರಾಜ್ ಎಂ ದೇವಾಡಿಗ, ಅಮಿತ ಆಳ್ವ ಉಪಸ್ಥಿತರಿದ್ದರು. ವಿದ್ಯಾರ್ಥಿ ಕಾರ್ಯದರ್ಶಿಗಳಾದ ಶ್ರವಣ್ ಆಚಾರ್ಯ, ಮತ್ತು ದಿಶಾ ಕೆ.ಬಿ. ಕಾರ್ಯಕ್ರಮವನ್ನು ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು