10:18 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ಡಿಸೆಂಬರ್ ತಿಂಗಳ ಟಾಪರ್ ಆಗಿ ಭೂಮಿಕಾ ಆರ್. ಶೆಟ್ಟಿ ಹಾಗೂ ಬಾಲ ಪ್ರತಿಭೆ ಅರ್ಚಿತ್ ವಿ. ಕಶ್ಯಪ್ ಆಯ್ಕೆ

30/12/2021, 22:36

ಮಂಗಳೂರು(reporterkarnataka news): ‘ಆರದಿರಲಿ ಬದುಕು ಆರಾಧನಾ’ ಸಂಸ್ಥೆಯು ರಾಜ್ಯಮಟ್ಟದ ಕನ್ನಡ ಡಿಜಿಟಲ್ ಪತ್ರಿಕೆ ‘ರಿಪೋರ್ಟರ್ ಕರ್ನಾಟಕ’ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಡಿಸೆಂಬರ್ ತಿಂಗಳ ಟಾಪರ್ ಆಗಿ ಭೂಮಿಕಾ ಆರ್. ಶೆಟ್ಟಿ ಹಾಗೂ ಬಾಲ ಪ್ರತಿಭೆ ಅರ್ಚಿತ್ ವಿ. ಕಶ್ಯಪ್ ಆಯ್ಕೆಗೊಂಡಿದ್ದಾರೆ.

ಭೂಮಿಕಾ ಆರ್.ಶೆಟ್ಟಿ ಅವರು ಸರಕಾರಿ ಉದ್ಯೋಗಿ ರವೀಂದ್ರನಾಥ ಶೆಟ್ಟಿ ಹಾಗೂ ಉಜ್ವಲಾ ಆರ್. ಶೆಟ್ಟಿ ಅವರ ಪುತ್ರಿ. ಕಾಸರಗೋಡಿನ ಸಸಿಹಿತ್ಲು-ಶಿವ ಭೂಮಿ ನೆಟ್ಟಣಿಗೆಯ ನಿವಾಸಿ.


21ರ ಹರೆಯದ ಭೂಮಿಕಾ ಅವರು ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಡಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸಂಗೀತ ಗುರು ಬಾಲಸುಬ್ರಹ್ಮಣ್ಯಂ ಭಟ್ ಕೋಳಿಕ್ಕಜೆ ಅವರಿಂದ ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ವಾನ್ ಬಾಲಕೃಷ್ಣ. ಮಂಜೇಶ್ವರ ಅವರಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದಲ್ಲಿ  ಸೀನಿಯರ್ ಗ್ರೇಡ್ ಆಗಿದೆ. ಈಗ ವಿದ್ವತ್ ಅಭ್ಯಾಸ ಮಾಡುತ್ತಿದ್ದಾರೆ.

ಚಿಕ್ಕಂದಿನಿಂದಲೇ ಸಂಗೀತ, ಭರತನಾಟ್ಯ,ಚಿತ್ರ ಕಲೆಯಲ್ಲಿ ಆಸಕ್ತಿ ಹೊಂದಿದ್ದಾರೆ.

ಹಲವಾರು ಕಡೆಗಳಲ್ಲಿ ಗುರುಗಳ ಜೊತೆ ಸಂಗೀತ ಕಾಯ೯ಕ್ರಮ ನೀಡಿದ್ದಾರೆ. 230ಕ್ಕೂ ಹೆಚ್ಚು ಭರತನಾಟ್ಯ ಕಾರ್ಯಕ್ರಮ ನೀಡಿದ್ದಾರೆ.

ಇನ್ನು ಬಾಲ ಪ್ರತಿಭೆ ಅರ್ಚಿತ್ ವಿ. ಕಶ್ಯಪ್, ವಿನಯ್ ಎಂ. ಎಸ್. ಹಾಗೂ ಭವ್ಯಶ್ರೀ ಕೆ. ಎಸ್. ಅವರ ಪುತ್ರ. ಮೂಡಬಿದಿರೆಯ ಕಾರ್ಮೆಲ್ ಸ್ಕೂಲ್ ನಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಹಾಡುವುದು, ನೃತ್ಯ ಮಾಡುವುದು, ಓದುವುದು, ಚಿತ್ರ ಬಿಡಿಸುವುದು ಈತನಿಗೆ ತುಂಬಾ ಇಷ್ಟ.

ಕೃಷ್ಣ ವೇಷ ಸ್ಪರ್ಧೆಯಲ್ಲಿ 3 ಬಾರಿ ಬಹುಮಾನ ಗೆದ್ದಿದ್ದಾನೆ ಈ ಪೋರ. ಸಂಗೀತದಲ್ಲಿ(ಭಾವಗೀತೆ, ಭಕ್ತಿ ಗೀತೆ ಸ್ಪರ್ಧೆ, ದೇಶ ಭಕ್ತಿ ಗೀತೆ) 5 ಬಾರಿ ಭಾಗವಹಿಸಿ, 3 ಬಹುಮಾನ ಪಡೆದಿದ್ದಾನೆ. ಛದ್ಮವೇಷ ಸ್ಪರ್ಧೆ(6 ಬಾರಿ ಬಹುಮಾನ),

ನೃತ್ಯ ಸ್ಪರ್ಧೆ(2ಬಾರಿ ಬಹುಮಾನ), ಕ್ರಾಫ್ಟ್ ಮೇಕಿಂಗ್(ಕಾರ್ಡ್, ಕೈಟ್, ಗ್ರೀಟಿಂಗ್ ಕಾರ್ಡ್, ಬ್ಯಾಗ್ ಮೇಕಿಂಗ್)(4 ಬಹುಮಾನ), ಮುದ್ದು ಶಾರದೆ ಸ್ಪರ್ಧೆ(1 ಬಾರಿ ಬಹುಮಾನ) ಪಡೆದಿದ್ದಾನೆ.

ಕಂಠ ಪಾಠ ಸ್ಪರ್ಧೆ; ನೇಷನಲ್ ಅನಲೇಟಿಕಲ್ ಬ್ರೈನ್ ಅಂಡ್ ಮಾಥ್ಸ್,-ಸೈನ್ಸ್,-ಇಂಗ್ಲೀಷ್ ಒಲಿಂಪಿಯಾಡ್ ಸ್ಪರ್ಧೆಗಳು (2021, ಚಾಂಪಿಯನ್ runner up, 2020 ನಲ್ಲಿ excellent ಗ್ರೇಡ್ ಗಳಿಕೆ), ಚಿತ್ರಕಲೆ(9 ಬಾರಿ ಭಾಗವಹಿಸಿದರಲ್ಲಿ, 6 ಬಾರಿ ಬಹುಮಾನ), ಕ್ರೀಡೆ (1 ಬಹುಮಾನ), ಶಾಲಾ ಮಟ್ಟದ ಇತರ ಸ್ಪರ್ಧೆಗಳು(ಹ್ಯಾಂಡ್ ರೈಟಿಂಗ್, ಕರಾಟೆ, memory test, ರಿಸೈಟೇಷನ್ etc..)(4 ಬಹುಮಾನ), ಕಥಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 33 ಬಹುಮಾನ ಗಳಿಸಿದ್ದಾನೆ. ಇದರೊಂದಿಗೆ Parenting nation ರಾಜ್ಯಮಟ್ಟದ baby ಫೋಟೋ ಕಾಂಟೆಸ್ಟ್ ನಲ್ಲಿ  2017ರ ವಿಜೇತನಾಗಿದ್ದಾನೆ.

ವಾಯ್ಸ್ ಆಫ್ ಆರಾಧನಾ ವೇದಿಕೆಯಡಿ ಮಕ್ಕಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಜೊತೆಗೆ  3 ಬಾರಿ ಲೈವ್ ಪ್ರೋಗ್ರಾಂ ಹಾಗೂ ಕನಸುಗಳ ಇನ್ಫಿನಿಟಿ ಕಥಾ ಚಾಲೆಂಜ್ ನಲ್ಲಿ 1ಬಾರಿ ಲೈವ್ ಪ್ರೋಗ್ರಾಂ ನೀಡಿದ್ದಾನೆ. *Archith Moodbidri* ಎಂಬ ಸ್ವಂತ YouTube channel nalli ಕೂಡ ತನ್ನ ವಿಡಿಯೋಗಳ ಮೂಲಕ ಪ್ರತಿಭಾ ಅನಾವರಣ ಮಾಡಿರುತ್ತಾನೆ. ಜೊತೆಗೆ, ಶೈಕ್ಷಣಿಕವಾಗಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾನೆ.

ಇತ್ತೀಚಿನ ಸುದ್ದಿ

ಜಾಹೀರಾತು