ಇತ್ತೀಚಿನ ಸುದ್ದಿ
ಕೊರೊನಾ ಸೋಂಕಿತರಿಗೆ ಆತ್ಮವಿಶ್ವಾಸ ತುಂಬಲು, ನೋವು ಮರೆಯಲು ಸಂಗೀತ ರಸದೌತಣ, ಯೋಗ
03/06/2021, 06:42
ಡಿ .ಆರ್. ಜಗದೀಶ್ ನಾಗಮಂಗಲ
info.reporterkarnataka@gmail.com
ಸೋಂಕಿತರಲ್ಲಿ ತಮ್ಮ ನೋವನ್ನು ಮರೆಸು ಶಕ್ತಿ ಸಂಗೀತದ ರಸದೌತಣದಲ್ಲಿದೆ. ಸೋಂಕಿತರು ಆತ್ಮವಿಶ್ವಾಸ ಹಾಗೂ ಆರೋಗ್ಯದಿಂದ ಇರಬೇಕೆಂದು ಶಾಸಕ ಸುರೇಶ್ ಗೌಡ ತಿಳಿಸಿದರು.
ದೇವಲಾಪುರ ಹೋಬಳಿ ಸಮೀಪವಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕೋವಿಡ್ ಸೆಂಟರ್ ನ ಕೇಂದ್ರದಲ್ಲಿರುವ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಯೋಗ ಹಾಗೂ ಜನಪದ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು.
ಸೋಂಕಿತರಲ್ಲಿ ಭಯ, ಆತಂಕ ದೂರ ಮಾಡಲು ಯೋಗ ಹಾಗೂ ಸಂಗೀತ ಇವೆರಡನ್ನು ಆಸ್ವಾದಿಸಬೇಕು. ಆರೋಗ್ಯಕರ ವಾತಾವರಣದಿಂದ ಕೊರೊನಾ ಮುಕ್ತರಾಗಿ ಆರೋಗ್ಯವಾಗಿರಿ ಎಂದು ತಿಳಿಸಿದರು.
ಸೋಂಕಿತರು ಭಯಪಡದೆ ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಚಿಕಿತ್ಸೆಯನ್ನು ಪಡೆದುಕೊಂಡು ಕೋವಿಡ್ ನಿಯಮಗಳನ್ನು ಪಾಲಿಸಿ ಎಚ್ಚರಿಕೆಯಿಂದ ಸೋಂಕನ್ನು ಗುಣ ಪಡಿಸಿಕೊಂಡು ನಗುನಗುತ ಮನೆಗೆ ತೆರಳಿ. ಸಂತೋಷದಿಂದ ಜೀವನ ನಡೆಸಿ ಎಂದು ತಹಶೀಲ್ದಾರ್ ಕುಂಞಿ ಅಹಮದ್ ಮನವಿ ಮಾಡಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಮೇಶ. ಪೊಲೀಸ್ ಇಲಾಖೆಯವರು ಹಾಜರಿದ್ದರು.
ಮಂಜೇಶ್ ನೇತೃತ್ವದ ಗಾಯಕರು ಜನಪದ ಸಂಜೆ ಕಾರ್ಯಕ್ರಮ ನಡೆಸಿ ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಿದರು.