ಇತ್ತೀಚಿನ ಸುದ್ದಿ
ಸರಕಾರದ ಬಿಟ್ಟಿ ಕೆಲಸಕ್ಕೆ ಬೇಕು ಅಂಗನವಾಡಿ ಕಾರ್ಯಕರ್ತೆಯರು!: ಹತ್ತರ ಜತೆ ಹನ್ನೊಂದು ಈ ಕೊರೊನಾ ಸಮೀಕ್ಷೆ ಕೆಲಸ !!
02/06/2021, 16:32
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಪಂಚಾಯಿತಿ ಮಟ್ಟದ ಅಂಗನವಾಡಿ ಕಾರ್ಯಕರ್ತರಿಗೆ ಕೋವಿಡ್ ಸಮೀಕ್ಷೆ ಮಾಡುವಂತೆ ಸರಕಾರ ಆದೇಶಿಸಿದೆ. ಆದರೆ ಬಿಎಲ್ ಒ ಆಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಸರಕಾರ
ಯಾವುದೇ ಭದ್ರತೆ ನೀಡುತ್ತಿಲ್ಲ. ಕೊರೊನಾ ವಾರಿಯರ್ಸ್ ಎಂದು ಕೂಡ ಪರಿಗಣಿಸಿಲ್ಲ.
ಸರಕಾರ ಪ್ರತಿಯೊಂದು ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತರನ್ನು ಮುಂದೆ ತಳ್ಳುತ್ತದೆ. ಸರಕಾರ ಆದೇಶ ಪ್ರಕಾರ ಶಾಲಾ-ಕಾಲೇಜುಗಳು
ಬಂದಾಗಿವೆ. ಆದರೆ ಅತೀ ಸಣ್ಣ ವೇತನ ಪಡೆಯುವ ಅಂಗನವಾಡಿ ಕಾರ್ಯಕರ್ತರನ್ನು
ಪ್ರತಿಯೊಂದು ಕೆಲಸಕ್ಕೆ ನೇಮಿಸುತ್ತದೆ. ಸರಕಾರದ ಪ್ರಸ್ತುತ ಆದೇಶ ಪ್ರಕಾರ ಇವರು ಕೋವಿಡ್ ಸೋಂಕಿತರ ಮನೆಗೆ ಹೋಗಿ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಮಾಹಿತಿ ಪಡೆಯಬೇಕು. ಆದರೆ
ಸಮೀಕ್ಷೆ ನಡೆಸುವ ಇವರ ಜೀವನಕ್ಕೆ ಯಾವುದೇ ಭದ್ರತೆಯಿಲ್ಲ. ವಿಶೇಷವೆಂದರೆ ವಾಕ್ಸಿನ್ ಮಾಡಲಾಗಿದೆಯೇ ಎನ್ನುವುದನ್ನು ಕೂಡ ಸ್ಥಳೀಯ ಅಧಿಕಾರಿಗಳು ವಿಚಾರಿಸುತ್ತಿಲ್ಲ.
ಸರ್ಕಾರ ಕೂಡಲೇ ನಮ್ಮನ್ನು ಕೂಡ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ಸಿಗುವ ಸೌಲಭ್ಯವನ್ನು ಒದಗಿಸಬೇಕು ಹಾಗೂ ಸರಕಾರ ಘೋಷಿಸಿದ ಪ್ಯಾಕೇಜ್ ಕೊಡಬೇಕೆಂದು ಅಂಗನವಾಡಿ ಕಾರ್ಯಕರ್ತ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಇಂದು ಯಾವುದೇ ಭದ್ರತೆ ಇಲ್ಲದೆ ಅಂತರಗಂಗೆ ಗ್ರಾಮದ ಲಲಿತಾ ಸಾಲಿಮಠ್ ಅವರು ಸಿಬ್ಬಂದಿ ವರ್ಗದಿಂದ ಕಾರ್ಯನಿರ್ವಹಿಸುವುದು ಕಂಡು ಬಂತು.