2:01 PM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಐಕಾನ್ ವಿನ್ನರ್ಸ್ ಆಗಿ ಹೊರ ಹೊಮ್ಮಿದ ಕಿಂಗ್ಸ್ ಆಫ್ ಕೂರ್ಗ್

23/12/2021, 09:54

ಮಡಿಕೇರಿ(reporterkarnataka.com):

ಸೋಮವಾರಪೇಟೆಯ ಅಡ್ವೆಂಚರ್ ಡ್ಯಾನ್ಸ್ ಕಂಪೆನಿ ವತಿಯಿಂದ ಅಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ವಿನ್ನರ್ಸ್ ಆಗಿ ಹೊರ ಹೊಮ್ಮಿದೆ.

ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹಾಡಿಗೆ ಯಕ್ಷಗಾನ, ಕೊಡವ ನೃತ್ಯ, ಕೋಲಾಟ, ಕಂಸಾಳೆ, ವೀರಗಾಸೆ, ಭರತನಾಟ್ಯ, ಡೊಳ್ಳು ಕುಣಿತವನ್ನು ಒಂದೇ ನೃತ್ಯ ಪ್ರಾಕಾರದಲ್ಲಿ ಪ್ರದರ್ಶಿಸಲಾಯಿತು. ಸಂಸ್ಥೆಯ ತರಬೇತುದಾರ ಮಹೇಶ್ ಮಾರ್ಗದರ್ಶನದಲ್ಲಿ ಜೂನಿಯರ್ ತಂಡದ ದಿಲನ್ ಆರ್., ಕುಡೆಕಲ್ ನಿಹಾಲ್, ಪೋಷಿತಾ, ತುಷಾರ, ಡಯಾನ, ಜೀವಿತ, ಅಭಿ, ಮೋಕ್ಷ ವಿ.ಎಲ್., ದಿಲನ್ ಹೆಚ್.ಆರ್., ಪ್ರಜ್ವಲ್ ಕ್ರಾಸ್ತಾ, ದಿಯಾ ದರ್ಶಿನಿ, ಗ್ರೀಷ್ಮ, ಅನುಕ್ತ, ಶಶಾಂಕ್, ವರ್ಣವಿ ನೃತ್ಯ ಪ್ರದರ್ಶನ ಮಾಡಿದರು.

ಸ್ಪರ್ಧೆಯನ್ನು ಮೈಸೂರಿನ ಸಾಯಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷೆ ಸಹನಾ ಉದ್ಘಾಟಿಸಿದರು. ಅತಿಥಿಗಳಾಗಿ ಮಡಿಕೇರಿಯ ಗುರುಕುಲ ಕಲಾ ಮಂಡಳಿಯ ಸ್ಥಾಪಕ ಪಿ.ಎನ್.ದಿನೇಶ್, ಸುಳ್ಯದ ಡಿ ಯುನೈಟೆಡ್‌ನ ನೃತ್ಯ ಸಂಯೋಜಕ ಅಭಿ ಕುಲಾಲ್, ಸಹಾಯಕ ನೃತ್ಯ ಸಂಯೋಜಕಿ ಆರ್.ವಿ.ಭೂಮಿಕಾ ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಪ.ಪಂ. ಅಧ್ಯಕ್ಷ ಪಿ.ಕೆ.ಚಂದ್ರು, ಸದಸ್ಯ ಎಂ.ವಿ.ಜೀವನ್, ಹಿಂ.ಜಾ.ವೇ. ಜಿಲ್ಲಾ ಉಪಾಧ್ಯಕ್ಷ ಸುಭಾಶ್, ಮಾಜಿ ಸೈನಿಕ ಎನ್. ವಿ.ಚಂದ್ರಶೇಖರ್, ಪೊಲೀಸ್ ನಿರೀಕ್ಷಕ ಬಿ.ಜೆ.ಮಹೇಶ್, ವಕೀಲ ಬಿ.ಜೆ ದೀಪಕ್, ಮೇಘನಾ ಡ್ರೈವಿಂಗ್  ಸ್ಕೂಲ್ ನ 

ಮಂಜುನಾಥ್ ಇನ್ನಿತರರು ಭಾಗವಹಿಸಿ ಬಹುಮಾನ ವಿತರಣೆ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು