3:58 AM Friday4 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಆಸ್ಪತ್ರೆ ಸೇರಿದ್ದ ಮಂದಾರ ತ್ಯಾಜ್ಯ ದುರಂತ ಸಂತ್ರಸ್ತೆ ವಿಧಿವಶ: ಮೃತರ ಸಂಖ್ಯೆ 3ಕ್ಕೆ ಏರಿಕೆ: ಧಕ್ಕದ ಪರಿಹಾರ ದುಃಖದ ಜೀವನ ! 

17/12/2021, 13:51

ಮಂಗಳೂರು(reporterkarnataka.com): ಬದುಕು ಕಟ್ಟಿಕೊಂಡ ಫಲವತ್ತಾದ ಹಸಿರು ನೆಲವನ್ನು ತ್ಯಾಜ್ಯ ರಾಶಿ ನುಂಗಿದ ಬಳಿಕ ಸರ್ವಸ್ವವನ್ನೂ ಕಳೆದುಕೊಂಡು ಆಸ್ಪತ್ರೆ ಸೇರಿದವರ ಪೈಕಿ ಪಾರಂಪರಿಕ ಮನೆತನಕ್ಕೆ ಸೇರಿದ ಹಿರಿಯ ಜೀವ ರಾಧಾ ಭಟ್ ಅವರು ವಿಧಿವಶರಾಗಿದ್ದಾರೆ. ಇದರೊಂದಿಗೆ ಮಂದಾರ ಸಂತ್ರಸ್ತರಲ್ಲಿ ಮೃತರ ಸಂಖ್ಯೆ 3ಕ್ಕೇರಿದೆ. ಇನ್ನೊಬ್ಬ ಸಂತ್ರಸ್ತರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಖ್ಯಾತ ಸಾಹಿತಿ ದಿವಂಗತ ಮಂದಾರ ಕೇಶವ ಭಟ್ ಅವರ ಪಾರಂಪರಿಕ ಮನೆತನಕ್ಕೆ ಸೇರಿದ ದಿವಂಗತ ಮಾಧವ ಭಟ್ ಅವರ ಪತ್ನಿ ರಾಧಾ ಭಟ್ ಅವರು ತ್ಯಾಜ್ಯ ದುರಂತದಿಂದ ಸರ್ವಸ್ವವನ್ನೂ ಕಳೆದುಕೊಂಡಿದ್ದರು. ಮಧ್ಯಂತರ ಪರಿಹಾರ ಬಿಟ್ಟರೆ ಸಂತ್ರಸ್ತರಿಗೆ ಜಿಲ್ಲಾಡಳಿತವಾಗಲಿ, ರಾಜ್ಯ ಸರಕಾರವಾಗಲೀ ಯಾವುದೇ ವ್ಯವಸ್ಥೆ ಮಾಡಿಲ್ಲ. ತ್ಯಾಜ್ಯ ದುರಂತದಿಂದ ಹುಟ್ಟಿ ಬೆಳೆದ ನೆಲ ಜಲವನ್ನು ಕಳೆದುಕೊಂಡ ರಾಧಾ ಭಟ್ ಅವರು ತೀವ್ರ ಆಘಾತಕ್ಕೀಡಾಗಿದ್ದರು. 1.48 ಎಕರೆ ಜಾಗವನ್ನು ಅವರು ಕಳೆದು ಕೊಂಡಿದ್ದರು. ಇದರಿಂದ ಅವರ ಆರೋಗ್ಯ ಕೆಡಲಾರಂಭಿಸಿತು. ಇತ್ತೀಚೆಗೆ ಕೋಮಾ ಸ್ಥಿತಿಗೆ ತಲುಪಿದ ಅವರನ್ನು ನಗರದ ಕೊಲಾಸೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ತ್ಯಾಜ್ಯ ದುರಂತಕ್ಕೆ ಕೆಲವು ವರ್ಷಗಳ ಮುನ್ನ  2004-05ರಲ್ಲಿ ಪಚ್ಚನಾಡಿ ಡಂಪಿಂಗ್ ಯಾರ್ಡ್ ಗೆ ಅವರ 12.71 ಎಕರೆ ಜಾಗವನ್ನು ಮಂಗಳೂರು ಮಹಾನಗರಪಾಲಿಕೆ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಅಂದು ನಿಗದಿಪಡಿಸಿದ ದರವನ್ನು ಪಾಲಿಕೆ ನೀಡಿಲ್ಲ ಎಂಬ ಆರೋಪ ಇದೆ. ಈ ಕುರಿತು ಪ್ರಕರಣ ರಾಜ್ಯ ಹೈಕೋರ್ಟ್ ನಲ್ಲಿದೆ. ಇದಲ್ಲದೆ 15 ಸೆಂಟ್ಸ್ ಕನ್ವರ್ಸನ್ ಭೂಮಿ, ಒಂದು ನಾಗಬನ, ದೈವಸ್ಥಾನ, ಪಾರಂಪರಿಕ ಮನೆ ಹಾಗೂ ಇತರ ಎರಡು ಮನೆ, ಫಲಭರಿತ ಅಡಿಕೆ, ಒಂದು ಸಾವಿರಕ್ಕೂ ಹೆಚ್ಚು ಕರಿಮೆಣಸಿನ ಬಳ್ಳಿ, 2 ಕೆರೆ, ಒಂದು ಬಾವಿ, ಪಂಪ್ ಸೆಟ್, ಅರಣ್ಯ ಉತ್ಪನ್ನ 10 ಲಕ್ಷ ಟನ್ ಕಸದೊಳಗೆ ಹುದುಗಿ ಹೋಗಿದೆ.

ಇನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇನ್ನೊಬ್ಬ ಸಂತ್ರಸ್ತರಾದ ಸೋಮಪ್ಪ ಮೊಯ್ಲಿ ಅವರು ಅರೆ ಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರು ಬ್ರೈನ್ ಸ್ಟ್ರೋಕ್ ಗೆ ಗುರಿಯಾಗಿದ್ದಾರೆ.

ಸ್ಟ್ರೋಕ್ ನಿಂದ ಬಿದ್ದುಬಿಟ್ಟು ತಲೆಗೆ ಏಟಾಗಿದೆ. ಮನೆ ಮಠ ಕಳೆದುಕೊಂಡ ದುಃಖದಲ್ಲೇ ಅವರು ಅನಾರೋಗ್ಯಕ್ಕೊಳಗಾಗಿದ್ದಾರೆ. ಮಂದಾರ ಸಂತ್ರಸ್ತರೆಲ್ಲ 

ಕುಲಶೇಖರ ಬಳಿಯ ಗೃಹ ನಿರ್ಮಾಣ ಮಂಡಳಿಯ ಫ್ಲ್ಯಾಟ್ ನಲ್ಲಿ ಜೀವನ ನಡೆಸುತ್ತಿದ್ದಾರೆ. ಫ್ಲ್ಯಾಟ್ ನ್ನು ಸಂತ್ರಸ್ತರ ಹೆಸರಿಗೆ ಮಾಡಿಕೊಡುವುದಾಗಿ ಆರಂಭದಲ್ಲಿ ಜಿಲ್ಲಾಡಳಿತ ಆಶ್ವಾಸನೆ ನೀಡಿತ್ತು. ಆದರೆ ದುರಂತ ನಡೆದು 2 ವರ್ಷ ಕಳೆದರೂ ಸಂತ್ರಸ್ತರ ಹೆಸರಿಗೆ ಫ್ಲ್ಯಾಟ್ ಧಕ್ಕಿಲ್ಲ. ಜಿಲ್ಲಾಡಳಿತ, ರಾಜ್ಯ ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು