10:06 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಕೋಪ ಬಂದಾಗಲೆಲ್ಲ ಗೋಡೆಗೆ ಮೊಳೆ ಹೊಡಿ: ಸಿಡುಕಿನ ಪುತ್ರನಿಗೆ ಅಪ್ಪ ಮಾಡಿದ ಉಪದೇಶ

01/06/2021, 18:36

ಯುವಚಿಂತನ
ಒಮ್ಮೆ ಒಬ್ಬ ಬಹು ಸಿಡುಕಿನ ಹುಡುಗನಿದ್ದ. ಅವನಿಗೆ ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ಕೋಪ. ಅವನ ಕೋಪದಿಂದ ಅವನಿಗೇ ತೊಂದರೆಯಾಗುತ್ತಿತ್ತು. ಆದರೆ ಅದರಿಂದ ಹೊರಬರಲಾಗುತ್ತಿರಲಿಲ್ಲ.

ಆ ಹುಡುಗ ತನ್ನ ತಂದೆಯ ಬಳಿ ಇದಕ್ಕೆ ಒಂದು ಪರಿಹಾರವನ್ನು ಕೇಳಿದ. ತಂದೆ ಹೇಳಿದರು ‘ಮಗನೇ, ನಾನು ಒಂದು ಸಲಹೆಯನ್ನು ಕೊಡುತ್ತೇನೆ. ಪ್ರತಿ ಬಾರಿ ಕೋಪ ಬರುವಾಗ ಒಂದು ಮೊಳೆಯನ್ನು ಗೋಡೆಗೆ ಹೊಡೆ. ಬೇರೆ ಏನನ್ನೂ ಮಾಡಬೇಡ’.

ಮಗನು ತನ್ನ ತಂದೆಯ ಮಾತನ್ನು ಅನುಸರಿಸಲು ಪ್ರಯತ್ನ ಮಾಡಿದ. ಪ್ರತೀ ಬಾರಿ ಕೋಪ ಬರುವಾಗ ಒಂದು ಮೊಳೆಯನ್ನು ಗೋಡೆಗೆ ಬಡಿದ. ಮೊದಲ ದಿನ ಮೂವತ್ತು ಮೊಳೆಗಳು ಗೋಡೆಯನ್ನೇರಿದವು. ದಿನದಿಂದ ದಿನಕ್ಕೆ ಅದರ ಲೆಕ್ಕ ಕಡಿಮೆ ಆಯಿತು. ಹೀಗೆ ಒಂದು ತಿಂಗಳು ಕಳೆಯುವಾಗ ಒಂದು ಪೂರ್ತಿ ಗೋಡೆಯು ಮೊಳೆಗಳಿಂದ ತುಂಬಿತ್ತು ಮತ್ತು ಅವನ ಕೋಪವೂ ಬಹುಪಾಲು ಕಮ್ಮಿ ಆಗಿತ್ತು. ಏಕೆಂದರೆ ಮೊಳೆ ಹೊಡೆಯುವುದರಿಂದ ಕೋಪವನ್ನು ನಿಯಂತ್ರಿಸಿಕೊಳ್ಳುವುದು ಸುಲಭ ಅನ್ನಿಸಿತ್ತು. ಅದನ್ನು ತನ್ನ ತಂದೆಯ ಬಳಿ ಹೇಳಿದ. ತಂದೆ ಹೇಳಿದರು ‘ ಮಗನೇ, ಇನ್ನು ಮುಂದೆ ಪ್ರತೀ ಬಾರಿ ಕೋಪ ಬಂದು ಅದನ್ನು ನಿಯಂತ್ರಿಸಿಕೊಳ್ಳುವಾಗ ಹೊಡೆದಿರುವ ಒಂದೊಂದು ಮೊಳೆಯನ್ನು ಗೋಡೆಯಿಂದ ತೆಗೆ.

ಹೀಗೆ ಎರಡು ತಿಂಗಳು ಕಳೆಯುವಾಗ ಗೋಡೆಯಲ್ಲಿರುವ ಎಲ್ಲಾ ಮೊಳೆಗಳು ಖಾಲಿಯಾದವು. ಹಾಗೂ ಹುಡುಗನ ಕೋಪವೂ ಕಮ್ಮಿಯಾಯಿತು. ಬಲು ಖುಷಿಯಿಂದ ಹುಡುಗ ತನ್ನ ತಂದೆಗೆ ಗೋಡೆಯನ್ನು ತೋರಿಸಿದ.ಆಗ ತಂದೆ ಮಗನಿಗೆ ಮನ ಮುಟ್ಟುವಂತೆ ಒಂದು ಮಾತನ್ನು ಹೇಳಿದರು ‘ ಮಗನೇ, ಈ ಗೋಡೆಯನ್ನು ನೋಡು. ಅದರಲ್ಲಿ ಆಗಿರುವ ರಂಧ್ರಗಳು ನೀನು ಮಾಡಿರುವ ಮೊದಲ ತಪ್ಪುಗಳನ್ನು ತೋರಿಸುತ್ತಿವೆ. ಕೋಪದಿಂದ ಆಗುವ ಅನಾಹುತವೂ ಹಾಗೆಯೇ. ಆಡಿದ ಮಾತು, ತೆಗೆದುಕೊಂಡ ನಿರ್ಧಾರಗಳು ತಪ್ಪಾಗಿರುತ್ತವೆ ಮತ್ತು ಜೀವನ ಪೂರ್ತಿಯೂ ಕಾಡುತ್ತಿರುತ್ತವೆ. ನಂತರ ಪ್ರಾಯಶ್ಚಿತ್ತ ಪಟ್ಟು ಪ್ರಯೋಜನವಿಲ್ಲ “. ಹುಡುಗನಿಗೆ ತನ್ನ ತಪ್ಪಿನ ಅರಿವಾಯಿತು.

ಕ್ರೋಧೋ ಮೂಲಂ ಅನರ್ಥಾನಾಮ್, ಕ್ರೋಧಃ ಸಂಸಾರ ಬಂಧನಮ್, ಧರ್ಮಕ್ಷಯಕರಃ ಕ್ರೋಧಃ, ತಸ್ಮಾತ್ ಕ್ರೋಧಮ್ ವಿವರ್ಜಯೇತ್ ” ಅಂದರೆ ಕೋಪವು ಎಲ್ಲಾ ಅನಾಹುತಗಳಿಗೂ ಮೂಲ ಕಾರಣ. ಕೋಪವು ಸಂಸಾರ ಬಂಧನಕ್ಕೂ, ಧರ್ಮ ನಾಶಕ್ಕೂ ಕಾರಣೀಭೂತ. ಅದಕ್ಕೋಸ್ಕರ ಕೋಪವನ್ನು ತ್ಯಜಿಸಬೇಕು ಎಂಬ ಸಂಸ್ಕೃತದ ನುಡಿಯು ಅರ್ಥಗರ್ಭಿತವಾದದ್ದು,

ಈ ಮೇಲಿನ ಕಥೆಯು ಕೋಪ ಮಾತ್ರವಲ್ಲದೇ, ಯುವಜನತೆಗೆ ಯಾವುದೇ ದುರಭ್ಯಾಸಗಳು ಹೇಗೆ ದುಷ್ಪರಿಣಾಮ ಬೀಳಬಹುದೆಂದು ಮಾರ್ಮಿಕವಾಗಿ ತಿಳಿಸುತ್ತದೆ. ಕುಡಿತ, ಮಾದಕ ವ್ಯಸನ, ತಂಬಾಕು ಸೇವನೆ, ಸುಳ್ಳು ಹೇಳುವುದು ಯಾವುದೇ ಕೆಟ್ಟ ಚಟಗಳಿಗೆ ಬಿದ್ದರೆ ಅದರಿಂದ ಹೊರ ಬರುವುದು ತುಂಬಾ ಕಷ್ಟ ಹಾಗೂ ಹೊರ ಬಂದ ಮೇಲೆಯೂ ಅದರ ಪರಿಣಾಮಗಳು ಜೀವನದುದ್ದಕ್ಕೂ ಇರುತ್ತವೆ. ಇದನ್ನು ಅರಿತವರು ಒಳ್ಳೆಯ ಮಾರ್ಗದಲ್ಲಿ ಸಂಸ್ಕಾರಯುತರಾಗಿ ಬಾಳಬಹುದು ಎಂಬುದೇ ಇದರ ಸಂದೇಶ.

 ಪ್ರತಿಜ್ಞಾ ಸುಹಾಸಿನಿ  

ಪ್ರಾಂಶುಪಾಲರು ಮಂಗಳ ಕಾಲೇಜು

ಇತ್ತೀಚಿನ ಸುದ್ದಿ

ಜಾಹೀರಾತು