1:50 PM Saturday4 - October 2025
ಬ್ರೇಕಿಂಗ್ ನ್ಯೂಸ್
Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ…

ಇತ್ತೀಚಿನ ಸುದ್ದಿ

ವೈಜ್ಞಾನಿಕ ಅಧ್ಯಯನ ಪ್ರವಾಸ: ವಿಜ್ಞಾನ ಕಲಿಕೆಗೆ ಪೂರಕ

06/12/2021, 15:15

ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ, ಅಂತರ್ ಶಿಸ್ತು, ಬೌದ್ಧಿಕ ಮತ್ತು ಮಾನಸಿಕ ವಿಕಾಸ ಹೊಂದಲು ಶಾಲಾ ಶಿಕ್ಷಣ ಅತಿ ಅವಶ್ಯಕವಾಗಿದೆ. ನಾಲ್ಕು ಗೋಡೆಗಳ ಶಾಲಾ ಪರಿಸರದಲ್ಲಿ ಶಿಕ್ಷಕರು ,ಪಠ್ಯಪುಸ್ತಕ ಗಳ ಬೋಧನೆಯ ನಡುವೆ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿದಾಯಕವಾಗಿ ಕಲಿಯುವ ವಿಷಯ ವಿಜ್ಞಾನ.

ವಿಜ್ಞಾನವು ಸತ್ಯಾಂಶಗಳ ಬಗೆಗಿನ ಕ್ರಮಬದ್ಧವಾದ ಅಧ್ಯಯನವಾಗಿದೆ. ವಿಶ್ವದ ಬಗೆಗಿನ ಜ್ಞಾನವನ್ನು ನೀಡುವ ಮೂಲಕ ವಿಶ್ವಾಸಾರ್ಹತೆ ,ತಾರ್ಕಿಕತೆ, ಸಂಶೋಧನೆ, ಸತ್ಯ, ನಿಖರತೆ, ವೈಜ್ಞಾನಿಕ ಮನೋಭಾವನೆ ,ಬೌದ್ಧಿಕ ವಿಕಾಸ ,ಅನ್ವೇಷಣಾ ಭಾವನೆ, ಹೊಂದಾಣಿಕೆ ,ಸಹಕಾರ ಮೊದಲಾದವುಗಳನ್ನು ವಿಜ್ಞಾನ ಅಧ್ಯಯನದಿಂದ ವಿಧ್ಯಾರ್ಥಿಗಳು ಗಳಿಸಿಕೊಳ್ಳಬಹುದು. 

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಮಾತಿನಂತೆ ವಿದ್ಯಾರ್ಥಿಗಳು ಪಠ್ಯಪುಸ್ತಕದಲ್ಲಿ ಕಲಿತಿರುವ ವಿಷಯವನ್ನು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದಾಗ ಸಿಗುವ ಜ್ಞಾನಕ್ಕೆ ಸಮಾನವಾದುದು ಬೇರೊಂದು ಇಲ್ಲ.

ವಿಜ್ಞಾನದ ಕೆಲವೊಂದು ವಿಷಯಗಳನ್ನು ತರಗತಿಗಳಲ್ಲಿ ವಿವರಿಸಲು ಹಾಗೂ ಕಲ್ಪನೆಯನ್ನು ಮೂಡಿಸಲು ಅಸಾಧ್ಯವಾಗಿರುವಂತಹ


ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಮತ್ತು ವಿಜ್ಞಾನದ ಬಗ್ಗೆ ಆಸಕ್ತಿ ಯನ್ನು ಮೂಡಿಸಲು ವೈಜ್ಞಾನಿಕ ಅಧ್ಯಯನ ಪ್ರವಾಸ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ತರಗತಿ ಕಲಿಕೆಗೆ ಪೂರಕವಾಗುವಂತೆ ಜೊತೆಗೆ  ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಾಗೂ ನೈಜ ಜೀವನದಲ್ಲಿ ಸ್ವಾವಲಂಬಿಯಾಗುವ ಅಂತಹ ವಾತಾವರಣವನ್ನು ನಿರ್ಮಿಸಲು ವೈಜ್ಞಾನಿಕ ಅಧ್ಯಯನ ಪ್ರವಾಸ ಉತ್ತಮ ಸಾಧನವಾಗಿದೆ. ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಹಾಗೂ ವಿಜ್ಞಾನಕ್ಕೆ ಅನುಕೂಲಕರವಾದ ವಾತಾವರಣ ಕಡಿಮೆ ಇರುವ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸುವುದು ಕೂಡಾ ಸವಾಲಿನ ಸಂಗತಿಯಾಗಿದೆ… ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ ಮಕ್ಕಳಲ್ಲಿ ಹೊಸ ಕನಸನ್ನು ಬಿತ್ತಿ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವೈಜ್ಞಾನಿಕ ಅಧ್ಯಯನ ಪ್ರವಾಸ ಸಹಕಾರಿಯಾಗಬೇಕೆಂಬುದೇ ನಮ್ಮ ಆಶಯ.

✍️

ಇತ್ತೀಚಿನ ಸುದ್ದಿ

ಜಾಹೀರಾತು