8:30 PM Saturday20 - September 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ಕಟಾವಿಗೆ ಮುನ್ನವೇ ಮೊಳಕೆಯೊಡೆದ ಶೇಂಗಾ, ತೊಗರಿ: ಸಾಲದ ಸುಳಿಗೆ ಸಿಲುಕಿದ ಚಿತ್ರದುರ್ಗ ರೈತರು

01/12/2021, 10:41

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka.com

ಕಟಾವು ಮಾಡುವ ಮುನ್ನವೇ ಹೊಲದಲ್ಲೇ ಮೊಳಕೆ ಹೊಡೆದ ಶೇಂಗಾ, ತೊಗರಿ ಬೆಳೆಯಿಂದ ಹಾಕಿದ ಬಂಡವಾಳ ಕೈ ಸಿಗದೆ ಸಾಲದ ಸುಳಿಗೆ ಸಿಲುಕುವಂತಾಗಿದ್ದು, ಬೆಳೆ ನಷ್ಟ ಪರಿಹಾರ ಹಾಗೂ ಬೆಳೆವಿಮೆ ಕೊಡಿಸುವಂತೆ ರೈತರು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ  ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಚಳ್ಳಕೆರೆ ತಾಲೂಕಿನ  ಬಾಲೆನಹಳ್ಳಿ, ಕೋಡಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಮುಂಗಾರ ಹಂಗಾಮಿನ ಶೇಂಗಾ ಹಾಗೂ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಕಡಲೆ ಬೆಳೆಗಳ ಹೊಲಗಳಿಗೆ ಕೃಷಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳೆ ನಷ್ಟವನ್ನು ಪರಿಶೀಲನೆ ನಡೆಸಿದರು.

ನಂತರ ರೈತರೊಂದಿಗೆ ಮಾತನಾಡಿ ತಾಲೂಕಿನಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಶೇಂಗಾ, 1200 ಹೆಕ್ಟೇರ್ ಕಡಲೆ, 8900 ಹೆಕ್ಟೇರ್ ಈರುಳ್ಳಿ, 770 ಹೆಕ್ಟೇರ್ ದಾಳಿಂಬೆ ಪಪ್ಪಾಯಿ ಸೇರಿದಂತೆ ಇತರೆ ಬೆಳೆ ನಷ್ಟವಾಗಿರುವ ಬಗ್ಗೆ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ವರದಿ ಸಲ್ಲಿಸಿದ್ದು ನಷ್ಟವಾದ ಬೆಳೆಗಳ ವರದಿಯನ್ನು ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ಚುರುಕು ಮುಟ್ಟಿಸಿದ್ದು ಬೆಳೆ ನಷ್ಟವಾದ ಬಗ್ಗೆ ರೈತರು ಅರ್ಜಿಗಳನ್ನಿಡಿದು ಯಾರು ಕಚೇರಿಗೆ ಅಲೆದಾಡ ಬಾರದು ರೈತರ ಎಲ್ಲಾ ಮಾಹಿತಿ ತಂತ್ರಾಂಶದಲ್ಲಿದೆ ನೇರವಾಗಿ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರದ ಹಣ ಜಮ ಮಾಡಲಾಗುವು ಬೆಳೆ ವಿಮೆ ಬಗ್ಗೆ ವಿಮಾ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ರೈತರಿಗೆ ಅಭಯ ನೀಡಿದರು.

ರೈತ ಮುಂಡ ಕೆ.ಪಿ.ಭೂತಯ್ಯ ಮಾತನಾಡಿ ಅತಿವೃಷ್ಟಿ ಮತ್ತು ಅನಾವೃಷ್ಟಿಯ ನಡುವೆ ರೈತ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ. ಒಂದಷ್ಟು ವರ್ಷಗಳ ಕಾಲ ಮಳೆ ಇಲ್ಲದೆ ರೈತ ಕಂಗಾಲಾಗಿ ಹೋದ. ಇತ್ತೀಚಿನ ದಿನಗಳಲ್ಲಿ ವಾಯುಬಾರ ಕುಸಿತರಿಂದ ಅಕಾಲಿಕ ಮಳೆಯಾಗುತ್ತಿದೆ. ಆದರೆ ಮಳೆಗೆ ತಕ್ಕ ಬೆಳೆ ಸಿಗುತ್ತಿಲ್ಲ. ಸಕಾಲಕ್ಕೆ ಮಳೆಯಾಗದೆ ಫಸಲು ಕೊಯ್ಲು ಮಾಡುವ ಅಥವಾ ಕಾಯಿ ಹಿಡಿಯುವ ಹಂತದಲ್ಲಿ ಮಳೆಯಾಗಿ ರೈತನಿಗೆ ನಿರೀಕ್ಷಿತ ಫಲ ಸಿಗದ ಸಂದರ್ಭಗಳೇ ಹೆಚ್ಚುತ್ತಿವೆ. ಈ ವರ್ಷವೂ ಅದೇ ಆಗಿದೆ. ಮಳೆ ಬಂದರೂ ಬೆಳೆ ಕೈ ಹಿಡಿಯದ ಪರಿಸ್ಥಿತಿಯಲ್ಲಿ ರೈತರಿದ್ದಾರೆ ಆದ್ದರಿಂದ ಬೆಳೆ ನಷ್ಟ ಹಾಗೂ ಬೆಳೆ ಪರಿಹಾರವನ್ನು ರೈತರ ಖಾತೆಗೆ ತುರ್ತಾಗಿ ಜಮೆ ಮಾಡುವಂತೆ ಒತ್ತಾಯಿಸಿದರು.

ರೈತರ ತಿಪ್ಪೇಸ್ವಾಮಿ ಕೆಲವು ಕಡೆಗಳಲ್ಲಿ ರೈತರು ಈಗಾಗಲೇ ಶೇಂಗಾ ಬಳ್ಳಿ ಕಿತ್ತು ಹರಡಿದ್ದಾರೆ. ಅಕಾಲಿಕ  ಮಳೆ ಸುರಿಯುತ್ತಿರುವುದಿರಿಂದ  ರೈತರಿಗೆ ಬೆಳೆಗಳನ್ನು ಹೇಗೆ ರಕ್ಷಿಸಬೇಕೆಂಬುದು ತಿಳಿಯದಂತಾಗಿದೆ. ಕಟಾವು ಮಾಡುವ ಮುನ್ನವೇ ಹೊದಲ್ಲೇ ಶೇಂಗಾ, ತೊಗರಿ  ತೇವಾಂಶ ಹೆಚ್ಚಾಗಿ ಮೊಳಕೆ ಹೊಡೆದು ಹಾಳಾಗುತ್ತಿದ್ದು,  ಕಟಾವು ಮಾಡಿದ ಶೇಂಗಾ ಹೊಲಗಳಲ್ಲಿಯೇ ಕೊಳೆಯುತ್ತಿದೆ ಕಣದಲ್ಲಿ ಹಾಕಿದ ಬೆಳೆಗಳಿಗೆ  ಪ್ಲಾಸ್ಟಿಕ್ ಪೇಪರ್ ಇಲ್ಲವೆ ಟಾರ್ ಪಲ್  ಹೊದಿಸಿದ್ದಾರೆ. ಮಳೆ ಹೀಗೆಯೇ ಸುರಿಯುತ್ತಿದ್ದರೆ ಬೂಸ್ಟ್ ಬಂದು ಹಾಳಾಗುತ್ತವೆ. ಬೂಸ್ಟ್ ಬಂದ ಶೇಂಗಾ ಕಾಯಿಯನ್ನು ಅರ್ಧ ಬೆಲೆಗೆ ಮಾರಾಟ ಡಬೇಕಾಗುತ್ತದೆ ಅನಿವಾರ್ಯತೆ ಇದೆ ಶೇಂಗಾ ಬಳ್ಳಿ ಕೊಳೆಯುತ್ತಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಬೀತಿ ಎದುರಾಗಿದ್ದು ಬೆಳೆ ನಷ್ಟದ ನಡುವೆ ಜಾನುವಾರುಗಳನ್ನು ಹೇಗೆ ಪಾಲನೆ ಪೋಷಣೆ ಮಾಡಬೇಕೆಂಬುದು ಚಿಂತೆಯಾಗಿದೆ ಕೂಡಲೆ ಸರಕಾರ ರೈತರ ನೆರವಿಗೆ ಬರಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಳ್ಳಕೆರೆ ವೃತ್ತದ ಕೃಷಿ ಸಹಾಯಕ ಉಪನಿರ್ದೇಶಕ ಡಾ.ಪ್ರಭಾಕರ್, ತಹಶೀಲ್ದಾರ್ ಎನ್.ರಘುಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್, ರೈತರು, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಫೋಟೊ ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಭೇಟಿ ನೀಡಿ ಶೇಂಗಾ, ಕಡಲೆ ಬೆಳೆ ನಷ್ಟವನ್ನು ಪರಿಶೀಲನೆ ನಡೆಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು