ಇತ್ತೀಚಿನ ಸುದ್ದಿ
ಬ್ಯುಟಿಶನ್ ಅತ್ಯಾಚಾರ ಆರೋಪ: ಬಾಲಿವುಡ್ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಬಂಧನ
31/05/2021, 15:16

ಮಂಡ್ಯ(reporterkarnataka news): ಮುಂಬೈ ಬ್ಯುಟಿಷಿಯನ್ ಮೇಲೆ ಅತ್ಯಾಚಾರ ನಡೆಸಲಾಗಿದೆ ಎನ್ನಲಾದ ಪ್ರಕರಣ ಸಂಬಂಧಿಸಿದಂತೆ ಬಾಲಿವುಡ್ ವಿವಾದಿತ ನಟಿ ಕಂಗನಾ ರಣಾವರ್ ಅವರ ಬಾಡಿಗಾರ್ಡ್ ಕುಮಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಹೆಗ್ಗಡ ಹಳ್ಳಿ ಗ್ರಾಮದಲ್ಲಿ ಕಿಕ್ಕೇರಿ ಠಾಣೆಯ ಪೊಲೀಸರ ಸಹಾಯದೊಂದಿಗೆ ಮುಂಬೈ ಪೊಲೀಸರು ಕುಮಾರ್ ಅವರನ್ನು ಸೆರೆ ಹಿಡಿದಿದ್ದಾರೆ.
ಬ್ಯುಟಿಷಿಯನ್ ಗೆ ಮದುವೆಯಾಗುವುದಾಗಿ ನಂಬಿಸಿ ಆಕೆ ಜತೆ ದೇಹ ಸಂಪರ್ಕ ನಡೆಸಿದ್ದಾರೆ ಮತ್ತು 50 ಸಾವಿರ ರುಪಾಯಿ ವಂಚಿಸಿದ್ದಾರೆ ಎಂದು ಬ್ಯುಟಿಷನ್ ಯುವತಿ ಪೊಲೀಸರಿಗೆ ದೂರು ನೀಡಿದ್ದರು.
ಕುಮಾರ್ ನಂತರ ಮುಂಬೈಯಿಂದ ಕರ್ನಾಟಕಕ್ಕೆ ಬಂದಿದ್ದರು. ಜತೆಗೆ ಯುವತಿ ಜತೆ ಸಂಪರ್ಕ ಕಟ್ ಮಾಡಿದ್ದರು ಎನ್ನಲಾಗಿದೆ