ಇತ್ತೀಚಿನ ಸುದ್ದಿ
ಯಲ್ಲಾಪುರ: ಮೌಲ್ಯವರ್ಧನೆ, ಉತ್ಪಾದಕ ಗುಂಪು ರಚನೆ ಕುರಿತ ತರಬೇತಿಯಲ್ಲಿ ಕಲಿಕಾ ಕ್ಷೇತ್ರ ಭೇಟಿ
25/11/2021, 10:20
ಯಲ್ಲಾಪುರ(reporterkarnataka.com): ದೀನ ದಯಾಳ್ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಿಳೆಯರ ಜೀವನೋಪಾಯ ಸಂವರ್ಧನೆಗೆ ಅನುಷ್ಠಾನಗೊಳಿಸಲಾದ ಉತ್ಪಾದಕ ಗುಂಪುಗಳ ರಚನೆ ಹಾಗೂ ಮೌಲ್ಯವರ್ಧನೆ ಹಾಗೂ ಫಾರ್ವರ್ಡ ಲಿಂಕೇಜ್ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳ ಆಭಿಯಾನ ಘಟಕದ ಸಿಬ್ಬಂದಿಗಳಿಗೆ ತರಬೇತಿಯನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಆಯೋಜಿಸಲಾಗಿತ್ತು.
ನವೆಂಬರ್ 24ರಂದು ಶಿರಸಿ ತಾಲೂಕಿನ ಯಶಸ್ವಿ ಪ್ರಗತಿಪರ ರೈತರು, ಮೌಲ್ಯವರ್ಧಿತ ಉತ್ಪನ್ನತಯಾರಕರು, ಕೃಷಿ ಉತ್ಪಾದಕ ಕಂಪನಿ, ಮಹಿಳಾ ಉತ್ಪಾದಕ ಗುಂಪುಗಳಿಗೆ ಕಲಿಕಾ ಕ್ಷೇತ್ರ ಭೇಟಿ ಆಯೋಜಿಸಲಾಗಿತ್ತು.
ಬನವಾಸಿಯ ಪ್ರಗತಿಪರ ಕೃಷಿಕ ಹನುಮಂತಪ್ಪ ಮಡೂರು ಅವರ ೩ ಎಕರೆ ಸಮಗ್ರ ಕೃಷಿ ಭೂಮಿಯ ಭೇಟಿ ಎಲ್ಲಾ ಸಿಬ್ಬಂದಿಗಳ ಕಣ್ಣು ತೆರೆಸುವಂತಿತ್ತು.
ಏಕ ಬೆಳೆ ಪದ್ಧತಿಗೆ ಮಾರು ಹೋಗುತ್ತಿರುವ ರೈತರು ಸಮಗ್ರ ಕೃಷಿ ಪದ್ಧತಿಯನ್ನು ಹೇಗೆ ಅನುಸರಿಸಬೇಕೆಂಬುದಕ್ಕೆ ಅವರು ಉತ್ತಮ ನಿದರ್ಶನ. ಹನುಮಂತಪ್ಪ ರವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದು ಆವುಗಳಲ್ಲಿ ದೂರದರ್ಶನ ಚಂದನ ಪ್ರಶಸ್ತಿ,, ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಹೀಗೆ ಅನೇಕ. ಇವರ ಹೊಲದಲ್ಲಿ ಭೂಮಿಯ ಸದ್ಭಳಕೆ, ಕಡಿಮೆ ಜಮೀನಿನಲ್ಲಿ ೬೫ಕ್ಕೂ ಹೆಚ್ಚಿನ ಬೆಳೆಗಳ ನಿರ್ವಹಣೆ ಮೂಲಕ ಸುಸ್ಥಿರ ಕೃಷಿ ಪದ್ಧತಿ ಎಲ್ಲ ಸಿಬ್ಬಂದಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಅಂಡಗಿ ಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳಾ ಉತ್ಪಾದಕ ಗುಂಪು ನಿರ್ವಹಿಸುತ್ತಿರುವ ಅರಿಶಿಣ ಮತ್ತು ಶುಂಠಿ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಗುಂಪಿನ ಮಹಿಳೆಯರೊಂದಿಗೆ ಚರ್ಚೀಸಲಾಯಿತು. ಗುಂಪಿನ ಮಹಿಳೆಯರು ತಮ್ಮ ಉತ್ಪಾದಕ ಗುಂಪಿನ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ನಂತರ ಮಹಿಳೆಯರು ನಿರ್ವಹಿಸುತ್ತಿರುವ ಅರಿಶಿಣ ಮತ್ತು ಶುಂಟಿ ಸಂಸ್ಕರಣಾ ಘಟಕವನ್ನು ವೀಕ್ಷಿಸಲಾತು. ಪ್ರಗತಿಪರ ಸಾವಯವ ಕೃಷಿಕ ದತ್ತಾತ್ರಯ ಹೆಗಡೆ ಮಾವಿನಕೊಪ್ಪ ಅವರ ಅರಿಶಿಣ ಮತ್ತು ಶುಂಠಿ ಉತ್ಪಾದಕ ಘಟಕವನ್ನು ವೀಕ್ಷಿಸಿ ಅವರಿಂದ ಅರಿಶಿಣ ಮತ್ತು ಶುಂಠಿ ಮೌಲ್ಯವರ್ಧನೆ ಹಾಗೂ ದೇಶೀಯ ಮಾರುಕಟ್ಟೆ ಅಂತಾರಾಷ್ಟ್ರೀಯ ಮಾರುಕಟ್ಟೆ, ವಿದೇಶಿ ರಪ್ತು ಸಾವಯವ ಕೃಷಿ ಯಿಂದ ಸುಸ್ಥಿರ ಅಭಿವೃದ್ಧಿ ಕುರಿತು ಸಮಗ್ರ ಮಾಹಿತಿ ಪಡೆಯಲಾಯಿತು.
ಪ್ರಗತಿಮಿತ್ರ ರೈತೋತ್ಪಾದಕ ಕಂಪನಿ ಬಾಳೇಗದ್ದೆಗೆ ಭೇಟಿ ನೀಡಿ FPO ರಚನೆ ಅದರ ಮಹತ್ವ, ವಿವಿಧ ಉತ್ಪನ್ನಗಳ ತಯಾರಿಕಾ ಘಟಕವನ್ನು ವೀಕ್ಷಿಸಲಾಯಿತು. ವಿವೇಕ ಹೆಗಡೆ ಮಾತನಾಡಿ ಈ ಕುರಿತು ಸಮಗ್ರ ಮಾಹಿತಿ ನೀಡಿದರು.
ಕದಂಬ ಮಾರ್ಕೆಟಿಗ್ ಸೊಸೈಟಿಯ ಭೇಟಿ ಒಂದು ತಾಲೂಕು ಮಟ್ಟದ ಸಂಸ್ಥೆ ಹೇಗೆ ಅಲ್ಲಿನ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಬಹುದು ಎಂಬುದಕ್ಕೆ ನಿದರ್ಶನವಾಗಿತ್ತು. ಶಿರಸಿ ತಾಲೂಕಿನ ಕೃಷಿ ಹಾಗೂ ಕಿರು ಅರಣ್ಯ ಉತ್ಪನ್ನ ಗಳನ್ನು ಖರೀದಿಸಿ ಅದನ್ನು ತನ್ನದೇ ಬ್ರಾಂಡ್ ನಲ್ಲಿ ಮಾರುಕಟ್ಟೆ ನಿರ್ಮಿಸಬಹುದು ಎಂಬುದಕ್ಕೆ
ಉತ್ತಮ ಉದಾಹರಣೆ. ಈ ಸಂಸ್ಥೆಯ ಕಾರ್ಯಚಟುವಟಿಕೆ ತಾಲೂಕಿನ ಅನೇಕ ಸಣ್ಣ ರೈತರ ಹಾಗೂ ಕಿರು ಅರಣ್ಯ ಉತ್ಪಾದಕರಿಗೆ ಆದಾಯ ತರುವಲ್ಲಿ ಯಶಸ್ವಿಯಾಗಿದೆ. ಈ ಸಂಸ್ಥೆಯ ವಿಶ್ವೇಶ್ವರ ಭಟ್ಟ ಅವರು ತಮ್ಮ ಸಂಸ್ಥೆಯ ಕುರಿತು ಸಮಗ್ರ ಮಾಹಿತಿ ನೀಡಿದರು.
ವಿವಿಧ ಜಿಲ್ಲೆಗಳ ಸಿಬ್ಬಂದಿಗಳಿಗೆ ತಮ್ಮ ಕಾರ್ಯವ್ಯಾಪ್ತಿಯಲ್ಲಿ ನಡೆಸಬಹುದಾದ ಕೃಷಿ ಜೀವನೋಪಾಯ, ಮೌಲ್ಯವರ್ಧನೆ, ಉತ್ಪಾದಕ ಗುಂಪುಗಳ ನಿರ್ವಹಣೆ ಕುರಿತು ಮಾಹಿತಿ ಪಡೆಯುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕಿ ಡಾ. ರಾಜೇಶ್ವರಿ, ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಕಾರ್ಯಕ್ರಮ ನಿರ್ವಹಣಾ ಘಟಕದ ಸಿಬ್ಬಂದಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.