1:42 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಉಡುಪಿ: ಮೀನುಗಾರರ ಬಲೆಗೆ ಬಿತ್ತು ಅಪರೂಪದ ಮೀನು !!; ಬರೋಬ್ಬರಿ 1.81 ಲಕ್ಷ  ರೂಪಾಯಿಗೆ ಮಾರಾಟ !

24/11/2021, 09:26

ಉಡುಪಿ(reporterkarnataka.com): ಮಲ್ಪೆ ಬಂದರಿನಿಂದ ಹೊರಟ ಮೀನುಗಾರರು ಭರ್ಜರಿ ಬೇಟೆ ಮಾಡಿದ್ದಾರೆ. ಮೀನುಗಾರರ ಬಲೆಗೆ ಅಪರೂಪದ ಮೀನು ಬಿದ್ದಿದ್ದು, ಮೀನುಗಾರರು ಹಿಡಿದ ಈ ಮೀನು ಬರೋಬ್ಬರಿ ಒಂದು ಲಕ್ಷದ ಎಂಭತ್ತು ಸಾವಿರಕ್ಕೆ ಮಾರಾಟವಾಗಿದೆ.

ಹೌದು, ಮಲ್ಪೆ ಕಡಲ ಕಿನಾರೆಯಿಂದ ಸೋಮವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಶಾನ್ ರಾಜ್ ತೊಟ್ಟಂ ಎಂಬುವವರ ಬಲರಾಮ್ ಎಂಬ ಹೆಸರಿನ ಬೋಟ್‌ಗೆ ಅದೃಷ್ಟ ಲಕ್ಷ್ಮಿಯೇ ಖುಲಾಯಿಸಿದ್ದಾಳೆ. ಮೀನುಗಾರರು ಬೀಸಿದ ಬಲೆಗೆ 18 ಕೆಜಿ ತೂಕದ ಅಪರೂಪದ “ಗೋಳಿ” ಎನ್ನುವ ಮೀನು ಸಿಕ್ಕಿದ್ದು, ಈ ಮೀನು ಬರೋಬ್ಬರಿ 1,81,200 ರೂಪಾಯಿಗೆ ಮಾರಟವಾಗಿದೆ. 

ಈ ಗೋಳಿ ಅಪರೂಪದ ಮೀನಾಗಿದ್ದು, ಅತೀ ಹೆಚ್ಚಾಗಿ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಮಧುಮೇಹ, ಅಸ್ತಮಾದಂತಹ ಖಾಯಿಲೆಗಳ ಔಷಧಿಗೆ ಈ ಮೀನನ್ನು ಬಳಸಲಾಗುತ್ತದೆ. ಈ ಮೀನು ಕಲ್ಲು ಬಂಡೆಗಳ ಅಡಿಯಲ್ಲಿ ವಾಸವಾಗಿರುತ್ತದೆ. ಆದರೆ ಮೀನುಗಾರರ ಬಲೆಗೆ ಬೀಳೋದು ಬಲು ಅಪರೂಪವಾಗಿದೆ.

ಉಡುಪಿಯ ಮಲ್ಪೆಯಲ್ಲಿ ಈ ರೀತಿಯ ಮೀನು ದೊರಕಿರೋದು ಇದೇ ಮೊದಲ ಬಾರಿಯಾಗಿದೆ. ಈ ಹಿಂದೆ ಗೋಳಿ ಜಾತಿಯ ಸಣ್ಣ ಮೀನುಗಳು ಬಲೆಗೆ ಲಭ್ಯವಾಗಿದ್ದು, ಪ್ರಥಮ ಬಾರಿಗೆ ಭಾರೀ ತೂಕದ ಮೀನು ಸಿಕ್ಕಿದೆ. ಅಲ್ಲದೆ, ಇಡೀ ಮಲ್ಪೆ ಬಂದರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ  1,81,200 ರೂಪಾಯಿಗೆ ಮಾರಾಟವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು