12:43 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಮಸ್ಕಿ: ಜಂಗಮ ಸಮಾಜ ವತಿಯಿಂದ ಭಕ್ತಿಪೂರ್ವಕ ನುಡಿನಮನ ಕಾರ್ಯಕ್ರಮ

23/11/2021, 10:33

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಸೋಮವಾರ ಲಿಂಗೈಕ್ಯರಾದ ಶಿವಯೋಗಿ ಮಂದಿರದ ಪೀಠಾಧ್ಯಕ್ಷರಾದ ಶ್ರೀ ಡಾ. ಸಂಗನಬಸವ ಮಹಾಸ್ವಾಮಿಗಳು ಹೊಸಪೇಟೆ ಹಾಲಕೆರೆ ಪೂಜ್ಯರ ಭಕ್ತಿಪೂರ್ವಕ ನುಡಿನಮನ ಕಾರ್ಯಕ್ರಮ ಮಸ್ಕಿಯಲ್ಲಿ ಜರುಗಿತು.

ಈ ಕಾರ್ಯಕ್ರಮದಲ್ಲಿ ಮಸ್ಕಿಯ ಶ್ರೀ ರುದ್ರಮುನಿ ಶಿವಾಚಾರ್ಯ, ಜಂಗಮ ಸಮಾಜ ಮುಖಂಡರಾದ ಸಿದ್ದಲಿಂಗಯ್ಯ ಸೊಪ್ಪಿಮಠ ಗಣ ಮಠದಯ್ಯ ಸ್ವಾಮಿ, ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಸೇರಿದಂತೆ ಹಲವರು

ನುಡಿನಮನ ಅರ್ಪಿಸಿದರು. ಸಮಾಜದ ಸಿಂಧನೂರ್ ಶ್ರೀ.ಷ.ಬ್ರ ಸೋಮನಾಥ ಶಿವಾಚಾಯ೯ರು ಸಾನಿಧ್ಯ ವಹಿಸಿದ್ದರು.

ಮತ್ತು ಶ್ರೀ ಡಾ.ಸಿದ್ದಯ್ಯ ಸ್ವಾಮಿ ಮರುಳ ಸಿದ್ದಾಶ್ರಮ ಗೊರೇಬಾಳ ಪೂಜ್ಯರು ಉಪಸ್ಥಿತರಿದ್ದರು.

ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಂದ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಜೊತೆಗೆ ಭಕ್ತಿಪೂರ್ವಕ ನುಡಿ ನಮನ ಸಲ್ಲಿಸಲಾಯಿತು.

ಈ ಸಂದಭ೯ದಲ್ಲಿ ಡಾ.ವೈಜನಾಥ ಸಗರಮಠ, ಸಹ ಪ್ರಾಧ್ಯಾಪಕರು ಸಿಂಧನೂರು ಹಾಗೂ  ಡಾ.ವಿ.ಡಿ ಹಿರೇಮಠ ಅವರು ನುಡಿನಮನ ಸಲ್ಲಿಸಿದರು.

 ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಆರ್. ಕೆ. ಹಿರೇಮಠ, ಕಲ್ಮಠ ವಕೀಲರು, ಹಂಪಯ್ಯ ರ‍್ಯಾವಿಹಾಳ, ಶ್ರೀರಾಚಯ್ಯ ನವಲಕಲ್. ಶ್ರೀ ಪಂಚಾಕ್ಷರಯ್ಯ, ಕಾರ್ಯದರ್ಶಿಗಳಾದ ಆದಿ ಬಸವರಾಜ್ ಹೊಸಳ್ಳಿ ರವರು, ಸಂಘದ ಕೋಶಾಧ್ಯಕ್ಷರಾದ ಬಸವರಾಜ್ ಹಿರೇಮಠ್ ಬಾದರ್ಲಿ, ಯುವ ಘಟಕದ ಅಧ್ಯಕ್ಷ ಮಲ್ಲಯ್ಯನ ನವಲಿಹಿರೇಮಠ, ಗ್ರಾಮೀಣ ಯುವ ಘಟಕದ ಅಧ್ಯಕ್ಷ ಸಿದ್ದರಾಮಯ್ಯ ಹೊಸಳ್ಳಿ, 

ಪುರೋಹಿತ ಘಟಕದ ಅಧ್ಯಕ್ಷ ಬಸವರಾಜ್ ಶಾಸ್ತ್ರಿ ಗೊರೆಬಾಳ, ವರ್ತಕರ ಘಟಕದ ಅಧ್ಯಕ್ಷ

ಮರಿಸ್ವಾಮಿ ಕಾರಟಗಿ, ಮಹಿಳಾ ಘಟಕದ ಅಧ್ಯಕ್ಷರಾದ ಗೀತಾ ಹಿರೇಮಠ, ಮಮತಾ ಹಿರೇಮಠ್,  ಪ್ರೇಮಲತಾ ಸಿದ್ಧಾಂತಿ ಮಠ,

ವಿನಯ್ ಪಗಡದಿನ್ನಿ  ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು