9:07 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​

ಇತ್ತೀಚಿನ ಸುದ್ದಿ

ಚಿತ್ರದುರ್ಗ: ಕೋವಿಡ್ ಗೆ ತತ್ತರಿಸಿದ ಜನರಿಗೆ ಕಷ್ಟಗಳ ಸುರಿಮಳೆ; ಅತಿವೃಷ್ಟಿಗೆ ಭತ್ತ, ಶೇಂಗಾ, ಈರುಳ್ಳಿ ಸೇರಿದಂತೆ ಕೋಟಿ ಮೌಲ್ಯದ ಬೆಳೆ ನಾಶ

20/11/2021, 20:21

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಕೋವಿಡ್ ಮಹಾಮಾರಿಯಿಂದ ತತ್ತರಿಸಿದ್ದ ಜನ ಈಗ ಮಳೆಯಿಂದ ಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೆ ರೈತರು, ಜನರು ಬದುಕು ಕಟ್ಟಿಕೊಳ್ಳುವ ಮುನ್ನವೇ ಅಕಾಲಿಕ ಮಳೆ ಸಂಕಷ್ಟಕ್ಕೀಡು ಮಾಡಿದೆ. ಬೆಳೆದ ಬೆಳೆ ಕಣ್ಮುಂದೆಯೇ ಕೊಳೆತು, ಕೊಚ್ಚಿಹೋಗುತ್ತಿದ್ದು ದೇಶದ ಬೆನ್ನಲೆಬು ಎಂಬ ಅಣೆ ಪಟ್ಟಿಕೊಂಡು ಅನ್ನ ನೀಡುವ ಅನ್ನದಾತರ ಗೋಳು ಕೇಳುವವರು ಯಾರು ಎಂಬ ಪ್ರಶ್ನೆ ತಲೆದೋರಿದೆ.

ಬಯಲು ಸೀಮೆಯ ರೈತರು ಬೆಳೆದ ಶೇಂಗಾ, ಭತ್ತ, ಈರುಳ್ಳಿ, ಟೊಮ್ಯೆಟೊ, ತರಕಾರಿ ಸೇರಿದಂತೆ ಇತರ ಬೆಳೆಗಳು  ಕಳೆದ 15 ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಕೊಳತು ಕೊಚ್ಚಿಹೋಗುತ್ತಿರುವುದರಿಂದ ಸಾವಿರಾರು ಕೋಟಿ ರೂ. ಮೌಲ್ಯದ ಬೆಳೆಗಳು ನಾಶವಾಗಿದೆ. 

ತಾಲೂಕಿನ ಗಿರಿಯಮ್ಮನಹಳ್ಳಿ ಗ್ರಾಮದ ರೈತ ಚಂದ್ರಣ್ಣ ರಿ.ಸಂ.16/11ಪಿ ರಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬ್ಯಾಡಗಿ ಮೆಣಸಿನ ಕಾಯಿ ಬೆಳೆಯನ್ನು ಹಾಕಿದ್ದು, ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಮಳೆಯ ರುದ್ರನತ್ರನಕ್ಕೆ ಸಿಲುಕಿ ಮೆಣಸಿನ ಕಾಯಿಗಳು ಭೂಮಿ ತಾಯಿ ಮಡಿಸಲು ಸೇರಿಕೊಂಡು ನೀರಿನಲ್ಲಿ ಕೊಚ್ಚಿ ಹೋಗಿವೆ.

ಬ್ಯಾಡಗಿ ಮೆಣಸಿಕಾಯಿ ಬೆಳೆ ಬೆಳೆಯಲು ಬೀಜ, ಗೊಬ್ಬರ, ಔಷಧಿ ಸೇರಿ 1.5 ಲಕ್ಷ ಖರ್ಚು ಮಾಡಲಾಗಿತ್ತು. ಸುಮಾರು 4 ಲಕ್ಷ ರೂ. ಲಾಭ ನಿರೀಕ್ಷೆಯಲ್ಲಿದ್ದು ವರುಣನ ಅಬ್ಬರಕ್ಕೆ ಮೆಣಸಿನ ಬೆಳೆ ಕೊಚ್ಚಿಹೋಗಿದೆ. ಈಗ ಒಂದು ಕ್ವಿಂಟಲ್ ಬ್ಯಾಡಗಿ ಮೆಣಸಿಕಾಯಿಗೆ ಸುಮಾರು 9 ರಿಂದ 10 ಸಾವಿರ ರೂ. ಮಾರುಕಟ್ಟೆಯಲ್ಲಿ ಬೆಲೆಯಿದೆ. ಇದು ಸಸಿ ನಾಟಿ ಮಾಡಿ 5 ತಿಂಗಳಿಗೆ ಬೆಳೆ ಬರುತ್ತದೆ. ಬೆಳೆ ಬರುವ ತನದ ಪ್ರತಿ ತಿಂಗಳು ಔಷಧಿ ಸಿಂಪರಣೆ ಸೇರಿದಂತೆ ಎಚ್ಚರಿಕೆಯಿಂದ ಆರೈಕೆ ಮಾಡಬೇಕು. ಸ್ವಲ್ಪ ಯ್ಯಾಮಾರಿದರೂ ಬೆಳೆ ವಿಫಲವಾಗುತ್ತದೆ ಕೆಲಸ ಕಾರ್ಯ ಬಿಟ್ಟು  ಮೆಣಸಿನ ಬೆಳೆ ನೋಡಿದ್ದರಿಂದ ಹೆಚ್ಚು ಇಳುವರಿ ಬಂದಿತ್ತು. ಹೆಚ್ಚು ಲಾಭ ಬರುವ ನಿರಿಕ್ಷೆಯನ್ನು ಮಳೆ ಬಂದು ನೀರಲ್ಲಿ ಕೊಚ್ಚಿಹೋಗಿದ್ದು ಖರ್ಚು ಮಾಡಿದ ಹಣವು ಇಲ್ಲದೆ ಬೆಳೆಯೂ ಇಲ್ಲದೆ ಸಾಲದ ದವಡೆಗೆ ಸಿಲುಕಿದಂತಾಗಿದೆ ಎಂದು ರೈತರ ಚಂದ್ರಣ್ಣ ಪತ್ರಿಕ ಅಳಲು ತೋಡಿಕೊಂಡಿದ್ದಾರೆ.

ತಾಲೂಕಿನ ಚೌಳೂರು ಗ್ರಾಮದ ಮಂಜುನಾಥ ಎಂಬ ರೈತ ಬೆಳೆದ ಭತ್ತದ ಬೆಳೆಯನ್ನು ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಭತ್ತದ ಬೆಳೆಯನ್ನು ಕಟಾವು ಮಾಡದೆ ಇರುವುದಲ್ಲಿ ಹೊಲದಲ್ಲೇ ಮೊಳಕೆ ಹೊಡೆದಿರುವುದು ಲಕ್ಷಾಂತ ರೂ ನಷ್ಟವಾಗಿದ್ದು ಅಘಾತಕ್ಕೆ ಸಿಲುಕಿದಂತಾಗಿದೆ. ಇದೇ ತಾಲೂಕಿನ ಬಹುತೇಕ ಗ್ರಾಮೀಣ ಭಾಗದಲ್ಲಿ ರೈತರ ಶೇಂಗಾ ಬೆಳೆ ಕಟಾವು ಹಾಗೂ ಕಟಾವು ಮಾಡದೆ ಇರುವ ಬೆಳೆಗಳು ಮೊಳಕೆ ಹೊಡೆದಿವೆ.

ಕಳೆದ 15 ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ಮಳೆರಾಯನ ಅವಾಂತರದದಿಂದ  ಬೆಳೆಗಳು ಹಾನಿ ಸಂಭವಿಸಿದ್ದು ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇಷ್ಟೆಲ್ಲ ಅನಾಹುತ ಆಗುತ್ತಿದ್ದರೂ ಕೃಷಿ ಸಚಿವರು, ಅವರ ಇಲಾಖೆ ಹಾಗೂ ಕಂದಾಯ ಇಲಾಖೆ ಏನು ಮಾಡುತ್ತಿದೆ? ಈಗಾಗಲೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಲಾಗಿದೆಯಾ? ಬೆಳೆ ವಿಮೆ ಪರಿಸ್ಥಿತಿ ಏನು? ಕಾಟಾಚಾರಕ್ಕೆ ಸರ್ವೇ ಮಾಡಿ ಸಭೆಗಳಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು ಕೂಡಲೆ ರೈತರ ನೆರವಿಗೆ ಸರಕಾರ ಮುಂದಾಗುವಂತೆ ರೈತರು ಆಗ್ರಹಿಸಿದ್ದಾರೆ.

ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಗ್ರಾಮದ ಚಂದ್ರಣ್ಣ ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಬ್ಯಾಡಗಿ ಮೆಣಸಿನ ಕಾಯಿ ಬೆಳೆ ಮಳೆಗೆ ಸಿಲುಕಿ ನಷ್ಟವಾಗಿರುವುದು.

1ಎ, ತಾಲೂಕಿನ ಚೌಳೂರು ಗ್ರಾಮದ ರೈತ ಮಂಜುನಾಥ ಜಮೀನಿನಲ್ಲಿ ಭತ್ತದ ಬೆಳೆ ಕಟಾವಿಗೆ ಬಂದ ಬೆಳೆ ಮೊಳಕೆ ಹೊಡೆದಿರುವುದು

ಇತ್ತೀಚಿನ ಸುದ್ದಿ

ಜಾಹೀರಾತು