5:48 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಸಾಧಕನಿಗೆ ಹುಟ್ಟೂರ ಸನ್ಮಾನವೇ ಬಹುದೊಡ್ಡ ಬಹುಮಾನ: ಮಾಜಿ ಸಚಿವ ಅಭಯಚಂದ್ರ ಜೈನ್

17/11/2021, 21:38

ಕಾರ್ಕಳ(reporterkarnataka.com):
ಸಾಧಕನಿಗೆ ಹುಟ್ಟೂರ ಸನ್ಮಾನವೇ ಬಹುದೊಡ್ಡ ಉಡುಗೊರೆ. ಸಾಧಿಸುವ ಛಲವಿದ್ದರೆ ಉದ್ಯಮವನ್ನು ಹುಟ್ಟು ಹಾಕಬಹುದು. ಅದರಿಂದ ನೂರಾರು ಜನರಿಗೆ ಉದ್ಯೋಗವನ್ನು ನೀಡಬಹುದು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.  

ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಅಜೆಕಾರಿನ ಉದ್ಯಮಿ ಶಿವರಾಂ ಶೆಟ್ಟಿ ಅವರ 75 ವರ್ಷದ ಪಂಚ ಸಪ್ತತಿ ಜನ್ಮದಿನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಜೆಕಾರು ಪದ್ಮ ಗೋಪಾಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ಸಮಾಜದ ಎತ್ತರವನ್ನು ಹುಡುಕುತ್ತೆವೆ. ಆದರೂ ಅದರ ಹಿಂದಿನ ಶ್ರಮ ಅರ್ಥವಾದರೆ ಅದರ ಮೌಲ್ಯ,ಹಾಗೂ  ಕಷ್ಠವು ತಿಳಿಯುವುದು ಎಂದರು.

ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಧರ್ಮದರ್ಶಿ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ  ಮಾತನಾಡಿ, ಕೋಟ್ಯಾಂತರ ರೂಪಾಯಿದ್ದರು ದೇವಸ್ಥಾನ ಕಟ್ಟಲು ಸಾದ್ಯವಿಲ್ಲ. ಅದಕ್ಕೆ ಯೋಗವಿದ್ದರೆ, ಸಾಮರ್ಥ್ಯ ವಿದ್ದರೆ ಮಾತ್ರ ದೇವಾಲಯದ  ಕಾರ್ಯ ಮಾಡಲು ಸಾಧ್ಯ , ಛಲ ,ಶ್ರದ್ಧೆ ನಮ್ಮಲಿರಬೇಕು ಎಂದು ಹೇಳಿದರು.

ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ  ಶಿವರಾಂ ಶೆಟ್ಟಿ, ತಂದೆ ತಾಯಿ ಸೇವೆ ಮೊದಲು ಮಾಡಿ ನಂತರ ದೇವರ ಸೇವೆ ,ದೇಶ ಸೇವೆ ಮಾಡಬೇಕು. ಅಮ್ಮನ ಪ್ರೀತಿ ಯೇ ದೇಶ ಪ್ರೀತಿಯನ್ನು ಬೆಳೆಸುವುದು. ದೇವರ ಭಯವಿರಲಿ ಅಗಲೆ ಭಕ್ತಿ ಹುಟ್ಟಲು ಸಾಧ್ಯ ಎಂದರು.

ಶಿವರಾಂ ಶೆಟ್ಟಿ ಹಾಗೂ ಪುಷ್ಪ ಶಿವರಾಂ ಶೆಟ್ಟಿ ಯವರನ್ನು ಅಭಿನಂದಿಸಲಾಯಿತು.

ದೇವಸ್ಥಾನದ ತಂತ್ರಿ ವಾದಿರಾಜ ತಂತ್ರಿ,ಉದ್ಯಮಿ ಸುಜಯ್ ಶೆಟ್ಟಿ , ವಿಜಯ್ ಶೆಟ್ಟಿ, ಶೋಭ ಶೆಟ್ಟಿ, ಮುಖ್ಯ ಅರ್ಚಕ ರಂಗನಾಥ ಭಟ್ ಉಪಸ್ಥಿತರಿದ್ದರು. 

ಅಶೋಕ ಶೆಟ್ಟಿ ಪ್ರಾರ್ಥಿಸಿದರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ಭಾಸ್ಕರ ಶೆಟ್ಟಿ ಕುಂಠಿನಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು