ಇತ್ತೀಚಿನ ಸುದ್ದಿ
ಕೂಡ್ಲಿಗಿ: ಮಕ್ಕಳ ಹಕ್ಕುಗಳ ಜಾಗೃತಿ ಜಾಥಾ; ಪುಟಾಣಿಗಳಿಂದ ಮಾನವ ಸರಪಳಿ
14/11/2021, 12:31
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ನ 14ರಂದು ಮಕ್ಕಳ ಹಕ್ಕುಗಳ ದಿನಾಚರಣೆ ಪ್ರಯುಕ್ತ.ಶಾಲಾ ಕಾಲೇಜುಗಳ ಮಕ್ಕಳಿಂದ ನ್ಯಾಯಾಲಯ ಇಲಾಖೆ,ವಕೀಲರ ಸಂಘ ಹಾಗೂ ತಾಲೂಕು ಕಾನೂನು ಸಮಿತಿ ನೇತೃತ್ವದಲ್ಲಿ ಜಾಗೃತಿ ಜಾಥಾಜರುಗಿತು.
ಶ್ರೀಕೊತ್ತಲಾಂಜನೇಯ ಪಾದಗಟ್ಟೆ ಹತ್ತಿರ, ಜಾಥಾದಲ್ಲಿದ್ದ ಮಕ್ಕಳು ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಜಾಗ್ರತೆ ಮೂಡಿಸುವ ಹೇಳಿಕೆಯಿರುವ ಫಲಕಗಳನ್ನ ಹಿಡಿದು ಘೋಷಣೆಗಳನ್ನು ಕೂಗಿದರು. ಹಿರಿಯ ನ್ಯಾಯಾಧೀಶರಾದ ನಾಗೇಶ ಅವರು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ, ಪ್ಯಾನಲ್ ವಕೀಲರಾದ ಸಿ.ವಿರುಪಾಕ್ಷಪ್ಪ, ಬಿ.ಸಿದ್ದಲಿಂಗಪ್ಪ, ಶ್ರೀರೇಣುಕ ಕಾಲೇಜ್ ವಿದ್ಯಾರ್ಥಿಗಳು ಮತ್ತು ಶಿಕ್ಷ ಕರು ಹಾಗೂ ಸರ್ಕಾರಿ ಸಂಯುಕ್ತ ಪದವಿ ಪೂರ್ವಕಾಲೇಜ್ ಮಕ್ಕಳು ಮತ್ತು ಶಿಕ್ಷಕರು, ಶ್ರೀವಿನಾಯಕ ಶಾಲಾ ಮಕ್ಕಳು ಮತ್ತು ಶಿಕ್ಷಕರು.ಪೊಲೀಸ್ ಇಲಾಖಾ ಸಿಬ್ಬಂದಿ ಹಾಗೂ ನ್ಯಾಯಾಂಗ ಇಲಾಖೆ ಸಿಬ್ಬಂದಿ ಹಾಗೂ ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ,ವಿವಿದ ಇಲಾಖೆಗಳ ಸಿಬ್ಬಂದಿಯವರು ಜಾಥದಲ್ಲಿ ಭಾಗಿಯಾಗಿದ್ದರು.