9:02 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಪ್ರತಿ ದಿನವೂ ಮಕ್ಕಳ ದಿನವೇ: ಚಿಣ್ಣರ ಕಲರವ ಎಲ್ಲೆಡೆ ಕೇಳುತ್ತಿರಲಿಲ್ಲ

14/11/2021, 09:38

ಮಕ್ಕಳಿರಲಿ ಮನೆ ತುಂಬಾ… ಹರಡುತ್ತಿರಲಿ ನಗು ಹೃದಯ ತುಂಬಾ.. 

ಮನೆ ತುಂಬಾ ಓಡಾಡುವ ಮಕ್ಕಳ ಕಿಲ ಕಿಲ ನಗುವಿನ ಶಬ್ದ , ಆಗಾಗ ಕಿವಿಗೆ ಅಪ್ಪಳಿಸುವಂತೆ ಕೇಳುವ ಕಿರುಚಾಟ ,ಕೂಗಾಟ, ಮುದ್ದುಮುದ್ದು ಮಾತುಗಳನ್ನು ಕೇಳುವಾಗ ಆಗುವಂತಹ ಸಂತೋಷ ಹೇಳಲು ಅಸಾಧ್ಯ.


ಮಗುವಿನ ಸುಂದರ ಮೊಗ ನೋಡುವಾಗ ಮನಸ್ಸಿಗೆ ಆಗುವಂತಹ ಆನಂದ ವರ್ಣಿಸಲಸದಳ.. 


ಇಂತಹ ಮುದ್ದು ಮನಸಿನ ಮಗು ಮನೆಬಿಟ್ಟು ಶಾಲೆಗೆ ಸೇರಿದ ನಂತರ ಶಾಲೆಯಲ್ಲಿ  ಪಡೆಯುವ ಶಿಕ್ಷಣವು ಮಗುವಿನ ಜೀವನ ಗತಿಯನ್ನೇ ಬದಲಾಯಿಸುತ್ತದೆ.

ಶಾಲೆಯಲ್ಲಿ ಗೆಳೆಯರೊಂದಿಗೆ ಸೇರಿ ಸಹಕಾರ , ಸಹನೆ , ಸಹೋದರತೆ, ಶಿಕ್ಷಕರೊಂದಿಗೆ ಗುರು ಹಿರಿಯರೊಂದಿಗೆ ಗೌರವದಿಂದ ವರ್ತಿಸುವ ವಿಧಾನ ಎಲ್ಲವನ್ನೂ ಶಿಕ್ಷಣದಿಂದ ಕಲಿಯುತ್ತಾರೆ.

ನವೆಂಬರ್ 14 ಬಂತೆಂದರೆ ಮಕ್ಕಳ ಮನದಲ್ಲಿ ಸಂಭ್ರಮ ಮನೆ ಮಾಡುತ್ತದೆ. ಶಿಕ್ಷಕರು ತರಗತಿಗೆ ಹೋಗುವಾಗ ತಮ್ಮ ಮನದಿಂಗಿತವನ್ನು , ಆಶಯವನ್ನು ವ್ಯಕ್ತಪಡಿಸುತ್ತಾರೆ. ಮಕ್ಕಳ ದಿನಾಚರಣೆ ಆಚರಿಸುವ ಬಗ್ಗೆ ಕೇಳುತ್ತಾರೆ. ಮಕ್ಕಳ ದಿನಾಚರಣೆಯಂದು ಇಡೀ ದಿನ ಸಂತೋಷದಿಂದ ಕಳೆಯುತ್ತಾರೆ. ಆ ದಿನ ಮಕ್ಕಳ ಹಬ್ಬ , ಚಿಣ್ಣರ ಚಿಲಿಪಿಲಿ ಹೊಸ ಬಟ್ಟೆ ಹಾಕಿಕೊಂಡು  ಶಾಲೆಗೆ ಬರುವ ಸಂಭ್ರಮದ ಗುಂಗಿನಲ್ಲಿರುತ್ತಾರೆ ,

ಶಾಲೆಯಲ್ಲಿ ಆಟೋಟ ಸ್ಪರ್ಧೆಗಳು ಹಾಡು , ನೃತ್ಯ ಮಾಡುವುದರಿಂದ  ಬಹುಮಾನ ಪಡೆಯುವ ಮೂಲಕ ಸಂಭ್ರಮಿಸುತ್ತಾರೆ. ಎಲ್ಲರೊಂದಿಗೆ ಖುಷಿಯಿಂದ ಬೆರೆತು ಕಲಿತು ಸಂಭ್ರಮವನ್ನು ಆಚರಿಸುತ್ತಾರೆ.. ಈ ಸಂಭ್ರಮ ಕೇವಲ ಮಕ್ಕಳ ದಿನಾಚರಣೆಯಂದು ಮಾತ್ರ ಇರದೆ ಪ್ರತಿದಿನವೂ ಪ್ರತಿಕ್ಷಣವು ಇರಲಿ ಎಂಬುದೇ ನಮ್ಮ ಆಶಯ.

✍️

ಇತ್ತೀಚಿನ ಸುದ್ದಿ

ಜಾಹೀರಾತು