ಇತ್ತೀಚಿನ ಸುದ್ದಿ
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ‘ಸಿ’ ಗ್ರೇಡ್ ದೇಗುಲಗಳ 150 ಅರ್ಚಕರುಗಳಿಗೆ ಆಹಾರದ ಕಿಟ್ ವಿತರಣೆ
29/05/2021, 17:06
ಪುತ್ತೂರು(reporterkarnataka news):
ಎ ಗ್ರೇಡ್ ದೇವಸ್ಥಾನವಾದ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಪುತ್ತೂರು ತಾಲೂಕಿನ ‘ಸಿ’ ಗ್ರೇಡ್ ದೇವಸ್ಥಾನಗಳ 150 ಅರ್ಚಕರುಗಳಿಗೆ 1500 ರೂ.ಮೌಲ್ಯದ ಆಹಾರದ ಕಿಟ್ ಗಳನ್ನು ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅರ್ಚಕರಿಗೆ ಆಹಾರದ ಕಿಟ್ ವಿತರಣೆ ಜೊತೆಗೆ ಪ್ರತಿ ದೇವಸ್ಥಾನಕ್ಕೆ ತಲಾ ಎರಡರಂತೆ ಬಿಲ್ವಪತ್ರೆ ವಿತರಣೆಯನ್ನು ಪುತ್ತೂರು ಸೇವಾ ಭಾರತಿ ವತಿಯಿಂದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯರಾದ ರಾಮಚಂದ್ರ ಕಾಮತ್, ರಾಮ್ ದಾಸ್ ಗೌಡ,ವೀಣಾ ಬಿ.ಕೆ , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ನಿತ್ಯಕರಸೇವಕ ಕಿರಣ್ ಶಂಕರ್‌ಮಲ್ಯ ಮತ್ತು ಸಿ ಗ್ರೇಡ್ ದೇವಸ್ಥಾನದ ಆಡಳಿತ ವರ್ಗದವರು ಉಪಸ್ಥಿತರಿದ್ದರು.