2:16 PM Thursday16 - January 2025
ಬ್ರೇಕಿಂಗ್ ನ್ಯೂಸ್
ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ…

ಇತ್ತೀಚಿನ ಸುದ್ದಿ

ಅಂದು ಪಂಪವೆಲ್ ಗ್ ಬಲೆ! ಇಂದು ಪಂಪವೆಲ್ ಗ್ ಬರೋಚ್ಚಿ !!

29/05/2021, 16:48

ಮಂಗಳೂರು: ಇಂದು ಪಂಪವೆಲ್ ನೀರಿನಲ್ಲಿ ತೇಲಾಡುತ್ತಿದೆ. ಪಂಪವೆಲ್ ಮಾರ್ಗವಾಗಿ ಹೋಗುವವರು ಬೇರೆದಾರಿ ಹುಡುಕುವುದು ಉತ್ತಮ. ಯಾಕೆಂದರೆ ಪಂಪವೆಲ್ ಮೇಲ್ಸೆತುವೆ ಅಡಿಯಲ್ಲಿ ನೀರುತುಂಬಿ ವಾಹನ ಸವಾರರು ಪರದಾಡುತ್ತಿದ್ದಾರೆ.  ಪಂಪವೆಲ್ ಪ್ಲೈಒವರ್ ಆಗುವಾಗಲೂ ನಮ್ಮದು ಅವಸ್ಥೆ ! ಈಗ ಆದಮೇಲೂ ದುರವಸ್ಥೆ. ಒಟ್ಟು ನಮ್ಮೂರಿನ ಹಣೆಬರಹ ಸರಿ ಇಲ್ಲವಾ ಅಂತ ಅನುಸುತ್ತೆ.  


ಪ್ಲೈಒವರ್ ದಶಮಾನೋತ್ಸವ ಆಚರಿಸಿಕೊಂಡ ಬಳಿಕ ಅಳುತ್ತ ಅಳುತ್ತ ಉದ್ಘಾಟನಾ ಭಾಗ್ಯ ಕಂಡಿದ್ದ ಮೇಲ್ಸೇತುವೆ ಅಂದು ಪಂಪವೆಲ್ ಗೆ ಬಲೆ! ಎಂದು ಪ್ರಸಿದ್ಧಿಯಾಗಿದ್ದರೆ ಇಂದು ತನ್ನ ಕಳಪೆ ಕಾಮಗಾರಿಯಿಂದಾಗಿ ಮಂಗಳೂರಿನ ಜನರ ಬಾಯಲ್ಲಿ ಪಂಪವೆಲ್ ಗೆ ಬರೋಚ್ಚಿ!! ಎಂದು ಪ್ರಸಿದ್ದಿಯಗುತ್ತಿದೆ. ಕಾರಣವಿಷ್ಟೆ! ನವಯುಗ ಎಂಬ ದರಿದ್ರ ಕಂಪನಿಯ ಬೇಜವಾಬ್ದಾರಿ, ದರಿದ್ರತನ, ಬುದ್ದಿಗೇಡಿತನದ ಹಾಗೂ ನಿಷ್ಕ್ರಿಯ ತನದ ಫಲವನ್ನು ಮಂಗಳೂರಿಗರು ಅನುಭವಿಸಬೇಕಿದೆ. ಇದನ್ನೆಲ್ಲ ಗಮನಿಸಿ ಎಚ್ಚೆತ್ತುಕೊಂಡು ಆವಾಂತರಗಳನ್ನು ಸರಿಪಡಿಸಬೇಕಿದ್ದ ಜನಪ್ರತಿನಿಧಿಗಳು ಮಾತ್ರ ನಿದ್ದೆಮಾಡುತ್ತಿರುವುದು ನಮ್ಮೂರಿಗಿರುವ ಮತ್ತೊಂದು ಶಾಪ. ಒಟ್ಟಿನಲ್ಲಿ ಹೇಳುವುದಾದ್ರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸುಬಡವಾದಂತೆ ಮಂಗಳೂರಿಗರ ಸ್ಥಿತಿಯಾಗಿದೆ.

– ದಿಲ್ ರಾಜ್ ಆಳ್ವ

ಇತ್ತೀಚಿನ ಸುದ್ದಿ

ಜಾಹೀರಾತು