1:57 PM Tuesday16 - June 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ…

ಇತ್ತೀಚಿನ ಸುದ್ದಿ

ಮೆಣಸಿನ ಕಾಯಿ ಸಸಿಗೆ ಸಿಂಪಡಿಸುವ ಎಣ್ಣೆಯಲ್ಲಿ ಮೋಸ: ಮಾನ್ವಿ ಸಹಾಯಕ ಕೃಷಿ ನಿರ್ದೇಶಕರಿಗೆ ರೈತ ಸಂಘ ದೂರು

10/11/2021, 15:32

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು,
info.reporterkarnataka@gmail.com

ಜಿಲ್ಲೆಯ ಸಿರಿವಾರ ತಾಲೂಕಿನ ಪಟಕನದೊಡ್ಡಿ ಗ್ರಾಮದ ರೈತ ಮಾನ್ವಿಯ ವೆಂಟಕ ಸಾಯಿ ಟೆಂಡರ್ಸ್ ಎಂಬ ಅಂಗಡಿಯಿಂದ ಖರೀದಿಸಿದ
ಮೆಣಸಿನಕಾಯಿ ಸಸಿಗೆ ಸಿಂಪಣಿ ಮಾಡುವ ಎಣ್ಣಿಯಿಂದ ಎರಡೇ ದಿನಗಳಲ್ಲಿ ಮೆಣಸಿನ ಸಸಿ ಸಂಪೂರ್ಣ ಸುಟ್ಟು ಹೋಗಿದ್ದು, ರೈತ ಕಂಗಾಲಾಗಿದ್ದಾರೆ.

ಈ ವಿಷಯವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ರೂಪ ಶ್ರೀನಿವಾಸ್ ನಾಯಕ್ ಅವರಿಗೆ ತಿಳಿಸಿದ್ದು, ಅವರು

ಬುಧವಾರ ಮಾನ್ವಿ ಸಹಾಯಕ ಕೃಷಿ ನಿರ್ದೇಶಕ ಕಾರ್ಯಾಲಯಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ನಂತರ ಅಧಿಕಾರಿಗಳು ಟ್ರೇಡರ್ಸ ಅಂಗಡಿ ಮಾಲೀಕ ಮಾರುವ ಎಣ್ಣೆ ಹೆಸರು (Foshion power & stany microFood) ತಕ್ಷಣ ರದ್ದುಪಡಿಸಿದ್ದಾರೆ. 

ಅಂಗಡಿಯಲ್ಲಿ ಮಾರಾಟ ಮಾಡುವ ಎಲ್ಲ ವಸ್ತುಗಳ ಪರಿಶೀಲನೆ ನಡೆಸಬೇಕು, ಅಂಗಡಿಯ ಪರವಾನಗಿ ರದ್ದುಪಡಿಸಬೇಕು ಮತ್ತು ಸಂತ್ರಸ್ತ ರೈತನಿಗೆ ಪರಿಹಾರ ನೀಡಬೇಕೆಂದು ರೂಪಾ ಶ್ರೀನಿವಾಸ ನಾಯಕ್ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕಿ ಉಮಾದೇವಿ ನಾಯಕ್, ಮಾನ್ವಿ ತಾಲೂಕು ಅಧ್ಯಕ್ಷ ಬಸವರಾಜ್, ಸಿರಿವಾರ ತಾಲೂಕು ಅಧ್ಯಕ್ಷ ನಾಗರಾಜ್, ಮರಿಲಿಂಗ ಪಾಟೀಲ್, ಉಪಾಧ್ಯಕ್ಷರಾದ ವಿರೇಶ್, ಶಾಮು, ಇನ್ನು ಇತರ ರೈತ ಮುಖಂಡರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು