7:00 AM Saturday9 - August 2025
ಬ್ರೇಕಿಂಗ್ ನ್ಯೂಸ್
ರಾಹುಲ್‌ ಗಾಂಧಿಯದ್ದು ಠುಸ್‌ ಪಟಾಕಿ, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿಯ… ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಪ್ರಕರಣ: ಓರ್ವ ಆರೋಪಿಯ ಕೊಕ್ಕಡದಲ್ಲಿ ಬಂಧನ ಆಲಮಟ್ಟಿ ಡ್ಯಾಮ್ ಎತ್ತರ 524 ಮೀಟರ್‌ಗೆ ಹೆಚ್ಚಿಸುವುದು ಕರ್ನಾಟಕದ ಹಕ್ಕು: ಕೇಂದ್ರ ಜಲಶಕ್ತಿ… Chikkamagaluru | ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಉಪಟಳ: ಹೆದ್ದಾರಿ, ಕಾಫಿ ತೋಟದಲ್ಲಿಯೂ ದಾಂಧಲೆ ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಳಿವಿನoಚಿನಲ್ಲಿರುವ ನೀರು ನಾಯಿಗಳ ಕಳ್ಳಬೇಟೆ: ಪ್ರಾಣಿ ಪ್ರಿಯರಿಂದ ಕಾರ್ಯಾಚರಣೆ ಮುತ್ತಾಲಿಕ್ ಜತೆ ವೇದಿಕೆ ಹಂಚಿಕೊಂಡ ಕೈ ಶಾಸಕಿ: ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ… ಮತದಾರರ ಹಕ್ಕು ರಕ್ಷಣೆ ರಾಜಕೀಯ ಪಕ್ಷಗಳ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ…

ಇತ್ತೀಚಿನ ಸುದ್ದಿ

ಸರಕಾರದಿಂದ ಇನ್ನೂ ಸಿಕ್ಕಿಲ್ಲ ವಿಶೇಷ ಪ್ಯಾಕೇಜ್: ಖಾಸಗಿ ಶಾಲಾ ಶಿಕ್ಷಕರ ಗೋಳು ಕೇಳುವರ್ಯಾರು?  

29/05/2021, 08:18

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರೊನಾ ಹೊಡೆತಕ್ಕೆ ಇಡಿ ರಾಜ್ಯವೇ ತಲ್ಲಣಗೊಂಡಿದೆ. ಇಂಥ ಪರಿಸ್ಥಿತಿಯ ಖಾಸಗಿ ಶಾಲಾ ಶಿಕ್ಷಕ ಬದುಕು ಬೀದಿಗೆ ಬಂದಿದೆ. ನಾವು ಗುರುವೇ ದೇವರು ಎಂದು ನಂಬುತ್ತೇವೆ. ಅಂತಹ ಗುರುಗಳು ಕಳೆದ ಎರಡು ವರ್ಷಗಳಿಂದ ಯಾವುದೇ ಸಂಬಳವಿಲ್ಲದೆ ಕುಟುಂಬ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ.

ಖಾಸಗಿ ಶಾಲೆ ಶಿಕ್ಷಕರ ಪರಿಸ್ಥಿತಿ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕಿರುವುದು ಎದ್ದುಕಾಣುತ್ತದೆ. ಜಿಲ್ಲೆ ಎಲ್ಲ ಅತಿಥಿ ಶಿಕ್ಷಕರು, ಖಾಸಗಿ ಶಾಲಾ ಶಿಕ್ಷಕರು ನೋವು ಅನುಭವಿಸುತ್ತಿದ್ದಾರೆ. ಖಾಸಗಿ ಆಡಳಿತ ಮಂಡಳಿ ಕೆಲವರಿಗೆ ಸಂಬಳ ಕೊಟ್ಟಿದ್ದಾರೆ. ಕೆಲವರಿಗೆ ಕೊಟ್ಟಿಲ್ಲ. ಯಾವುದೇ ಹಣ ನೀಡದೆ ಸಂಸ್ಥೆ  ಕೈತೊಳೆದುಕೊಂಡಿದೆ. ಸರಕಾರ ವಿಶೇಷ ಪ್ಯಾಕೇಜ್ ಮಾಡುತ್ತದೆ ಎಂದು ಭರವಸೆ ನೀಡಿ ಇಲ್ಲಿವರೆಗೂ ಯಾವುದೇ ಜಾರಿಗೊಳಿಸದೆ ಮತ್ತಷ್ಟು ಶಿಕ್ಷಣ ಕ್ಷೇತ್ರದಲ್ಲಿ ನೋವು ಉಂಟುಮಾಡಿದೆ. ಮನಸ್ಸಿಗೆ ನಿರಾಶೆ ತಂದಿದೆ.  ಉನ್ನತ ಕೋರ್ಸ್ ಮುಗಿಸಿ ಪರಿಣತಿ ಪಡೆದವರಿಗೆ ಕೂಡ ನಿರುದ್ಯೋಗ ತಪ್ಪಿಲ್ಲ. ಎರಡು ವರ್ಷ ಕೊರೊನಾ ಲಾಕ್ ಡೌನ್ ಆಗಿ ಶಾಲಾ ಕಾಲೇಜು ಸರಕಾರ ರಜೆ ಘೋಷಣೆ ಮಾಡಿರುವುದರಿಂದ ಒಂದು ದಿನದ ಆಹಾರ ಪಡೆದುಕೊಳ್ಳಲು ಸಹ ಕಣ್ಣೀರು ಹಾಕುವ ಪರಿಸ್ಥಿತಿ ಉದ್ಬವಿಸಿದೆ.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಶಾಸಕರು   ಎಲ್ಲಾ ಭರವಸೆಗಳನ್ನು ನೀಡಿ, ಮನವಿ ಪತ್ರ ಸ್ವೀಕರಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಥಳೀಯ ಪ್ರತಿನಿಧಿ ಆದರೂ ಸಹಾಯ ಮಾಡಬಹುದು ಎಂಬ ಭರವಸೆಯ ಮೇಲೆ ನಂಬಿ ಕುಂತಿರುವ ಖಾಸಗಿ ಶಿಕ್ಷಕರ ಗೋಳು ಕೇಳುವವರೇ ಇಲ್ಲವಾಗಿದೆ. ಸರಕಾರ ಎಚ್ಚೆತ್ತುಕೊಂಡು ವಿದ್ಯೆ ಕಲಿಸುವ ಗುರುಗಳಿಗೆ ವಿಶೇಷ ಪ್ಯಾಕೇಜ್ ಜಾರಿಗೊಳಿಸಿ  ಅವರ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಕುರಿತು ಖಾಸಗಿ ಶಾಲಾ ಶಿಕ್ಷಕಿ ಕೆ. ಸರಸ್ವತಿ ನಾಗರಾಜ್ ಗಂಗಾಮತ ಮಾತನಾಡಿ, ಸರಕಾರ ಅತಿಥಿ ಉಪನ್ಯಾಸಕರಿಗೆ, ಖಾಸಗಿ ಶಿಕ್ಷಕರಿಗೆ ಹಾಗೂ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಸೂಕ್ತ ಪರಿಹಾರ ನೀಡುವ ಕೆಲಸ ಮಾಡಬೇಕು. ಖಾಸಗಿ ಶಿಕ್ಷಕರು, ಅತಿಥಿ ಉಪನ್ಯಾಸಕರು ಕಳೆದ 2 ವರ್ಷಗಳು ಕಷ್ಟಗಳು ಎದುರಿಸುವಂತಾಗಿದೆ ಎಂದು ತಮ್ಮ ನೋವನ್ನು ರಿಪೋರ್ಟರ್ ಕರ್ನಾಟಕ ಮುಂದೆ ತೋಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು