10:20 PM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಸಿನಿ ರಿಪೋರ್ಟ್ : ಜೈ ಭೀಮ್ ಸಿನಿಮಾದ ಹೇಬಿಯಸ್ ಕಾರ್ಪಸ್ ಅರ್ಜಿ ಮತ್ತು ಹಂದಿಗಳಿಗೆ ಮಾಂಸವಾದ ಕೇರಳದ ವಿದ್ಯಾರ್ಥಿ ಪಿ.ರಾಜನ್ ಪ್ರಕರಣ

07/11/2021, 17:01

ವಿ.ಜಿ.ವೃಷಭೇಂದ್ರ ಕೂಡ್ಗಿಗಿ ವಿಜಯನಗರ
info.reporterkarnataka@gmail.com

ಕುಟುಂಬ ಸಮೇತ ನೋಡುವ ಸಿನಿಮಾ ‘ಜೈ ಭೀಮ್’ ನೈಜ ಘಟನೆಯ  ಮರುಚಿತ್ರಣ ಇದಾಗಿದೆ. ಅಮಾಯಕರನ್ನು ಬಂಧಿಸಿ ಶಿಕ್ಷೆ ಕೊಡಿಸುವ ಪೋಲಿಸರು, ಪ್ರಾಸಿಕ್ಯೂಷನ್ ಕುಕೃತ್ಯಗಳನ್ನು ಅನಾವರಣಗೊಳಿಸುವ ಚಲನಚಿತ್ರ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.

ಈ ಚಲನಚಿತ್ರದಲ್ಲಿ ಪೋಲಿಸ್ ಠಾಣೆಯಿಂದ ಪರಾರಿಯಾದರೆಂದು ಹೇಳಲ್ಪಡುವವರ ಪರವಾಗಿ ಎಡ ಪಂಥೀಯ ವಿಚಾರಧಾರೆಯ ವಕೀಲರಾದ ಕಾಮ್ರೇಡ್ ಚಂದ್ರು, ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ಸಲ್ಲಿಸುತ್ತಾರೆ. ಆ ಸಂದರ್ಭದಲ್ಲಿ ಸರಕಾರಿ ವಕೀಲರು ಅರ್ಜಿಯನ್ನು ತಿರಸ್ಕರಿಸುವಂತೆ ಮಾಡಿದ ವಾದಕ್ಕೆ ಪ್ರತಿಯಾಗಿ ನ್ಯಾಯವಾದಿ ಚಂದ್ರುರವರು ಕೇರಳ ಹೈ ಕೋರ್ಟ್ ನ ನಿರ್ಧರಿತ ಪ್ರಕರಣ “ಪಿ.ರಾಜನ್ ಹೇಬಿಯಸ್ ಅರ್ಜಿ ಕೇರಳ ರಾಜ್ಯ” ವನ್ನು ಉಲ್ಲೇಖಿಸಿ,  ಮೂರು ಮಂದಿ ಇರುಳಿಗರು ಪೋಲೀಸರ ವಶದಲ್ಲಿದ್ದಾಗ ಕಾಣೆಯಾಗಿರುವ ಕುರಿತ ‘ಹೇಬಿಯಸ್ ಕಾರ್ಪಸ್’ ಅರ್ಜಿಯನ್ನು ಪುರಸ್ಕರಿಸಬೇಕೆಂದು ಮನವಿ ಮಾಡುತ್ತಾರೆ. ಮದ್ರಾಸಿನ ಘನ ಉಚ್ಛ ನ್ಯಾಯಾಲಯ ಮನವಿಯನ್ನು ಪುರಸ್ಕರಿಸಿ, ಅರ್ಜಿಯ ವಿಚಾರಣೆಗೆ ಅಂಗೀಕರಿಸಿ ಸರಕಾರ ಮತ್ತು ಪೋಲಿಸರಿಗೆ ನೋಟಿಸ್ ಜಾರಿ ಮಾಡುತ್ತದೆ. ಇದು ಅತ್ಯಂತ ಮಹತ್ವದ ಘಟ್ಟವಾಗಿದೆ. ಹೇಬಿಯಸ್ ಕಾರ್ಪಸ್-

1975 – 77 ರವರೆಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿ, ನಾಗರೀಕರ ಮೂಲಭೂತ ಹಕ್ಕುಗಳನ್ನು ಅಮಾನ್ಯಗೊಳಿಸಿದ್ದರು. ಕಾರಣ ಮತ್ತು ವಿಚಾರಣೆ ಇಲ್ಲದೆ ಯಾರನ್ನು ಬೇಕಾದರು ಬಂಧಿಸಲಾಗುತ್ತಿತ್ತು. ರಾಜಕೀಯ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಮತ್ತು ಇಡಿಯಾಗಿ ವಿರೋಧ ಪಕ್ಷದ ಎಲ್ಲಾ ನಾಯಕರನ್ನು ಬಂಧಿಸಿ ವಿವಿಧ ರಾಜ್ಯಗಳ ಬಂಧೀಖಾನೆಯಲ್ಲಿಡಲಾಗಿತ್ತು. 

1976 ರಲ್ಲಿ ಕೇರಳ ರಾಜ್ಯದ ಕ್ಯಾಲಿಕಟ್ ನ ರೀಜನಲ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಪಿ. ರಾಜನ್ ಅವರನ್ನು  ಹಾಸ್ಟೆಲ್ನಿಂದ ಕೇರಳ ಪೋಲಿಸರು ಅಕ್ರಮವಾಗಿ ಬಂಧಿಸಿ,  ಹಿಂಸೆ ನೀಡಿದ ಪರಿಣಾಮವಾಗಿ ರಾಜನ್ ಠಾಣೆಯಲ್ಲೇ ಅಸು ನೀಗುತ್ತಾನೆ.

ಪಿ. ರಾಜನ್ ರವರ ತಂದೆ ವಾರಿಯರ್  ಕೇರಳ ರಾಜ್ಯ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸುತ್ತಾರೆ. ದೇಶಾದ್ಯಂತ ಈ ಪ್ರಕರಣ ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸುತ್ತದೆ. ಈ ಸಂದರ್ಭದಲ್ಲಿ ಕೇರಳದಲ್ಲಿನ  ಕಾಂಗ್ರೆಸ್ ಸರಕಾರ ಮತ್ತು ಪೋಲಿಸರು ಮುಜುಗರದಿಂದ  ತಪ್ಪಿಸಿಕೊಳ್ಳಲು, ವಿಧಾನಸಭೆ ಮತ್ತು ನ್ಯಾಯಾಲಯಗಳಲ್ಲಿ ಸುಳ್ಳು ಹೇಳಿಕೆ ನೀಡುತ್ತವೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ದಮನಿಸಲಾದರೂ ಸಂವಿಧಾನದ ಅನುಚ್ಛೇಧ 21 ಜೀವಿಸುವ ಹಕ್ಕು , ನ್ಯಾಯಾಂಗ ಪ್ರಕ್ರಿಯೆ ಇಲ್ಲದೆ ಪ್ರಾಣ ತೆಗೆಯುವ ಹಕ್ಕು ಯಾರಿಗೂ ಎಂದರೆ ಸರಕಾರಕ್ಕೂ ಇಲ್ಲವೆಂಬ ಆಧಾರದಲ್ಲಿ ಮತ್ತು ಮೂಲಭೂತ ಹಕ್ಕುಗಳಿಗೆ  ಖಾಸಗಿ ವ್ಯಕ್ತಿ/ ಸಂಘಟನೆ ಅಥವಾ ಸರಕಾರದಿಂದ ಧಕ್ಕೆಯುಂಟಾದಾಗ ಭಾರತೀಯ ಪ್ರಜೆಯು ಸಂವಿಧಾನದ 226 ವಿಧಿಯನ್ವಯ ರಾಜ್ಯ ಹೈಕೋರ್ಟ್ ಮತ್ತು ಸಂವಿಧಾನದ 32 ವಿಧಿಯನ್ವಯ ಸುಪ್ರೀಂ ಕೋರ್ಟಿನ ಮೊರೆ ಹೋಗಲು ನೀಡಿರುವ ಅವಕಾಶ. ಈ ಮೇಲ್ಕಂಡ ವಿಧಿಗಳನುಸಾರ ವಿಚಾರಣೆಯನ್ನು  ಕೈಗೆತ್ತಿಗೊಳ್ಳುತ್ತದೆ.

ಪ್ರಕರಣದ ವಿಚಾರಣೆ ಮುಂದುವರೆದಂತೆ ದೇಶವೇ ಬೆಚ್ಚಿಬೀಳಿಸುವ ಕೃತ್ಯವನ್ನು ಪೋಲಿಸರು ಮಾಡಿರುವುದು ಗೊತ್ತಾಗುತ್ತದೆ.

ಠಾಣೆಯಲ್ಲಿ ಪೋಲಿಸರಿಂದ ಕೊಲೆಯಾದ ಪಿ. ರಾಜನ್ ಶವವನ್ನು ದಫನ ಮಾಡಿದರೆ ಸಿಕ್ಕಿ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ, ಕ್ರೂರ ಸರ್ವಾಧಿಕಾರಿ ಹಿಟ್ಲರ್ ನಿಗೆ ಸಹ ಹೊಳೆದಿಲ್ಲದ ಯೋಚನೆ ಕೇರಳ ಪೊಲೀಸರಲ್ಲಿ ಮೂಡುತ್ತದೆ.

ಅವರ ಯೋಜನೆಯಂತೆ ಪಿ. ರಾಜನ್ ರವರ ಮೃತ ದೇಹವನ್ನು ಸರಕಾರಿ ಹಂದಿ ಸಾಕಾಣಿಕೆ ಕೇಂದ್ರಕ್ಕೆ ಸಾಗಿಸಿ, ದೇಹವನ್ನು ಕೈಮಾ ಮಾಡುವ ಯಂತ್ರದಲ್ಲೊಡ್ಡಿ ಇಡೀ ದೇಹವನ್ನು  ಅಣು ಅಣುವನ್ನಾಗಿ ಕತ್ತರಿಸಿ ಸರಕಾರಿ ಹಂದಿಗಳಿಗೆ ನರಮಾಂಸದ ಪುಷ್ಕಳ ಭೋಜನವನ್ನಾಗಿ ನೀಡಿ ಸಂಪೂರ್ಣ ಸಾಕ್ಷ್ಯ ನಾಶ ಮಾಡಿರುತ್ತಾರೆ. ಅಬ್ಬಾ ಪೋಲಿಸರೆಂದರೆ  ಸಾಮಾನ್ಯರಲ್ಲ.

ಹೇಬಿಯಸ್ ಕಾರ್ಪಸ್ ಅರ್ಜಿಯನುಸಾರ ಕಾಣೆಯಾಗಿರುವ ವ್ಯಕ್ತಿಯನ್ನು ಕೋರ್ಟಿನ ಮುಂದೆ ಹಾಜರುಪಡಿಸಲೇಬೇಕು. ಹಂದಿಗಳಿಗೆ ಆಹಾರವಾಗಿ, ಆ ಹಂದಿಗಳೂ ಸಹ ಮನುಷ್ಯನ ಹೊಟ್ಟೆ ಸೇರಿ ಗೊಬ್ಬರವಾಗಿರುವಾಗ ಪಿ.ರಾಜನ್ ಎಂಬ ವಿದ್ಯಾರ್ಥಿಯನ್ನು  ಹೇಗೆ ತಾನೇ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯ ?

1977 ರಲ್ಲಿ ವಿಶ್ವದ ಪ್ರಜಾಪ್ರಭುತ್ವ ಪ್ರೇಮಿಗಳು, ಮಾನವ ಹಕ್ಕುಗಳ  ಹೋರಾಟಗಾರರು, ಭಾರತದಲ್ಲಿ ಜೆಪಿ ನಾಯಕತ್ವದ ಹೋರಾಟಗಳ ಕಾರಣದಿಂದಾಗಿ ಇಂದಿರಾಗಾಂಧಿ  ತುರ್ತು ಪರಿಸ್ಥಿತಿಯನ್ನು ಹಿಂಪಡೆದು ಚುನಾವಣೆ ನಡೆಸಿ ಸೋಲುಂಡರು. ಇತ್ತ ಕೇರಳದಲ್ಲಿ 1977 ಜೂನ್ 14  ರಲ್ಲಿ ವಿಚಾರಣೆ ಪೂರ್ಣವಾಗಿ ತಪ್ಪಿತಸ್ಥರಿಗೆ ನ್ಯಾಯಮೂರ್ತಿಗಳಾದ ಸುಬ್ರಹ್ಮಣ್ಯ ಪೊಟ್ಟಿ ಮತ್ತು ನ್ಯಾ. ಖಾಲೀದ್ ಶಿಕ್ಷೆಯನ್ನು ವಿಧಿಸಿದರು.

ಕೃತ್ಯ ನಡೆದ ಸಂದರ್ಭದಲ್ಲಿ ಗೃಹ ಮಂತ್ರಿಯಾಗಿದ್ದ ಕೆ.ಕರಣಾಕರನ್ ತೀರ್ಪು ಬಂದ ಸಮಯದಲ್ಲಿ ಕೇರಳ  ಮುಖ್ಯಮಂತ್ರಿಯಾಗಿದ್ದರು. ತೀರ್ಪಿನ ಕಾರಣದಿಂದ ಮತ್ತು ರಾಜನ್ ರವರ ತಂದೆ ವಾರಿಯರ್ ರವರು ಪ್ರಕರಣ ಕರಪತ್ರಗಳ ಮೂಲಕ ಜನಜಾಗೃತಿಗೊಳಿಸಿದ್ದರ ಪರಿಣಾಮ ಕರುಣಾಕರನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತಿ. ಈ ಕುರಿತ ಸಿನೆಮಾ ಸಹ ಮಲಯಾಳಂ ನಲ್ಲಿ ಚಿತ್ರಿಸಲಾಗಿದೆ.

ಈ ಪ್ರಕರಣವನ್ನು ಪಿ.ರಾಜನ್ ರ ತಂದ ರಾಮಕುಮಾರ್ ಎಂಬ ಪ್ರಾಮಾಣಿಕ ನ್ಯಾಯವಾದಿಯ ನೆರವಿನಿಂದ  ಸಾರ್ವಜನಿಕರು ಹಾಗೂ ಕಮ್ಯೂನಿಷ್ಟ್ ಹೋರಾಟಗಾರರ ಬೆಂಬಲದಿಂದ ಕಾನೂನಾತ್ಮಕ ಹೋರಾಟ ನಡೆಸಿದರು. ಲಾಕಪ್ ಡೆತ್ತು ಗಳು ಈ ರೀತಿಯಲ್ಲಿ ಇಳಿಮುಖವಾದರೂ ಅಮಾಯಕರು ಮತ್ತು ಧ್ವನಿ ಇಲ್ಲದವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವ ದುರಭ್ಯಾಸ ಅವ್ಯಾಹತವಾಗಿ ಮುಂದುವರೆದಿದೆ. ನಮ್ಮ ರಾಜ್ಯದಲ್ಲಿಯೂ ಸಹ ಕಾರ್ಮಿಕ ಮುಖಂಡ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕಾಮ್ರೇಡ್ ಸೂರಿ ಯವರ ವಿರುದ್ಧ ಸುಳ್ಳು ಕೊಲೆ ಮೊಕದ್ದಮೆ ಹೂಡಿದ್ದನ್ನು ಸ್ಮರಿಸಬಹುದು.

ಅನವಶ್ಯಕವಾಗಿ ತುರ್ತು ಪರಿಸ್ಥಿತಿಯನ್ನು ಹೇರುವ ಯತ್ನಕ್ಕೆ ಮೊರಾರ್ಜಿ ದೇಸಾಯಿವರ ನೇತೃತ್ವದ ಸರಕಾರ ಸಂವಿಧಾನ ತಿದ್ದುಪಡಿಯ ಮೂಲಕ ಕಡಿವಾಣ ಹಾಕಿದೆ. ಈ ಪ್ರಕರಣದ ನಂತರ ಭಾರತೀಯ ಪ್ರಜೆಗಳು ಮತ್ತು ಉನ್ನತ ನ್ಯಾಯಾಲಯಗಳು ಸಂವಿಧಾನದ 226,32 ಮತ್ತು 21 ನೆಯ ವಿಧಿಗಳ ಮಹತ್ವವನ್ನು ಅರಿತವು ಎಂದರೆ ತಪ್ಪಾಗಲಾರದು. ಮೂಲಭೂತ ಹಕ್ಕುಗಳ ಹಾಗೂ ಮಾನವ ಹಕ್ಕು ಉಲ್ಲಂಘನೆ ಜರುಗದಂತೆ, ನೋಡಿಕೊಳ್ಳುವುದು ಸಂವಿಧಾನದ ಮೂಲ ಉದ್ದೇಶದಲ್ಲೊಂದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು