6:03 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ಅಕ್ಟೋಬರ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ತೇಜಸ್ ಹಾಗೂ ಸಾತ್ವಿಕ್ ಭಟ್ ಆಯ್ಕೆ

04/11/2021, 19:08

ಮಂಗಳೂರು(reporterkarnataka.com):ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್  ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ತೇಜಸ್ ಬಿ.ವಿ. ಹಾಗೂ ಸಾತ್ವಿಕ್ ಭಟ್ ಆಯ್ಕೆಗೊಂಡಿದ್ದಾರೆ.

ದಾವಣಗೆರೆಯ ತೇಜಸ್ ಬಿ.ವಿ. 2ನೇ ತರಗತಿಯ ವಿದ್ಯಾರ್ಥಿ. ತಂದೆ ವೀರೇಶ್  ಬಿ.  ಹಾಗೂ ತಾಯಿ ವಿದ್ಯಾ ಲಕ್ಷ್ಮಿ. ಈತ ದಾವಣಗೆರೆಯ ಶ್ರೀ ಜಗದ್ಗುರು ಮುರುಘ ರಾಜೇಂದ್ರಶಾಲೆಯ ವಿದ್ಯಾರ್ಥಿ. ಬೇಸಿಕ್  ಡಾನ್ಸ್ ಮತ್ತು ವೆಸ್ಟ್ರೆನ್ ಹಿಫಾಪ್ ಡಾನ್ಸ್ 1 ವರ್ಷ ಕಲಿಯುತ್ತಿದ್ದಾನೆ. ನೃತ್ಯ, ಅಭಿನಯ, ಕಥೆ ಹೇಳುವುದು ಈತನ ಹವ್ಯಾಸ. ವಾಯ್ಸ್ ಆಫ್ ಆರಾಧನಾ ಸಂಸ್ಥೆ ಗೆ ಲೈವ್ ಕಾರ್ಯಕ್ರಮದಲ್ಲಿ ಸೇರಿಕೊಂಡೆ ಪ್ರತಿಭೆ ಈತ.


ದಾಸರಹಳ್ಳಿ ಜನಸ್ಪಂದನ ಟ್ರಸ್ಟ್ ನ ಕಲಾ ಕುಸುಮ

ಆಯೋಜಿಸಿರುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಛದ್ಮವೇಷ ಸ್ಪರ್ಧೆ ಯಲ್ಲಿ ದ್ವಿತೀಯ, ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ  ಗಾಯನ ಸ್ಪರ್ಧೆಯಲ್ಲಿ ದ್ವಿತೀಯ,

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಉತ್ತಮ,  ಜನರಲ್ ನಾಲೆಜ್ ಸ್ಪರ್ಧೆ ಯಲ್ಲಿ ಅತ್ಯುತ್ತಮ ಮತ್ತು ಬಣ್ಣ ಡ್ಯಾನ್ಸ್ ಕಾಸ್ಟ್ಯೂಮ್ ಬ್ರಂಹವರ (ಉಡುಪಿ) ರವರ ಮುದ್ದು ಕೃಷ್ಣ ಮುದ್ದು ರಾಧೆ ಸ್ಪರ್ಧೆಯಲ್ಲಿ ಪ್ರಶಂಸಾ ಪತ್ರ ಮತ್ತು ವಾಯ್ಸ್ ಆಫ್ ಆರಾಧನಾ ಸಂಸ್ಥೆ ಯಲ್ಲಿ ಬೆಸ್ಟ್  ಪರ್ಪೋಮರ್ ಆಗಿ ಸೆಲೆಕ್ಟ್ ಆಗಿದ್ದನು. ಹಾಗೆ ಉಡುಪಿಯ ರಿಸೋರ್ಸ್ ಕಂಪನಿ ಯವರು ನಡೆಸಿರುವ ಸ್ಟಾರ್ ಕಿಡ್ ಅವಾರ್ಡ್-2021 ಸ್ಪರ್ಧೆಯಲ್ಲಿ ಸಹ ಭಾಗವಹಿಸಿದ್ದಾನೆ.

ಕೇರಳದ ಕೊಚ್ಚಿಯ ಸಾತ್ವಿಕ್ ಭಟ್ ಅಮೃತ  ವಿದ್ಯಾಲಯದಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಚಿಕ್ಕದಿoದಲೇ ಡಾನ್ಸ್ ನಲ್ಲಿ ಬಹಳ ಆಸಕ್ತಿ ಹೊಂದಿದ ಇವನು 3ನೇ ವಯಸ್ಸಿಗೆ ಭರತನಾಟ್ಯ ವನ್ನು ಕಲಿಯಲು ಆರಂಭಿಸಿದನು. ಹಲವಾರು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾನೆ. ಜಾನಪದ ನೃತ್ಯದಲ್ಲಿ ಹಲವು ಬಹುಮಾನ ಗಳನ್ನು ತನ್ನದಾಗಿಸಿಕೊಂಡಿದ್ದಾನೆ.

ಈಜಿನಲ್ಲೂ ಎತ್ತಿದ  ಕೈ. ಕೀಬೋರ್ಡ್ ನಲ್ಲೂ ಆಸಕ್ತಿ ಯಾಗಿ ಅದನ್ನು ಅಭ್ಯಾಸ ಮಾಡುತ್ತಿದ್ದಾನೆ. ಚಿತ್ರ ಕಲೆ, ಜಾನಪದ ಪದ್ಯ, ಹಾಗೂ ಛದ್ಮ ವೇಷದಲ್ಲೂ ಬಹಳ ಆಸಕ್ತಿ  ಹೊಂದಿದ ಇವನು ಹಲವಾರು ವೇದಿಕೆಯಲ್ಲೂ ಪ್ರದರ್ಶನ ಮಾಡಿದನು. ಭಗವಾದ್ ಗೀತೆಯನ್ನು ನಿರರ್ರ್ಗಳವಾಗಿ ಹೇಳುವನು .3ನೇ ವಯಸ್ಸಿಗೆ “ಬೇಬಿ ಕಿಂಗ್’ ಎನ್ನುವ ಪಟ್ಟ ಇವನ ಮುಡಿಗೆರಿತು.  ದೇವಿಪ್ರಸಾದ್ ಭಟ್ ಹಾಗೂ ಕಾವ್ಯ ಪ್ರಸಾದ್ ಅವರ ಪುತ್ರನಾದ ಇವನು ಕೇರಳದ ಕೊಚ್ಚಿಯಲ್ಲಿ ವಾಸಿಸುತ್ತಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು