ಇತ್ತೀಚಿನ ಸುದ್ದಿ
ಕುಡ್ಲದ ಪೊಣ್ಣು ಚಾಂದಿನಿ ಅಭಿನಯದ ‘ಕಾರ್ನಿಕೊದ ಕಲ್ಲುರ್ಟಿ’ ಪ್ರಿಮಿಯರ್ ಶೋ ಅಕ್ಟೋಬರ್ 28ರಂದು
26/10/2021, 08:39
ಮಂಗಳೂರು(reporterkarnataka.com): ಕರಾವಳಿಯ ಬೆಡಗಿ ಚಾಂದಿನಿ ಅಂಚನ್ ಅಭಿನಯಿಸಿದ ‘ಕಾರ್ನಿಕೊದ ಕಲ್ಲುರ್ಟಿ’ ಚಾರಿತ್ರಿಕ ತುಳು ಚಲನಚಿತ್ರ ಪ್ರಿಮಿಯರ್ ಶೋ ಕಾರ್ಕಳದ ರಾಧಿಕಾ ಚಲನಚಿತ್ರ ಮಂದಿರದಲ್ಲಿ ಅಕ್ಟೋಬರ್ 28ರಂದು ಸಂಜೆ 5 ಗಂಟೆಗೆ ನಡೆಯಲಿದೆ.
ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ಪ್ರಿಮಿಯರ್ ಶೋನಲ್ಲಿ ಭಾಗವಹಿಸಲಿದ್ದಾರೆ.
o
ನಟಿ ಚಾಂದಿನಿ ಅವರು ಹಲವು ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಖ್ಯಾತ ನಟ ಉಪೇಂದ್ರ ಅವರ ಜತೆ ಅಭಿನಯಿಸಿದ ಹೆಗ್ಗಳಿಕೆಯನ್ನು ಕೂಡ ಚಾಂದಿನಿ ಪಡೆದಿದ್ದಾರೆ. ಮಾಡೆಲಿಂಗ್ ನಲ್ಲಿಯೂ ಅವರು ಎತ್ತಿದ ಕೈ. ಅವರು ರಿಪೋರ್ಟರ್ ಕರ್ನಾಟಕದ ಬ್ರಾಂಡ್ ಅಂಬಾಸಿಯಡರ್ ಕೂಡ ಹೌದು.