4:48 PM Friday3 - May 2024
ಬ್ರೇಕಿಂಗ್ ನ್ಯೂಸ್
ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:…

ಇತ್ತೀಚಿನ ಸುದ್ದಿ

ರಾಯಚೂರು: ಗಲ್ಲಿ ಗಲ್ಲಿಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾದ ಮಟ್ಕಾ ಸಾರಾಯಿ, ಇಸ್ಪೀಟ್ ದಂಧೆ; ಜಿಲ್ಲಾ ಪೊಲೀಸ್ ವರಿಷ್ಠರೇ ಏನು ಹೇಳುತ್ತೀರಿ? 

25/10/2021, 08:23

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ರಾಯಚೂರು ಜಿಲ್ಲೆಯ ದೇವದುರ್ಗ, ಸಿಂಧನೂರು , ಮಸ್ಕಿ, ಲಿಂಗಸಗೂರು, ಮಾನ್ವಿ ಹಾಗೂ ಗ್ರಾಮೀಣ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಸಾರಾಯಿ, ಮಟ್ಕಾ, ಜೂಜಾಟದ ಅಡ್ಡೆಯಾಗುತ್ತಿದೆ.

ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಮಟ್ಕಾ, ಸಾರಾಯಿ ಜೂಜಾಟ, ಇಸ್ಪೀಟ್ ಮುಂತಾದ ಅಕ್ರಮ ದಂಧೆಗಳು ರಾಜಾರೋಷವಾಗಿ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಯುವಪೀಳಿಗೆ ಸಾರಾಯಿ, ಮಟ್ಕಾ  ಜೂಜಾಟದ ದಾಸರಾಗುತ್ತಿದ್ದಾರೆ. ಇದನ್ನೆಲ್ಲ ತಡೆದ ಸ್ವಸ್ಥ ಸಮಾಜ ನಿರ್ಮಿಸಬೇಕಾದ ಪೊಲೀಸ್ ಇಲಾಖೆ ಮಾತ್ರ ಕೈಕಟ್ಟಿ ಕುಳಿತಿದೆ.

ಅಕ್ರಮ ಚಟುವಟಿಕೆಗಳು ಎಲ್ಲೆಲ್ಲಿ ನಡೆಯುತ್ತಿದೆ ಎನ್ನುವುದು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಪೋಲೀಸರಿಗೆ ಚೆನ್ನಾಗಿ ಗೊತ್ತಿದ್ದರೂ ಅವರು ತಡೆಗಟ್ಟುವ ನಿಟ್ಟಿನಲ್ಲಿ ಅಸಡ್ಡೆ ತೋರಿಸುತ್ತಿದ್ದಾರೆ. ರಾಯಚೂರಿಗೆ ಹೊಸತಾಗಿ ಬಂದ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿಯವರು ಇದಕ್ಕೆಲ್ಲ ಕಡಿವಾಣ ಹಾಕಬೇಕೆನ್ನುವುದು ನಾಗರಿಕರ ನಿರೀಕ್ಷೆಯಾಗಿದೆ.

ಸಾರಾಯಿ, ಮಟ್ಕಾ, ಜೂಜು, ಇಸ್ಪೀಟ್ ನಿಂದ ಬಡ ಕುಟುಂಬಗಳು ಒಂದೊಂದಾಗಿ ಬೀದಿಗೆ ಬಂದು ಬೀಳುತ್ತಿದೆ. ಮೊದಲೇ ಬೆಲೆಯೇರಿಕೆಯಿಂದ ತತ್ತರಿಸಿರುವ ಜನರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಬೆಳಗ್ಗೆ ಟೀ ಕುಡಿಯದಿದ್ದರೂ ಪರವಾಗಿಲ್ಲ, ಸಾರಾಯಿ ಮಾತ್ರ ಬೇಕು ಎನ್ನುವ ಪರಿಸ್ಥಿತಿಗೆ ಯುವಕರು ಬಂದು ತಲುಪಿದ್ದಾರೆ. ಯುವಜನಾಂಗ ಬೆಳಗ್ಗೆಯಾಗುತ್ತಿದ್ದಂತೆ ಸಾರಾಯಿ ಅಂಗಡಿ ಕಾಯುತ್ತಿರುತ್ತಾರೆ. ಹೆಂಡತಿಯ ಬಂಗಾರ ಅಡವಿಟ್ಟು, ತಾಯಿಯ ಮಾಂಗಲ್ಯ ಮಾರಿ ಮಟ್ಕಾ ಆಡುವ ಯುವಕರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. 

ಕಾಣದ ಕೈಗಳ ಆಟ: ಪೊಲೀಸ್ ಇಲಾಖೆಗೆ ಅಕ್ರಮ ಚಟುವಟಿಕೆ ತಡೆಯಲು ಕಷ್ಟವೇನಿಲ್ಲ. ಆದರೆ ಅದು ಅವರಿಗೆ ಬೇಕಾಗಿಲ್ಲ.ಕಾಣದ ಕೈಗಳ ಜತೆ ಒಪ್ಪಂದ ನಡೆದಿರುತ್ತದೆ ಎಂದು ನಾಗರಿಕರು ಆರೋಪಿಸುತ್ತಾರೆ.

ಮರಳು ದಂಧೆ : ಇವೆಲ್ಲದರ ಜತೆ ಜಿಲ್ಲೆಯ ತಾಲೂಕು ಕೇಂದ್ರಗಳ ಸಮೀಪವಿರುವ ಲಿಂಗದಹಳ್ಳಿ, ಚಿಂಚೋಡಿ, ಬಾಗೂರು, ಮುದಗೋಟ ಊರುಗಳ ಪಕ್ಕದಲ್ಲಿ ಹರಿಯುವ ಕೃಷ್ಣಾ ನದಿಯಿಂದ ಅಕ್ರಮ ಮರುಳು ಸಾಗಾಟ ನಿರಂತರವಾಗಿ ನಡೆಯುತ್ತಿದೆ. ಸರಕಾರದ ಕಣ್ಣು ತಪ್ಪಿಸಿ ಮರುಳುಗಾರಿಕೆ ನಡೆಸಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು