ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವರದಿ ಫಲಶ್ರುತಿ: ಬೆಳಿಗ್ನೋರೂ ಶಾಲೆ ಪಕ್ಕದಲ್ಲಿ ಬ್ರಿಜ್ ಗೆ ಕೊನೆಗೂ ತಡೆಗೋಡೆ ನಿರ್ಮಾಣ
24/10/2021, 09:12
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಕ್ಷೇತ್ರ ವ್ಯಾಪ್ತಿಯ ಬಳಗಾನೂರ ಸಮೀಪದ ಬೆಳಿಗ್ನೋರೂ ಗ್ರಾಮದಲ್ಲಿ ಶಾಲೆ ಪಕ್ಕದಲ್ಲಿ ಬ್ರಿಜ್ ಗೆ ಕೊನೆಗೂ ತಡೆಗೋಡೆ ನಿರ್ಮಿಸಲಾಗಿದೆ. ಇದು ರಿಪೋರ್ಟರ್ ಕರ್ನಾಟಕ ವರದಿಯ ಫಲಶ್ರುತಿ ಆಗಿದೆ.
ಅಧಿಕಾರಿಗಳಲ್ಲಿ ನಾಗರಿಕರು ಹಲವು ಬಾರಿ ವಿನಂತಿ ಮಾಡಿದರೂ ಕ್ಯಾರೇ ಮಾಡದಿರುವುದನ್ನು ಕಂಡು ನಾಗರಿಕರು ಮಾಧ್ಯಮಗಳ ಮೊರೆ ಹೋಗಿದ್ದರು.
ತಡೆಗೋಡೆ ಇಲ್ಲದೆ ಸಂಭವಿಸಬಹುದಾದ ಅಪಾಯದ ಕುರಿತು ರಿಪೋರ್ಟರ್ ಕರ್ನಾಟಕ ಚಿತ್ರ ಸಹಿತ ಸಮಗ್ರ ವರದಿ ಪ್ರಕಟಿಸಿತ್ತು.
ತಡೆಗೋಡೆ ನಿರ್ಮಿಸದೇ ಗುತ್ತೇದಾರು ಹಾಗೆ ಕೆಲಸ ನಿಲ್ಲಿಸಿದ್ದರು. ಬಿಲ್ ಕೂಡ ಪಾವತಿ ಆಗಿತ್ತು.
ಎಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನಕ್ಕೆ ಬಂದಿರಲಿಲ್ಲ. ರಿಪೋರ್ಟರ್ ಕರ್ನಾಟಕ ಸೇರಿದಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಸೇತುವೆಗೆ ತಡೆಗೋಡೆ ನಿರ್ಮಿಸಿದ್ದಾರೆ.
ತಡೆಗೋಡೆ ಇಲ್ಲದ ಸೇತುವೆ ತುಂಬಾ ಅಪಾಯಕಾರಿಯಾಗಿತ್ತು. ವಾಹನ ಸವಾರರು ಸ್ವಲ್ಪ ಯಾಮಾರಿಸಿದರೂ ಗುಂಡಿಗೆ ಬೀಳುವುದು ಖಂಡಿತಾ. ಅದಲ್ಲದೆ ಸಮೀಪದಲ್ಲೇ ಶಾಲೆ ಇದೆ. ಇಲ್ಲಿನ ನೂರಾರು ಮಕ್ಕಳು ಇದೇ ದಾರಿಯಾಗಿ ತೆರಳುತ್ತಿದ್ದರು. ಕೆಲವು ಮಕ್ಕಳು ಕುತೂಹಲದಿಂದ ಕೆಳಗೆ ಇಣುಕುವ ಕೆಲಸ ಮಾಡುತ್ತಿದ್ದರು.