ಇತ್ತೀಚಿನ ಸುದ್ದಿ
ಉಡುಪಿ ಜಿಲ್ಲಾದ್ಯಂತ ಭಾರಿ ಮಳೆ: ಅಜೆಕಾರಿನಲ್ಲಿ ಮನೆಗೆ ಸಿಡಿಲು ಬಡಿದು ಸುಟ್ಟು ಹೋದ ಫ್ರಿಜ್, ಟಿವಿ
23/10/2021, 19:40
ಉಡುಪಿ(reporterkarnataka.com) : ಉಡುಪಿ ಜಿಲ್ಲೆಯಾದ್ಯಂತ ಭಾರಿ ಗುಡುಗು ಮಳೆ ಯಾಗುತ್ತಿದ್ದು, ಭಾರ ಹಾನಿ ಸಂಭವಿಸಿದೆ.
ಅಜೆಕಾರು ಕೈಕಂಬ ಸಮೀಪದ ಕಿನಿಲ ರತ್ನಾವತಿ ನಾಯಕ್ ಅವರ ಮನೆಗೆ ಇಂದು ಮುಂಜಾನೆ ಸಿಡಿಲು ಬಡಿದು ಮೀಟರ್ ಬಾಕ್ಸ್ , ಸ್ವಿಚ್ ಫ್ರಿಜ್ ,ಟಿವಿ , ಟ್ಯೂಬ್ ಸೇರಿದಂತೆ ಎಲ್ಲವು ಸುಟ್ಟು ಹೋಗಿವೆ. ಮನೆಯ 100 ಹೆಚ್ಚು ಹಂಚುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಭಾರಿ ನಷ್ಟ ಸಂಭವಿಸಿದೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.