ಇತ್ತೀಚಿನ ಸುದ್ದಿ
ಸರ್ವಾಲಂಕೃತೆ ಕುದ್ರೋಳಿ ಶಾರದಾ ಮಾತೆ: ವಿವಿಧ ತಂಡಗಳಿಂದ ದೇವಿ ಎದುರು ‘ಪಿಲಿನಲಿಕೆ’ ಸೇವೆ
15/10/2021, 20:05
ಮಂಗಳೂರು(reporterkarnataka.com): ಮಂಗಳೂರು ದಸರಾ ಮಹೋತ್ಸವ ಇಂದು ಸಮಾಪನಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಶಾರದಾ ದೇವಿ ಸರ್ವಾಲಂಕಾರದಿಂದ ಕಂಗೊಳಿಸುತ್ತಿದ್ದಾರೆ.





ದಸರಾ ಮಹೋತ್ಸವದಲ್ಲಿ ಪೂಜಿತ ಶಾರದಾ ಮಾತೆಗೆ ಮಹಾಪೂಜೆ ನಡೆದ
ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ.
ದಸರಾ ಪಿಲಿನಲಿಕೆ: ಸರಕಾರದ ಕೋವಿಡ್ ಮಾರ್ಗಸೂಚಿ ಹಿನ್ನಲೆಯಲ್ಲಿ ಈ ಬಾರಿಯೂ ಮಂಗಳೂರು ದಸರಾ ಮೆರವಣಿಗೆ ಇರುವುದಿಲ್ಲ. ಆದುದರಿಂದ ಮೆರವಣಿಗೆಯಲ್ಲಿ ವರ್ಷಂಪ್ರತಿ ದೇವಿಗೆ ಹುಲಿನರ್ತನ ಮೂಲಕ ಸೇವೆ ನೀಡುವ ತಂಡಗಳಿಗೆ ಇಂದು ಮಧ್ಯಾಹ್ನ 3.30ರಿಂದ 7ರವರೆಗೆ ದಸರಾ ಪಿಲಿನಲಿಕೆ ಪ್ರದರ್ಶನ ನೀಡಿದವು.
ಕ್ಷೇತ್ರದ ಸಂತೋಷಿ ಕಲಾ ಮಂಟಪದ ಎದುರು ಹಾಕಿರುವ ಬೃಹತ್ ವೇದಿಕೆಯಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು.














