2:18 AM Wednesday5 - November 2025
ಬ್ರೇಕಿಂಗ್ ನ್ಯೂಸ್
Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ

ಇತ್ತೀಚಿನ ಸುದ್ದಿ

ಅಂದವಾದ ಸುಂದರ ಕಣ್ಣನ್ನು ಜೋಪಾನವಾಗಿ ರಕ್ಷಿಸಿ: ಇಂದು ವಿಶ್ವ ದೃಷ್ಟಿ ದಿನ

14/10/2021, 07:59

ದೃಷ್ಟಿ ಎಷ್ಟು ಮುಖ್ಯ ವೆಂದರೆ ನಾವು ಇಡುವ ಪ್ರತಿಯೊಂದು ಹೆಜ್ಜೆಗು ದೃಷ್ಟಿ ಬೇಕೇ ಬೇಕು. ಕಣ್ಣಿನ ದೃಷ್ಟಿಯಿಂದ ನಾವು ಇಡೀ ಲೋಕವನ್ನೇ ಕಾಣುತ್ತೇವೆ. ದೃಷ್ಟಿ ಇಲ್ಲದ ಮನುಷ್ಯ ವ್ಯರ್ಥ. ಅವನು/ ಅವಳು ಏನನ್ನೂ ಕಾಣಲು ಸಾಧ್ಯವಿಲ್ಲ. ಕತ್ತಲೆಯ ಸಮಯವನ್ನು ಬಿಟ್ಟು ಮಿಕ್ಕಿದ ಎಲ್ಲಾ ಸಮಯದಲ್ಲಿ ಎಲ್ಲವನ್ನೂ ವೀಕ್ಷಿಸುವ ಶಕ್ತಿ ಕಣ್ಣಿಗೆ ಇದೆ. ಕಣ್ಣು ಇಲ್ಲದ ಮನುಷ್ಯ ತನ್ನನ್ನು ತಾನು ನೋಡಿಕೊಳ್ಳಲು ಅಸಾಧ್ಯ. ದೃಷ್ಟಿ ಸಮಸ್ಯೆ ಇದ್ದರೆ ಅದನು ಹೇಗಾದರು ಮಾಡಿ ಸರಿ ಪಡಿಸಲಾಗುತ್ತದೆ ಆದರೆ ಕಣ್ಣೇ ಇಲ್ಲವಾದರೆ ಏನು ಮಾಡಲು ಸಾಧ್ಯವಿಲ್ಲ. ದೃಷ್ಟಿಗೆ ಮನುಜ, ಪ್ರಾಣಿ, ಜಲಚರ, ಹೂ, ಗಿಡ, ಹಣ್ಣು, ಕಾಯಿ, ನದಿ ಸಾಗರ ಎಲ್ಲವೂ ಕಾಣುತ್ತದೆ. ಕತ್ತಲೆ ಹೊರತುಪಡಿಸಿದರೆ ಎಲ್ಲಾ ಸಮಯದಲ್ಲೂ ಎಲ್ಲವನ್ನು ವೀಕ್ಷಿಸುವ ಸಾಮರ್ಥ್ಯ ಕಣ್ಣಿನ ದೃಷ್ಟಿಗಿದೆ. ಕಣ್ಣಿನ ದೃಷ್ಟಿ ಸಮರ್ಪಕವಾಗಿದ್ದರೆ ಮನುಷ್ಯನಿಗೆ ಅದುವೇ ದೊಡ್ಡ ವರದಾನ. ಆದರೆ ಕೆಲವರಿಗೆ ಈ ದೃಷ್ಟಿ ಸಾಮರ್ಥ್ಯದ ಕೊರತೆಯಿರುತ್ತದೆ. ಅದರಲ್ಲೂ ದೃಷ್ಟಿಹೀನರಿಗೆ ಅಥವಾ ಅಂಧರಿಗೆ ಬಾಳೆಲ್ಲಾ ಕತ್ತಲೆಯೇ. ಇದನ್ನು ಪರಿಗಣಿಸಿಯೇ ಕಣ್ಣಿನ ಆರೋಗ್ಯದ ಮಹತ್ವವನ್ನು ಸಾರಲು ಪ್ರತಿವರ್ಷ ಅಕ್ಟೋಬರ್‌ ತಿಂಗಳ ಎರಡನೇ ಗುರುವಾರವನ್ನು ವಿಶ್ವ ದೃಷ್ಟಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್‌ 14 ರಂದು ವಿಶ್ವ ದೃಷ್ಟಿ ದಿನ ಅಥವಾ ವರ್ಲ್ಡ್‌ ಸೈಟ್‌ ಡೇಯನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ದೇವರು ನಮಗೆ ಕಣ್ಣು ಕೊಟ್ಟಿದ್ದಾರೆ ಆ ಕಣ್ಣನ್ನು ನಾವು ಆರೋಗ್ಯವಾಗಿ ನೋಡಿಕೊಳ್ಳಬೇಕು. ಮೊಬೈಲ್ ನೋಡುವುದರಿಂದ ದೃಷ್ಟಿ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಆದುದರಿಂದ ನಾವು ಎಚ್ಚರದಿಂದ ಮಾಧ್ಯಮದ ಬಳಕೆ ಮಾಡಬೇಕು ಹಾಗೂ ನಮ್ಮ ಆರೋಗ್ಯದ ರಕ್ಷಣೆಯನ್ನೂ ಮಾಡಬೇಕು. ನಮಗೆ ಕಣ್ಣು ಇದ್ದರೆ ದೃಷ್ಟಿ ಇರುತ್ತದೆ ದೃಷ್ಟಿ ಇದ್ದರೆ ಇಡೀ ಸೃಷ್ಟಿಯನ್ನೇ ನೋಡಬಹುದು.ಆ ಸೃಷ್ಟಿಯನ್ನು ನೋಡಿ ನಾವು ಸುಖಮಯ ಜೀವನವನ್ನು ನಡೆಸಲು ಸಾಧ್ಯ. ಅಂದವಾದ ಸುಂದರ ಕಣ್ಣುಗಳನ್ನು ಜೋಪಾನವಾಗಿ ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸತ್ತ ಮೇಲೆ ನಮ್ಮ ಕಣ್ಣು ಸರ್ವನಾಶವಾಗಿ ಹೋಗುತ್ತದೆ. ಆದುದರಿಂದ ನಾವು ನಮ್ಮ ಕಣ್ಣುಗಳನ್ನ ದಾನ ಮಾಡಿ ಅಂದರ ಬಾಳಿನಲ್ಲಿ ಬೆಳಕಾಗಿ ಬರುವಂತೆ ಮಾಡಿ ನಮಗೆ ದೇವರು ಕೊಟ್ಟ ಈ ಪುಣ್ಯ ಜೀವನವನ್ನು ಸಾರ್ಥಕ ಗೊಳಿಸೋಣ. ಆಗ ನಮ್ಮ ಬಾಳು ಸಂಪೂರ್ಣಗೊಳ್ಳುತ್ತದೆ. ಆಕಾಶದಲ್ಲಿ ಮಿನುಗುವ ನಕ್ಷತ್ರವಾಗಲು ಸಾಧ್ಯವಿಲ್ಲದಿದ್ದರೂ, ಕತ್ತಲೆ ಕೋಣೆಯನ್ನು ಬೆಳಗುವ ದೀಪವಾಗಲು ಪ್ರಯತ್ನಿಸೋಣ.

✍️

ಇತ್ತೀಚಿನ ಸುದ್ದಿ

ಜಾಹೀರಾತು